ಮಡಿಕೇರಿ, ಮೇ ೪: ರೈತರಿಗೆ, ಬೆಳೆಗಾರರಿಗೆ ಕೃಷಿಭೂಮಿಯಲ್ಲಿ ಹಾಗೂ ತೋಟಗಳಲ್ಲಿ ೧೦ ಹೆಚ್‌ಪಿ ಪಂಪ್‌ಸೆಟ್ ಅನ್ನು ನೀರಾವರಿಗೆ ಬಳಸಲು ಈ ಹಿಂದೆ ಉಚಿತ ವಿದ್ಯುತ್ ಕಲ್ಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದರು. ಅವರ ಭರವಸೆ ಸದ್ಯದಲ್ಲಿಯೇ ಈಡೇರಲಿದ್ದು, ಉಚಿತ ವಿದ್ಯುತ್ ಸರಬರಾಜು ಖಚಿತವಾಗಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಸದನದಲ್ಲಿ ೧೦ ಹೆಚ್‌ಪಿ ಪಂಪುಗಳಿಗೆ ರೈತರಿಗೆ ಮತ್ತು ಬೆಳೆಗಾರರಿಗೆ ಉಚಿತ ವಿದ್ಯುತ್ ಕಲ್ಪಿಸಲು ತಾನು ಪ್ರಸ್ತಾಪಿಸಿದಾಗ ಅದಕ್ಕೆ ಅನೇಕ ಶಾಸಕರು ಬೆಂಬಲಿಸಿದ್ದರು.

(ಮೊದಲ ಪುಟದಿಂದ) ಅಲ್ಲದೇ ಮುಖ್ಯಮಂತ್ರಿ ಅವರನ್ನು ಖುದ್ದಾಗಿ ಭೇಟಿ ಮಾಡಿಯೂ ಮನವಿ ಸಲ್ಲಿಸಲಾಗಿತ್ತು. ಅವರು ಈ ಬಗ್ಗೆ ಸಂಬAಧಿಸಿದವರೊAದಿಗೆ ಚರ್ಚಿಸಿ ಯಾವ ರೀತಿಯಲ್ಲಿ ಅದನ್ನು ಜಾರಿಗೊಳಿಸಬೇಕು ಎಂದು ತೀರ್ಮಾನಿಸಿರುವುದಾಗಿ ಆಶ್ವಾಸನೆಯಿತ್ತಿದ್ದರು.

ಇತ್ತೀಚೆಗೆ ಕೊಡಗಿನ ರೈತ ಸಂಘದ ಪ್ರಮುಖರು ವಿದ್ಯುತ್ ಮಂಡಳಿಯ ಆರ್ಥಿಕ ವಿಭಾಗದವರಿಗೆ ಪತ್ರ ಬರೆದು, ಉಚಿತ ವಿದ್ಯುತ್‌ನ ಕುರಿತು ಮಾಹಿತಿ ಬಯಸಿದಾಗ ಅಲ್ಲಿನ ಅಧಿಕಾರಿಗಳು ತರಾತುರಿಯಲ್ಲಿ ಉಚಿತ ವಿದ್ಯುತ್ ನೀಡಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ. ಇದರಿಂದ ಕೊಡಗಿನ ರೈತರು ಹಾಗೂ ಬೆಳೆಗಾರರು ಆತಂಕಪಡಬೇಕಾಗಿಲ್ಲ. ಇಂದು ಮತ್ತೆ ತಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದೆ. ಈ ಕುರಿತು ಅವರ ಗಮನಕ್ಕೆ ತಂದಿದ್ದೇನೆ. ಸಂಬAಧಿತ ಇಲಾಖಾ ಪ್ರಮುಖರೊಂದಿಗೆ ಚರ್ಚಿಸಿ ಸರಕಾರಿ ಆದೇಶದ ಮೂಲಕ ಉಚಿತ ವಿದ್ಯುತ್ ಸೌಲಭ್ಯವನ್ನು ಕಲ್ಪಿಸುವುದಾಗಿ ಅವರು ಭರವಸೆಯಿತ್ತಿದ್ದಾರೆ ಎಂದು ಶಾಸಕ ರಂಜನ್ ಮಾಹಿತಿಯಿತ್ತಿದ್ದಾರೆ.