ಗೋಣಿಕೊಪ್ಪ ವರದಿ, ಮೇ ೨: ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಕಪ್‌ನಲ್ಲಿ ಕೊಂಗAಡ, ಬೇಪಡಿಯಂಡ, ತೀತಮಾಡ, ಬೊಜ್ಜಂಗಡ, ಕಡೇಮಾಡ, ಕಾಳಿಮಾಡ, ಆದೇಂಗಡ ಹಾಗೂ ಚೇಂದೀರ ತಂಡಗಳು ಮೊದಲ ಜಯ ಸಾಧನೆ ಮಾಡಿದವು.

ಬೇಪಡಿಯಂಡ ತಂಡವು ಮಲ್ಚೀರ ವಿರುದ್ದ ೮ ವಿಕೆಟ್ ಗೆಲುವು ಸಾಧಿಸಿತು. ಬೇಪಡಿಯಂಡ ೨ ವಿಕೆಟ್‌ಗೆ ೩೯ ರನ್, ಮಲ್ಚೀರ ೨ ವಿಕೆಟ್ ಕಳೆದುಕೊಂಡು ೩೫ ರನ್ ದಾಖಲಿಸಿ ಸೋಲೊಪ್ಪಿಕೊಂಡಿತು.

ಕೊAಗAಡ ತಂಡವು ಬೋಂದ ಮುಕ್ಕಾಟೀರವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತು. ಕೊಂಗAಡ ದಾಖಲಿಸಿದ ೭೪ ರನ್‌ಗಳ ಗುರಿಯನ್ನು ಮುಕ್ಕಾಟೀರ ತಂಡ ಮುಟ್ಟುವಲ್ಲಿ ಎಡವಿತು. ವಿಕೆಟ್ ನಷ್ಟವಿಲ್ಲದೆ ೫೪ ರನ್ ಗಳಿಸಿತು.

ತೀತಮಾಡ ತಂಡಕ್ಕೆ ಪೆಮ್ಮಂಡ ವಿರುದ್ಧ ೪ ವಿಕೆಟ್‌ಗಳ ಗೆಲುವು ದೊರೆಯಿತು. ಪೆಮ್ಮಂಡ ೮ ವಿಕೆಟ್‌ಗೆ ೩೨ ರನ್ ದಾಖಲಿಸಿತು. ತೀತಮಾಡ ೬ ವಿಕೆಟ್ ಕಳೆದುಕೊಂಡು ೩೪ ರನ್ ದಾಖಲಿಸಿತು.

ನೆಲ್ಲಮಕ್ಕಡ ಹಾಗೂ ಮೂವೇರ ತಂಡಗಳು ಗೈರು ಹಾಜರಾದ ಕಾರಣ ಬೊಜ್ಜಂಗಡ ಹಾಗೂ ಕಡೇಮಾಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದವು.

ಕಾಳಿಮಾಡ ತಂಡವು ಕೈಬಿಲಿರ ತಂಡವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ಕೈಬಿಲೀರ ೬ ವಿಕೆಟ್‌ಗೆ ೧೧ ರನ್ ದಾಖಲಿಸಿತು. ಕಾಳಿಮಾಡ ೧ ವಿಕೆಟ್ ಕಳೆದುಕೊಂಡು ಗುರಿ ಸಾಧನೆ ಮಾಡಿತು.

ಆದೇಂಗಡ ತಂಡ ಸೂಪರ್ ಒವರ್‌ನಲ್ಲಿ

(ಮೊದಲ ಪುಟದಿಂದ) ಮೋಟನಾಳೀರ ವಿರುದ್ಧ ರೋಚಕ ಗೆಲುವು ದಾಖಲಿಸಿತು. ಮೋಟನಾಳೀರ ೧ ವಿಕೆಟ್‌ಗೆ ೪೭ ರನ್ ದಾಖಲಿಸಿತು. ಆದೇಂಗಡ ೫ ವಿಕೆಟ್ ಕಳೆದುಕೊಂಡು ಡ್ರಾ ಸಾಧನೆ ಮಾಡಿತು. ನಂತರ ನಡೆದ ಸೂಪರ್ ಓವರ್‌ನಲ್ಲಿ ಆದೇಂಗಡ ಗೆಲುವು ಪಡೆಯಿತು

ಚೇಂದೀರ ತಂಡಕ್ಕೆ ಗೀಜಗಂಡ ವಿರುದ್ಧ ೧೦ ವಿಕೆಟ್ ಗೆಲುವು ಲಭಿಸಿತು. ಗೀಜಗಂಡ ೪ ವಿಕೆಟ್‌ಗೆ ೩೭ ರನ್ ದಾಖಲಿಸಿತು. ಚೇಂದೀರ ವಿಕೆಟ್ ನಷ್ಟವಿಲ್ಲದೆ ೩೮ ರನ್ ಪೇರಿಸಿ ಗೆದ್ದು ಬೀಗಿತು.

ಕೊಂಗAಡ ತಂಡವು ಮಾಚಿಮಂಡ ವಿರುದ್ದ ೨೩ ರನ್‌ಗಳ ಗೆಲುವು ಪಡೆಯಿತು. ಕೊಂಗAಡ ೬ ವಿಕೆಟ್ ನಷ್ಟಕ್ಕೆ ೪೩ ರನ್ ಸೇರಿಸಿತು. ಮಾಚಿಮಂಡ ನಿಗಧಿತ ಓವರ್‌ಗಳಲ್ಲಿ ೬ ವಿಕೆಟ್ ಕಳೆದುಕೊಂಡು ೨೦ ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು. ಸೋಮವಾರ ೯ ಪಂದ್ಯಗಳು ಮಾತ್ರ ನಡೆದವು. ಉಳಿದಂತೆ ೬ ಪಂದ್ಯಗಳು ಮಳೆಯಿಂದಾಗಿ ಮುಂದೂಡ ಲ್ಪಟ್ಟಿತು. ಮುಂದೂಡಿದ ಪಂದ್ಯಗಳನ್ನು ಆಯಾ ತಂಡಗಳ ಮುಂದಿನ ಪಂದ್ಯಗಳ ದಿನದ ಬೆಳಿಗ್ಗೆ ಆಯೋಜಿಸಲು ನಿರ್ಧರಿಸಲಾಯಿತು.

ಉದ್ಘಾಟನೆ : ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಭಾನುವಾರ ಉದ್ಘಾಟನೆಗೆ ಮೆರುಗು ನೀಡಲಾಯಿತು. ಕೊಡವ ಸಾಂಪ್ರದಾಯಿಕ ವಾಲಗ ಮೂಲಕ ವೇದಿಕೆಗೆ ಅತಿಥಿಗಳನ್ನು ಸ್ವಾಗತಿಸಲಾಯಿತು. ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿನಿಯರು ಉಮ್ಮತ್ತಾಟ್ ಪ್ರದರ್ಶಿಸಿದರು. ಕತ್ತಿಯಾಟ್ ಪ್ರದರ್ಶನ ಗಮನ ಸೆಳೆಯಿತು.

ಧ್ವಜಾರೋಹಣ ಮೂಲಕ ಪಟ್ಟೇದಾರ ಪೊರುಕೊಂಡ ಜೋಯಪ್ಪ ಚಾಲನೆ ನೀಡಿದರು. ವೇದಿಕೆಯನ್ನು ಶಾಸಕ ಕೊಂಬಾರನ ಜಿ.ಬೋಪಯ್ಯ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಬಹುತೇಕ ಎಲ್ಲಾ ಮೈದಾನಗಳಲ್ಲಿ ವಿವಿಧ ಜನಾಂಗಗಳು ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯಲ್ಲಿ ಕ್ರೀಡೆಗೆ ಪ್ರೋತ್ಸಾಹಿಸುತ್ತಿದ್ದಾರೆ. ಪ್ರತಿಭೆಗಳನ್ನು ಗುರುತಿಸಲು ಕುಟುಂಬಗಳ ನಡುವಿನ ಟೂರ್ನಿಗಳು ಸಹಕಾರಿಯಾಗಿದೆ ಎಂದರು.

ಕುಟುAಬದ ಅಧ್ಯಕ್ಷ ಪೊರುಕಂಡ ಬೋಪಣ್ಣ ಮಾತನಾಡಿ, ೨೦೧೮ ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಕಾರಣ ಟೂರ್ನಿ ನಡೆಸಲು ಸಾಧ್ಯವಾಗಲಿಲ್ಲ. ನಂತರ ಕೋವಿಡ್‌ನಿಂದ ಮುಂದೂಡಲಾಯಿತು. ೩ ವರ್ಷಗಳ ಬಿಡುವಿನ ನಂತರ ಟೂರ್ನಿ ಆಯೋಜಿಸುವ ಮೂಲಕ ಕುಟುಂಬಗಳು ಒಂದೆಡೆ ಸೇರಲು ಸಾಧ್ಯವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕ್ರೀಡಾಕೂಟ ನಡೆಸಲು ಆರ್ಥಿಕ ಸಮಸ್ಯೆ ಎದುರಾಗಲಿದೆ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕಿದೆ. ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಗೆ ಸರ್ಕಾರದಿಂದ ಅನುದಾನ ಸಿಗುತ್ತಿದೆ. ಕ್ರಿಕೆಟ್ ಟೂರ್ನಿಗೆ ಆರ್ಥಿಕ ಸಹಾಯದ ನಿರೀಕ್ಷೆ ಕ್ರೀಡಾಭಿಮಾನಿಗಳಲ್ಲಿದೆ. ಮುಖ್ಯ ಮಂತ್ರಿಗಳು ಕ್ರೀಡಾಭಿಮಾನಿಗಳ ಕೂಗಿಗೆ ಸ್ಪಂದಿಸುವ ನಿರೀಕ್ಷೆಯಿದೆ ಎಂದರು.

ಕರ್ನಾಟಕ ವಿದ್ಯುತ್ ನಿಗಮ ಮಹಾಪ್ರಬಂಧಕ ತೀತೀರ ರೋಶನ್ ಅಪ್ಪಚ್ಚು ಟೂರ್ನಿ ಉದ್ಘಾಟಿಸಿ ಮಾತನಾಡಿ, ಸಣ್ಣ ಜಿಲ್ಲೆಯಾದರೂ ಕೊಡವ ಕುಟುಂಬಗಳು ಕ್ರೀಡಾಕೂಟಗಳನ್ನು ಅಯೋಜಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ. ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಲಿದೆ ಎಂದರು.

ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾತನಾಡಿ, ಕುಟುಂಬಗಳ ನಡುವೆ ಕ್ರೀಡಾ ಕೂಟಗಳನ್ನು ಆಯೋಜಿಸಲು ಆಯೋಜಕರು ಮಾತ್ರವಲ್ಲದೆ ಪ್ರತಿಯೊಂದು ಕುಟುಂಬದ ಸಹಕಾರ ಬೇಕು. ಟೂರ್ನಿಯನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವಂತೆ ತಂಡಗಳಿಗೆ ಸಲಹೆ ನೀಡಿದರು.

ಟ್ರೋಫಿ ದಾನಿ ಅಡ್ಡೇಂಗಡ ತೇಜ್ ನಂಜಪ್ಪ ಮಾತನಾಡಿ, ಬಹಳಷ್ಟು ಕೊಡವ ಕುಟುಂಬಗಳು ಟೂರ್ನಿಗೆ ಆರ್ಥಿಕ ಸಹಕಾರ ನೀಡಿದೆ. ಪ್ರತಿ ವರ್ಷ ಟೂರ್ನಿಯ ಮುಂದಾಳತ್ವ ವಹಿಸುವ ಕುಟುಂಬಗಳಿಗೆ ಎಲ್ಲರೂ ಸಹಕಾರ ನೀಡಿದರೆ ಟೂರ್ನಿಯನ್ನು ಮುಂದುವರಿಸಿ ಕೊಂಡು ಹೋಗಲು ಸಹಾಯವಾಗಲಿದೆ ಎಂದು ಹೇಳಿದರು.

ಕೊಡಗು ಫುಟ್ಬಾಲ್ ಅಸೋಷಿಯೇಶನ್ ಅಧ್ಯಕ್ಷ ನೆಲ್ಲಮಕ್ಕಡ ರೋಶನ್ ಅಯ್ಯಪ್ಪ, ಅಮ್ಮತ್ತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದೊಡ್ಡ ತಮ್ಮಯ್ಯ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟೀರ ನಾಣಯ್ಯ, ಟೂರ್ನಿ ನಿರ್ದೇಶಕ ನೆಲ್ಲಚಂಡ ಯತೀಶ್ ನಾಚಪ್ಪ ಇದ್ದರು.

ಉದ್ಘಾಟನಾ ದಿನ ಸೌತ್ ಕೊಡಗು ತಂಡ ನಾರ್ತ್ ಕೊಡಗು ತಂಡಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯ ಕೂಡ ಮಳೆಗೆ ಆಹುತಿ ಯಾಯಿತು. ನಾರ್ಥ್ ಕೂರ್ಗ್ ಮೊದಲು ಬ್ಯಾಟ್ ಮಾಡಿ ೧೧ ಓವರ್‌ಗಳಿಗೆ ೧೦೫ ರನ್ ದಾಖಲಿಸಿತು. ನಂತರ ಮಳೆ ಕಾಣಿಸಿಕೊಂಡ ಕಾರಣ ಪಂದ್ಯ ಸ್ಥಗಿತಗೊಂಡಿತು. ನಂತರ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ.