ಶನಿವಾರಸಂತೆ, ಮೇ ೩: ಸಮೀಪದ ಕೊಡ್ಲಿಪೇಟೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹೋಬಳಿ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ದಿನಾಚರಣೆ ಅಂಗವಾಗಿ ಇತ್ತೀಚೆಗೆ ಆಕಸ್ಮಿಕ ಬೆಂಕಿ ಅವಘಡದಲ್ಲಿ ಮನೆ ಹಾನಿಗೀಡಾದ ಸಂಘದ ಸದಸ್ಯ ಮನುಗನಹಳ್ಳಿ ಗಂಗಾಧರ್ ಅವರಿಗೆ ರೂ. ೧೦ ಸಾವಿರ ನೆರವು ನೀಡಲಾಯಿತು. ಸಂಘದ ಅಧ್ಯಕ್ಷ ಕೆ.ಎ. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಇಬ್ರಾಹಿಂ ಮಲ್ಲಳ್ಳಿ, ಉಪಾಧ್ಯಕ್ಷ ಕೆ.ಸಿ. ಶೇಖರ್, ಕಾರ್ಯದರ್ಶಿ ವೇದಕುಮಾರ್, ಸಹಕಾರ್ಯದರ್ಶಿ ಇಪ್ತಿಕಾರ್ ಪಾಷಾ, ಖಜಾಂಚಿ ಬಶೀರ್ ಪೈಂಟರ್, ನಿರ್ದೇಶಕರಾದ ಎಲ್.ಬಿ. ರವಿ, ಮುನ್ನಾ, ಗಣೇಶ್, ಸೈಯದ್ ಜಾವಿದ್, ಕಲೀಲ್, ಸಾಗರ್, ಸದಸ್ಯರು ಹಾಜರಿದ್ದರು.