ಗೋಣಿಕೊಪ್ಪ ವರದಿ, ಮೇ ೩: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಲೀಗ್ ಟೂರ್ನಿಯ ಮಂಗಳವಾರದ ಪಂದ್ಯಗಳಲ್ಲಿ ೫ ತಂಡ ಗೆಲುವು ಪಡೆದುಕೊಂಡಿದ್ದು, ಒಂದು ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.

ಕುAದ, ಬೇರಳಿನಾಡ್ ಯುಎಸ್‌ಸಿ, ಮಡಿಕೇರಿ ಚಾರ್ಮರ್ಸ್, ಬಲಮುರಿ ಹಾಗೂ ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡಗಳು ಗೆಲುವಿನ ನಗೆ ಬೀರಿದವು. ಹಾತೂರು ಯೂತ್ ಕ್ಲಬ್ ಹಾಗೂ ಎಸ್. ಸಿ. ಬೊಳಿಯೂರ್ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ತಾ. ೫ ರಂದು ಉಳಿದ ಪಂದ್ಯಗಳು ನಡೆಯಲಿವೆ.

ಹಾತೂರು ಯೂತ್ ಕ್ಲಬ್ ಹಾಗೂ ಎಸ್. ಸಿ. ಬೊಳಿಯೂರ್ ತಂಡಗಳ ನಡುವಿನ ಪಂದ್ಯ ಗೋಲುಗಳಿಲ್ಲದೆ ಡ್ರಾದಲ್ಲಿ ಅಂತ್ಯವಾಯಿತು. ೨ ತಂಡಗಳು ಗೋಲು ದಾಖಲಿಸುವಲ್ಲಿ ಎಡವಿತು.

ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡವು ಕಿರುಗೂರು ಸ್ಪೋರ್ಟ್ಸ್ ಕ್ಲಬ್ ತಂಡವನ್ನು ೧೦-೦ ಗೋಲುಗಳಿಂದ ಮಣಿಸಿತು. ೨೪, ೨೮ ರಲ್ಲಿ ಬೋಪಣ್ಣ, ೧೮, ೨೭ ರಲ್ಲಿ ದಿಲನ್, ೩೧, ೩೨ ರಲ್ಲಿ ನಾಣಯ್ಯ, ೧೭, ೩೬ ರಲ್ಲಿ ಪ್ರತಿಕ್ ಪೂವಣ್ಣ ತಲಾ ಜೋಡಿ ಗೋಲು ಹೊಡೆದು ಮಿಂಚು ಹರಿಸಿದರು. ೨೬ ರಲ್ಲಿ ಪ್ರಧಾನ್, ೩೭ ರಲ್ಲಿ ದೇವಯ್ಯ ತಲಾ ಒಂದೊAದು ಗೋಲು ಬಾರಿಸಿದರು.

ಬಲಮುರಿ ತಂಡವು ಮಲ್ಮ ವಿರುದ್ಧ ೩-೧ ಗೋಲುಗಳಿಂದ ಜಯಿಸಿತು. ೧೬, ೨೪ನೇ ನಿಮಿಷಗಳಲ್ಲಿ ಬಲಮುರಿ ಆಟಗಾರ ರಿನ್ಸಿ ೨, ೨೩ ರಲ್ಲಿ ಕಾರ್ಲ್ ಕಾರ್ಯಪ್ಪ ೧, ೩೦ ರಲ್ಲಿ ಗೌತಂ ೧ ಗೋಲು ಹೊಡೆದರು.

ಮಡಿಕೇರಿ ಚಾರ್ಮರ್ಸ್ ತಂಡವು ಜನರಲ್ ತಿಮ್ಮಯ್ಯ ತಂಡವನ್ನು ೭-೦ ಗೋಲುಗಳಿಂದ ಮಣಿಸಿತು. ೨ ಮತ್ತು ೩೫ನೇ ನಿಮಿಷಗಳಲ್ಲಿ ನಿಶಾಲ್ ೨ ಗೋಲು, ೧೮ ರಲ್ಲಿ ಮಂದಣ್ಣ, ೨೪ ರಲ್ಲಿ ಶಾನ್ ದೇವಯ್ಯ, ೩೪ ರಲ್ಲಿ ಎಂ. ಎಸ್. ಸಾಗರ್, ೩೫ ರಲ್ಲಿ ಶಾನ್ ಕಾಳಪ್ಪ, ೩೭ ರಲ್ಲಿ ಬೋಪಣ್ಣ ತಲಾ ಒಂದೊAದು ಗೋಲು ಹೊಡೆದರು.

ಬೇರಳಿನಾಡ್ ಯುಎಸ್‌ಸಿ ತಂಡಕ್ಕೆ ಸೋಮವಾರಪೇಟೆ ಡಾಲ್ಫಿನ್ಸ್ ವಿರುದ್ಧ ೩-೧ ಗೋಲುಗಳ ಗೆಲುವು ಲಭಿಸಿತು. ೮ ನೇ ನಿಮಿಷದಲ್ಲಿ ಬೇರಳಿನಾಡ್ ತಂಡದ ಆಟಗಾರ ಮೊಣ್ಣಪ್ಪ, ೧೯ ರಲ್ಲಿ ಉತ್ತಪ್ಪ, ೩೩ ರಲ್ಲಿ ಬೋಪಣ್ಣ, ೩೪ ರಲ್ಲಿ ಡಾಲ್ಪಿನ್ಸ್ ತಂಡದ ಮನೋಜ್ ಗೋಲು ಬಾರಿಸಿದರು.

ಕುಂದ ತಂಡವು ಸೋಮವಾರಪೇಟೆ ಬ್ಲೂಸ್ಟಾರ್ ತಂಡವನ್ನು ೫-೧ ಗೋಲುಗಳಿಂದ ಮಣಿಸಿತು. ೩೪, ೩೬ನೇ ನಿಮಿಷಗಳಲ್ಲಿ ಕುಂದ ತಂಡದ ಆಟಗಾರ ಜತನ್ ೨, ೯ರಲ್ಲಿ ಸುದೀಶ್, ೧೩ ರಲ್ಲಿ ಎಂ. ಬೋಪಣ್ಣ, ೩೯ ರಲ್ಲಿ ಸೋಮಣ್ಣ, ೨೩ ರಲ್ಲಿ ಸೋಮವಾರಪೇಟೆ ತಂಡದ ರಕ್ಷಿತ್ ನಾಚಪ್ಪ ಗೋಲು ಬಾರಿಸಿದರು.