ಅಮ್ಮಾ ಎಂದರೆ ಅಮೃತ. ಆಕೆಗೆ ಸರಿಸಮವಾದದ್ದು ಈ ಭೂಮಿ ಮೇಲೆ ಯಾವುದೂ ಇಲ್ಲ. ಪ್ರತಿಯೊಬ್ಬರ ಬದುಕಿಗೂ ಅಮ್ಮನೇ ಪ್ರಪಂಚ. ಅವಳ ತ್ಯಾಗ, ಶ್ರಮ ಜೀವನಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಅದು ಕಡಿಮೆಯೇ. ಇನ್ನು ಅವಳನ್ನು ಹೊಗಳಲು ಪದಗಳೇ ಇಲ್ಲ. ಹಾಗಾಗಿ ಅವಳಿಗಾಗಿಯೇ ಮೀಸಲಿಟ್ಟಿರುವ ದಿನವೇ ತಾಯಂದಿರ ದಿನ.
ತಾಯಿ ತನ್ನ ಮಗುವಿಗೆ ತೋರುವ ಪ್ರೀತಿ, ಕಾಳಜಿ ಮತ್ತು ತ್ಯಾಗವನ್ನು ಗುರುತಿಸುವ ದಿನವಾಗಿ ತಾಯಿಯ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯAತ ಜನರು ತನ್ನ ತಾಯಿಯ ನಿಸ್ವಾರ್ಥ ಪ್ರೀತಿಗಾಗಿ ಈ ದಿನದಂದು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಆ ತಾಯಿಗೆ ಹತ್ತು ನಿಮಿಷ ಕೂಡ ಅವಳಿಗೆ ತನ್ನದೇ ಆದ ಅಭಿರುಚಿಗಾಗಿ, ಓದಿಗಾಗಿ ವ್ಯಯಿಸಲು ಉಳಿದಿರುವುದಿಲ್ಲ. ಇನ್ನೂ ಹೊಸ ವಿಚಾರಗಳು, ವಿವೇಚನೆಗಳು, ಅವಳಿಗೆ ಮುಟ್ಟುವುದು ಕಷ್ಟಕರವಾದ ಸಂಗತಿ.
ಮಕ್ಕಳ ಬೇಕು ಬೇಡಗಳನ್ನು ಈಡೇರಿಸುತ್ತಾ, ಮನೆಯಲ್ಲಿದ್ದವರಿಗೆಲ್ಲಾ ತಾಯಿಯಂತಿರುವ ಅಮ್ಮ ಮನೆಯಲ್ಲಿ ಏನೂ ಅಪೇಕ್ಷಿಸದೆ ಯಾವ ರಜೆಯೂ ಇಲ್ಲದೆ ಸದಾ ಸೈನಿಕಳಂತೆ ದುಡಿಯುವಳು. ಎಲ್ಲ ಧರ್ಮಗಳೂ ತಾಯಿ ದೇವರ ಸಮಾನವೆಂದಿವೆ.
ಕುಟುAಬದಲ್ಲಿ ತಾಯಿಯ ಗೌರವಾರ್ಥವಾಗಿ ತಾಯಿಯ ದಿನವನ್ನು ಆಚರಿಸಲಾಗುತ್ತದೆ. ಮಾತೃತ್ವ ಹಾಗೂ ತಾಯಿಯ ಬಂಧಗಳನ್ನು ಗೌರವಿಸಲು ಮತ್ತು ಸಮಾಜದಲ್ಲಿ ತಾಯಂದಿರ ಮೇಲೆ ಪ್ರಭಾವ ಬೀರಲು ಸಹ ಇದನ್ನು ಆಚರಿಸಲಾಗುತ್ತದೆ. ತಾಯಿ ತನಗಾಗಿ ಏನನ್ನೂ ಬಯಸದವಳು. ತನಗಿಲ್ಲವೆಂದು ಎಂದೂ ಕೊರಗದವಳು. ಬಿದ್ದಾಗ ಮೇಲೆತ್ತುವಳು, ಸೋತಾಗ ಸದಾ ಜೊತೆಗೆ ನಿಲ್ಲುವಳು, ಮಕ್ಕಳ ನಗುವಲ್ಲೇ ತನ್ನ ಖುಷಿ ಕಾಣುವಳು ತಾಯಿ. ಮಕ್ಕಳಿಗಾಗಿ ಇಡೀ ಜೀವನ ಮೀಸಲಿಟ್ಟವಳು ಆಕೆ.
ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದು ಎಲ್ಲರೂ ಹೇಳುತ್ತಾರೆ. ಆದರೆ ದೇವರು ಯಾರೂ ಎಂದು ಒಮ್ಮೆಯೂ ನಾವು ನೋಡಿರುವುದಿಲ್ಲ. ತಾಯಿಯು ತನ್ನ ಮಕ್ಕಳನ್ನು ಸಾಕಲು ಏನೆಲ್ಲ ತ್ಯಾಗ ಮಾಡುತ್ತಾಳೆ. ಆದರೆ ಅದನ್ನು ಅವಳು ತ್ಯಾಗ ಎಂದು ಪರಿಗಣಿಸುವುದಿಲ್ಲ. ತನ್ನ ಮಕ್ಕಳ ಸುಖದಲ್ಲಿ ತನ್ನ ಸಂತೋಷವನ್ನು ಕಾಣುತ್ತಾಳೆ. ತನ್ನ ಮಕ್ಕಳ ಅಭಿವೃದ್ಧಿಗಾಗಿ ಎಷ್ಟೆಲ್ಲ ಶ್ರಮಿಸುತ್ತಾಳೆ. ಅದರಿಂದ ಯಾವ ಪ್ರತಿಫಲವನ್ನೂ ನಿರೀಕ್ಷಿಸುವುದಿಲ್ಲ. ಮಕ್ಕಳಿಗೆ ನೋವಾದರೆ ಮೊದಲು ನೋವಾಗುವುದು ತಾಯಿಗೆ. ತಾಯಿಯ ಪ್ರೀತಿ ಅಪಾರವಾದುದು.
ಮಾತೃತ್ವ ಅದೊಂದು ಪ್ರತಿ ಹೆಣ್ಣಿನೊಳಗಿನ ಜೀವತಂತು. ಅದನ್ಯಾರು ಹೇಳಿಕೊಡಬೇಕಿಲ್ಲ. ಹೇಳಿಸಿಕೊಳ್ಳಬೇಕಿಲ್ಲ. ತಾಯಿಯಾದವಳ ಪಾಲಿಗೆ ಅಲ್ಲಿಯವರೆಗೆ ಇದ್ದ ಎಲ್ಲಾ ಪ್ರಪಂಚಗಳು ಕಳೆದು ಮಗುವೇ ಪ್ರಪಂಚವಾಗುತ್ತದೆ. ಮಗುವನ್ನು ಬಿಟ್ಟರೆ ಅಲ್ಲಿ ಬೇರೆಯಾರೂ ಪ್ರಮುಖರೇ ಅಲ್ಲ. ಅವಳ ಬದುಕಿನ ಮುಖ್ಯಾತಿಮುಖ್ಯ ಅವಳ ಮಗುವಾಗಿಬಿಡುತ್ತದೆ. ಜಗತ್ತಿನಲ್ಲಿ ಕಲ್ಮಶವಿಲ್ಲದ ನಗು ಮಗುವಿನದಾದರೆ ಅದಕ್ಕಿಂತ ನಿಷ್ಕಲ್ಮಶ ಪ್ರೀತಿ ತಾಯಿಯರು. ಒಟ್ಟಾರೆ ತಾಯಿ ಎಂದರೆ ಅವಳ ಪ್ರೀತಿ ಎಂದರೆ ಅದರ ಮುಂದೆ ಪ್ರಕೃತಿಯೇ ಶರಣಾಗಿ ಬಿಡು ವಂತಹ ಪ್ರಚಂಡ ಶಕ್ತಿ. ತಾಯಿಯ ಪ್ರೀತಿ ಅನುಭವಿಸಲು ಭಗವಂತನೇ ಮತ್ತೆ ಮತ್ತೆ ಜನಿಸಿದ. ತಾಯಿಯ ಮಮತೆಯ ಶಕ್ತಿಯೇ ಅಂತಹುದು.
ಸAಬAಧಗಳಲ್ಲೇ ಅತ್ಯಂತ ಭಾವನೀಯ ಸಂಬAಧವೆAದರೆ ಅದುವೆ ತಾಯಿ - ಮಕ್ಕಳ ಸಂಬAಧ. ತನ್ನ ಮಗುವನ್ನು ೯ ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು ಪೋಷಿಸುವಳು. ಮಗುವಿನ ಮೊದಲ ತೊದಲ ನುಡಿ ಕೂಡ ಅಮ್ಮಾ. ನಾವು ಅತ್ತಾಗ ನಮ್ಮನ್ನು ಸಂತೈಸಿ, ನಾವು ನಕ್ಕಾಗ ನಮ್ಮೊಂದಿಗೆ ನಗುವ ಪ್ರೀತಿಯ ತಾಯಿಗೆ ಎಷ್ಟೇ ಉಡುಗೊರೆಯನ್ನು ಕೊಟ್ಟರೂ, ಎಷ್ಟೇ ಕೃತಜ್ಞತೆ ಯನ್ನು ಸಲ್ಲಿಸಿದರೂ ಅದು ಕಡಿಮೆಯೇ.
- ವಸಂತಿ ರವೀಂದ್ರ, ಸೋಮವಾರಪೇಟೆ.