ಮೂರ್ನಾಡು, ಮೇ ೨: ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಮತ್ತು ಸಮಾಜದ ವತಿಯಿಂದ ಮೂರ್ನಾಡು ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕ್ರೀಡೋತ್ಸವಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು. ನಂತರ ಮಾತನಾಡಿ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕೊಡಗು ಹೆಗ್ಗಡೆ ಸಮಾಜದ ಆಡಳಿತ ಮಂಡಳಿಯ ಕಾರ್ಯವನ್ನು ಶ್ಲಾಘಿಸಿದರು. ಸರ್ಕಾರದ ಇತಿಮಿತಿಯಲ್ಲಿ ಸಮಾಜದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸುವುದಾಗಿ ತಿಳಿಸಿದರು.

ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕೊಡಗು ಹೆಗ್ಗಡೆ ಜನಾಂಗದ ಕ್ರೀಡೋತ್ಸವಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಜನಾಂಗ ಬಾಂಧವರಿಗೆ ಕ್ರೀಡೋತ್ಸವವನ್ನು ಮತ್ತಷ್ಟು ವಿಜೃಂಭಣೆಯಿAದ ನಡೆಸಲು ಸಾಧ್ಯವಾಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಂಗಚAಡ ರಶ್ಮಿ ಮತ್ತು ಫುಟ್ಬಾಲ್ ಆಟಗಾರ್ತಿ ಪೊಕ್ಕಳಿಚಂಡ ಸಾನಿಯಾ ದೇಚಮ್ಮ ಅವರನ್ನು ಸನ್ಮಾನಿಸ ಲಾಯಿತು. ಕೊಡಗು ಹೆಗ್ಗಡೆ ಜನಾಂಗದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಸಮಾಜದ ಪರವಾಗಿ ಕೊಡಗು ಹೆಗಡೆ ಜನಾಂಗಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮನವಿ ಪತ್ರವನ್ನು ಶಾಸಕರಿಬ್ಬರಿಗೆ ಸಲ್ಲಿಸಿದರು.

ಕೊರಕುಟ್ಟೀರ ಸರ ಚಂಗಪ್ಪನವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಂಗಚAಡ ರಶ್ಮಿ ಪ್ರಾರ್ಥಿಸಿದರು. ಪಡಿಞರಂಡ ಪ್ರಭು ಕುಮಾರ್

(ಮೊದಲ ಪುಟದಿಂದ) ಕಾರ್ಯಕ್ರಮ ನಿರೂಪಿಸಿದರು. ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಚಂಗಚAಡ ಕಟ್ಟಿ ಕಾವೇರಪ್ಪ, ಖಜಾಂಜಿ ಪಾನಿಕುಟ್ಟೀರ ಕುಟ್ಟಪ್ಪ, ನಿರ್ದೇಶಕರಾದ ತೋರೆರ ಮುದ್ದಯ್ಯ, ಕೊಪ್ಪಡ ಪಟ್ಟುಪಳಂಗಪ್ಪ, ತಂಬAಡ ಮಂಜು, ಕೊಂಗೆಪAಡ ರಘು, ಪಂದಿಕAಡ ಸುನಾ, ಅಪ್ಪುಣು ಪೂವಯ್ಯ, ಮೂರೀರ ಕುಶಾಲಪ್ಪ, ಮಲ್ಲಾಡ ಸುತಾ, ಮೂರೀರ ಶಾಂತಿ, ಪ್ರಮುಖರಾದ ತೋರೆರ ರಾಜಪೂವಯ್ಯ, ಬೈರಿಕುಂದಿರ ಡಾಲಿ, ಮಲ್ಲಾಡ ತಿಮ್ಮಯ್ಯ, ಮಂಡೇಡ ಬೆಳ್ಳಿಯಪ್ಪ, ಬೈರಿಕುಂದಿರ ಉತ್ತಪ್ಪ, ತೋರೇರ ಉಮೇಶ್ ಹಾಜರಿದ್ದರು.