ಸೋಮವಾರಪೇಟೆ, ಮೇ ೬: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ಸ್ವಾತಂತ್ರö್ಯದ ೭೫ನೇ ವರ್ಷದ ಅಮೃತ ಮಹೋತ್ಸವ ಅಂಗವಾಗಿ ತಾ. ೯ ರಂದು ಪಟ್ಟಣದ ಪ್ರಜಾಪಿತ ವಿಶ್ವವಿದ್ಯಾಲಯ ಕಚೇರಿಯಲ್ಲಿ ಆತ್ಮ ನಿರ್ಭರ ಕೃಷಿಕರ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕರ್ತರಾದ ಮುದ್ದಪ್ಪ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಕೃಷಿ ಮತ್ತು ಗ್ರಾಮ ವಿಕಾಸ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಕೃಷಿ ಕ್ಷೇತ್ರದ ಪುನರುತ್ಥಾನ ಹಾಗೂ ಕೃಷಿಕರಲ್ಲಿ ಆತ್ಮನಿರ್ಭರತೆ ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ಆಯೋಜಿಸಲಾಗಿದೆ ಎಂದು ಮುದ್ದಪ್ಪ ಮಾಹಿತಿ ನೀಡಿದ್ದಾರೆ.