ರೆಡ್‌ಕ್ರಾಸ್ ಸಂಸ್ಥೆ ಸ್ವಿಸ್ ದೇಶದ ಡಾ. ಜಿನ್ ಹೆನ್ರಿ ಡ್ಯೂನಂಡ್ ಎಂಬವರಿAದ ಅಸ್ಥಿತ್ವಕ್ಕೆ ಬಂದಿತು. ೧೮೨೮ ರಲ್ಲಿ ಜಿನಿವಾದ ಶ್ರೀಮಂತ ಕುಟುಂಬವೊAದರಲ್ಲಿ ಹೆನ್ರಿ ಜನಿಸಿದ. ತಂದೆ - ತಾಯಿಯರ ಆಸೆಯಂತೆ ಮಗ ಒಬ್ಬ ಉನ್ನತ ಅಧಿಕಾರಿಯಾಗಿ ಪ್ರಸಿದ್ಧ ವ್ಯಕ್ತಿಯಾಗಬೇಕೆಂಬುದು ಅವರ ಆಸೆಯಾಗಿತ್ತು. ಪದವಿಗಳಿಸಿದ ನಂತರ ಜಿನೀವಾದಲ್ಲಿ ತನ್ನ ವೃತ್ತಿ ಆರಂಭಿಸಿದ. ಹೆನ್ರಿಯ ಹೃದಯ ವೈಶಾಲ್ಯತೆ, ಬಡವರ ಬಗ್ಗೆ ಇರುವ ಪರೋಪಕಾರ ಗುಣ ಈ ಸಂಸ್ಥೆ ಸ್ಥಾಪನೆಗೆ ಕಾರಣವಾಯಿತು. ಇಟಲಿ ದೇಶದ ಸೋಲ್‌ಪಿರಿಯೋ ಎಂಬ ಪಟ್ಟಣದಲ್ಲಿ ಕೊಳಚೆ ಪ್ರದೇಶದಲ್ಲಿ ಬಡವರು ಅನೇಕ ರೋಗಗಳಿಂದ ನರಳುತ್ತಿದ್ದರು. ಅಲ್ಲಿ ಡ್ಯೂನಾಂಡ್ ಎಂಬ ಆಸ್ಪತ್ರೆ ಆರಂಭಿಸಿ ದಿನಕ್ಕೆ ೧೪ ರಿಂದ ೧೫ ಗಂಟೆಗಳವರೆಗೆ ಬಡ ರೋಗಿಗಳ ಸೇವೆ ಉಚಿತವಾಗಿ ಮಾಡಲಾರಂಭಿಸಿದರು.

೧೮೫೮ ರಲ್ಲಿ ಫ್ರಾನ್ಸ್ ಮತ್ತು ಆಸ್ಟಿçÃಯಾ ದೇಶದ ನಡುವೆ ಭೀರಕ ಯುದ್ಧ ಸಂಭವಿಸಿತು. ಆಗ ಡ್ಯೂನಂಡ್ ಗಾಯಗೊಂಡವರ ಸೇವೆ ಮಾಡಿದರು. ೧೮೬೨ ರಲ್ಲಿ ‘ಸೊವೆನೀಸ್ ಆಫ್ ಸೋಲ್ ಫೆರಿನೋ’ ಎಂಬ ಗ್ರಂಥವೊAದನ್ನು ಪ್ರಕಟಿಸಿದರು. ಜನರ ಸೇವೆಗಾಗಿ ಶಾಶ್ವತ ಸಂಸ್ಥೆ ಕಟ್ಟುವ ಉದ್ದೇಶದಿಂದ ೧೮೬೩ ರಲ್ಲಿ ಜಿನಿವಾದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಸ್ಥಾಪನೆಯಾಯಿತು. ೧೯೧೦ ರಲ್ಲಿ ಹೆನ್ರಿ ತನ್ನ ೮೨ನೇ ವಯಸ್ಸಿನಲ್ಲಿ ಮೃತಪಟ್ಟರು. ಆದರೆ ಅವರ ನಿಸ್ವಾರ್ಥ ಸೇವೆಯಿಂದ ರಕ್ತನಿಧಿ ಸಂಸ್ಥೆ ಹುಟ್ಟಿತು. ರಕ್ತದ ಅವಶ್ಯಕತೆಯಿರುವವರಿಗೆ ರಕ್ತದಾನ ಮಾಡಬೇಕು.

ಇಂದಿಗೂ ರೆಡ್‌ಕ್ರಾಸ್ ಸಂಸ್ಥೆ ವಿಶ್ವದಾದ್ಯಂತ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ. ರಕ್ತನಿಧಿ, ಗಾಯಾಳುಗಳ ಸೇವೆ ಮುಂತಾದ ತುರ್ತು ಸಂದರ್ಭಗಳಲ್ಲೂ ಸೇವೆ ಸಲ್ಲಿಸಿ ಸಾರ್ಥಕತೆ ಮೆರೆದಿದೆ.

- ಹರೀಶ್ ಸರಳಾಯ, ಮಡಿಕೇರಿ, ಮೊ. ೯೭೩೧೮೧೦೨೫೦