ಮಡಿಕೇರಿ, ಮೇ ೪: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಗೌಡ ಜನಾಂಗದ ನಡುವೆ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೨ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬದ ಅಂತಿಮ ಪಂದ್ಯಾಟ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ತಾ.೫ರಂದು(ಇAದು) ನಡೆಯಲಿದೆ.

ಕಳೆದ ಏಪ್ರಿಲ್ ೨೬ರಿಂದ ಆರಂಭಗೊAಡಿರುವ ಪಂದ್ಯಾವಳಿಯಲ್ಲಿ ೮೮ ಕುಟುಂಬ ತಂಡಗಳು ಭಾಗವಹಿಸಿದ್ದು, ಈಗಾಗಲೇ ಪ್ರಿ ಕ್ವಾರ್ಟರ್ ಹಂತದ ಪಂದ್ಯಗಳು ಮುಕ್ತಾಯವಾಗಿವೆ. ಇಂದು ಮಧ್ಯಾಹ್ನದ ಬಳಿಕ ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ನಡೆಯಬೇಕಿತ್ತಾದರೂ ಮಳೆಯಿಂದಾಗಿ ಅಡ್ಡಿಯುಂಟಾಗಿ ಪಂದ್ಯಾವಳಿಯನ್ನು ಮುಂದೂಡಲಾಯಿತು. ತಾ.೫ರಂದು(ಇAದು) ಬೆಳಿಗ್ಗೆಯಿಂದ ಕ್ವಾರ್ಟರ್ ಫೈನಲ್ಸ್ ನಡೆಯಲಿದ್ದು, ಅದರಲ್ಲಿ ವಿಜೇತರಾಗುವ ತಂಡಗಳು ಸೆಮಿಫೈನಲ್ಸ್ನಲ್ಲಿ ಆಡಲಿವೆ. ಗೆಲ್ಲುವ ತಂಡಗಳು ಪ್ರತಿಷ್ಠಿತ ಕಪ್‌ಗಾಗಿ ಸೆಣಸಾಡಲಿವೆ.

ಮುಕ್ತಾಯ ಸಮಾರಂಭ

ಪAದ್ಯಾವಳಿಯ ಮುಕ್ತಾಯ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಸಂಜೆ ೪ಗಂಟೆಗೆ ನಡೆಯಲಿದೆ.

(ಮೊದಲ ಪುಟದಿಂದ) ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕುರುಂಜಿ ರೇಣುಕಾಪ್ರಸಾದ್ ಆಗಮಿಸುವರು. ಅತಿಥಿಗಳಾಗಿ ಶಾಸಕರುಗಳಾದ ಮಂಡೇಪAಡ ಪಿ.ಅಪ್ಪಚ್ಚುರಂಜನ್, ಕೊಂಬಾರನ ಜಿ.ಬೋಪಯ್ಯ, ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ವಿಧಾನ ಪರಿಷತ್ ಸದಸ್ಯರುಗಳಾದ ಶಾಂತೆಯAಡ ವೀಣಾ ಅಚ್ಚಯ್ಯ, ಮಂಡೇಪAಡ ಪಿ.ಸುಜಾ ಕುಶಾಲಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಕರ್ನಾಟಕ ಅರೆಬಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಬೋಪಯ್ಯ, ನಗರಸಭಾ ಸದಸ್ಯರುಗಳಾದ ಮಹೇಶ್ ಜೈನಿ, ಕುಟ್ಟನ ಶ್ವೇತಾ ಪ್ರಶಾಂತ್, ಸತೀಶ್‌ಕುಮಾರ್, ಜಾತ್ಯತೀತ ಜನತಾದಳ ಅಧ್ಯಕ್ಷ ಕೆ.ಎಂ.ಗಣೇಶ್, ದಾನಿಗಳಾದ ಡಾ. ಮಂತರ್ ಗೌಡ, ಉದ್ಯಮಿ ಬೆಪ್ಪುರನ ಅವಿನಾಶ್ ಗೌಡ ಕೇಸರಿ, ಕೊಡಗು ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಸ್ವಾಮಿ ಅವರುಗಳು ಉಪಸ್ಥಿತರಿರುವರು.

ಸಾಂಸ್ಕೃತಿಕ ಸಂಜೆ

ಸಮಾರೋಪ ಸಮಾರಂಭದ ಬಳಿಕ ಮಡಿಕೇರಿಯ ಕಲಾ ಕಾವ್ಯ ನಾಟ್ಯ ಶಾಲೆಯ ನಾಟ್ಯಗುರು, ವಿಧುಷಿ ದುಗ್ಗಳ ಕಾವ್ಯಶ್ರೀ ಕಪಿಲ್ ಅವರ ಶಿಷ್ಯವೃಂದದವರಿAದ ನಾಟ್ಯ ವೈಭವ ಕಾರ್ಯಕ್ರಮ ನಡೆಯಲಿದೆ.