ಮಡಿಕೇರಿ,ಮೇ ೬: ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಎಂ.ಎಸ್. ರಾಜೇಂದ್ರ ಕುಮಾರ್ ವಿರುದ್ಧ ಕಾಂಗ್ರೆಸ್ ಮುಖಂಡರಾದ ತೆನ್ನಿರಾ ಮೈನಾ ಹಾಗೂ ಪುಲಿಯಂಡ ಜಗದೀಶ್ ಮಾಹಿತಿ ಹಕ್ಕು ಅಧಿನಿಯಮ ೨೦೦೫ ಸೆಕ್ಷನ್ ೧೮(೧)ರಡಿಯಲ್ಲಿ ಫಿರ್ಯಾದು ಸಲ್ಲಿಸಿದ್ದಾರೆ.

ಮಾಹಿತಿ ಹಕ್ಕು ಅಧಿನಿಯಮ ಸೆಕ್ಷನ್ ೬(೧) ರಡಿಯಲ್ಲಿ ಮಡಿಕೇರಿ ನಗರಸಭೆಗೆ ಸಂಬAಧಿಸಿದAತೆ ಕೆಲವೊಂದು ಮಾಹಿತಿಗಳನ್ನು ಕೋರಿದ್ದು ಕಾಯ್ದೆಯಲ್ಲಿ ನಮೂದಿಸಿರುವ ಅವಧಿಯಲ್ಲಿ ನೀಡದೇ ಇರುವುದರಿಂದ ಸೆಕ್ಷನ್ ೧೮(೧) ಸಿ ಯ ಕಾರಣಗಳನ್ನು ಉಲ್ಲೇಖಿಸಿ ಮಾಹಿತಿ ಆಯೋಗಗಳ ಅಧಿಕಾರಗಳು ಮತ್ತು ಕಾರ್ಯಗಳು, ಮೇಲ್ಮನವಿ ಮತ್ತು ದಂಡನೆಗಳ ಅನ್ವಯ ಫಿರ್ಯಾದು ಸಲ್ಲಿಸಿದ್ದು ಅಧಿನಿಯಮದ ಸೆಕ್ಷನ್ ೧೯(೮)ಹಾಗೂ ಸೆಕ್ಷನ್ ೨೦ ರಲ್ಲಿ ಸೂಚಿಸಿರುವಂತೆ ಗರಿಷ್ಠ ಪರಿಹಾರ ( ದಿನವೊಂದಕ್ಕೆ ರೂ.೨೫೦ ಅಥವಾ ಗರಿಷ್ಠ ರೂ.೨೫,೦೦೦) ವನ್ನು ತಮ್ಮ ಫಿರ್ಯಾದುನಲ್ಲಿ ಕೋರಿದ್ದಾರೆ.

ತಾವು ಕೋರಿರುವ ಮಾಹಿತಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಿದ್ದು ಮಡಿಕೇರಿ ನಗರಸಭೆಯ ಅಧಿಕಾರಿಗಳು ತಮ್ಮ ಲೋಪಗಳನ್ನು ಮರೆಮಾಚಲು ಯತ್ನಿಸುತ್ತಿದ್ದು ಪ್ರಥಮ ಮೇಲ್ಮನವಿಯ ಅವಧಿಯಲ್ಲಿ ಪ್ರಕರಣ ಇತ್ಯರ್ಥವಾಗದಿದ್ದಲ್ಲಿ ಸೆಕ್ಷನ್ ೧೯(೩) ಹಾಗೂ ನಿಯಮ ೭ ರಡಿಯಲ್ಲಿ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಹಾಗೂ ಸಂವಿಧಾನದ ವಿಧಿ ೨೨೬ ರ ಕರ್ನಾಟಕ ರಾಜ್ಯ ಹೈ ಕೋರ್ಟ್ನಲ್ಲಿ ಹಾಗೂ ವಿಧಿ ೩೨ ರ ಅನುಸಾರ ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಮೈನಾ ಮತ್ತು ಜಗದೀಶ್ ತಿಳಿಸಿದ್ದಾರೆ.