ಗುಡ್ಡೆಹೊಸೂರು, ಮೇ ೭: ಸಮೀಪದ ಬಸವನಹಳ್ಳಿಯಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಮಡಿಕೇರಿಯಿಂದ ಕುಶಾಲನಗರದತ್ತ ತೆರಳುತ್ತಿದ್ದ ಕಾರು (ಕೆ.ಎ. ೧೨ ಎಂ.ಎ. ೬೦೨೫) ಡಿಕ್ಕಿಯಾಗಿದ್ದು, ಕಾರು ಚಾಲಕ ಅರಣ್ಯ ಇಲಾಖಾ ನಿವೃತ್ತ ಚಾಲಕ ಚಂದ್ರ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.