ಮಡಿಕೇರಿ, ಮೇ ೬: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ಕಿರಿಯ ಪವರ್ ಮ್ಯಾನ್ ಹುದ್ದೆಗೆ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ನಿಗಮ ಕಾರ್ಯಾಲಯ, ನಂ. ೨೯, ವಿಜಯನಗರ ೨ನೇ ಹಂತ, ಹಿನಕಲ್, ಮೈಸೂರು-೫೭೦೦೧೭ ಇಲ್ಲಿ ತಾ. ೮ ರಂದು ಬೆಳಿಗ್ಗೆ ೯ ಗಂಟೆಗೆ ಕೌನ್ಸಿಲಿಂಗ್ ಏರ್ಪಡಿಸಲಾಗಿದ್ದು, ಅಭ್ಯರ್ಥಿಗಳು ಹಾಜರಾಗಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ತಿತಿತಿ.ಛಿesಛಿmಥಿsoಡಿe.oಡಿg ಸಂಪರ್ಕಿಸಬಹುದು ಎಂದು ಸೆಸ್ಕ್ ಇಇ ಅಶೋಕ್ ಅವರು ತಿಳಿಸಿದ್ದಾರೆ.