ಗೋಣಿಕೊಪ್ಪಲು, ಮೇ ೨: ಭಾನುವಾರ ಮಧ್ಯಾಹ್ನದ ವೇಳೆ ಗುಡುಗು ಸಿಡಿಲಿನೊಂದಿಗೆ ಅಬ್ಬರಿಸಿದ ಬಿರುಗಾಳಿ ಸಹಿತ ಮಳೆಗೆ ಗೋಣಿಕೊಪ್ಪ ನಗರ ಕೆಲ ಕಾಲ ತಲ್ಲಣಗೊಂಡಿತು. ನಗರದ ಕಾವೇರಿ ಹಿಲ್ಸ್ನ ಕುಂಬೇರ ಮಣಿಗಣಪತಿ ಅವರ ಮನೆ ಮೇಲೆ ಅಳವಡಿಸಿದ್ದ ೪೦ ಅಡಿ ಉದ್ದದ ಕಬ್ಬಿಣದ ಮೇಲ್ಚಾವಣಿಯು ಸಂಪೂರ್ಣವಾಗಿ ಬಿರುಗಾಳಿಗೆ ಹಾರಿ ಹೋಗಿ ೩೦ ಮೀ.ದೂರದ ಮತ್ತೊಂದು ಮನೆಯ ಮೇಲೆ ನಿಂತಿದೆ. ಮೇಲ್ಚಾವಣಿಯ ರಭಸಕ್ಕೆ ಬಡಾವಣೆಯ ರಸ್ತೆಯ ಬದಿಯಲ್ಲಿ ಅಳವಡಿಸಲಾಗಿದ್ದ ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿತು.
ಇದರಿಂದ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳೆಲ್ಲವೂ ಮಳೆಗೆ ಹಾನಿಯಾಗಿವೆ. ಸುದ್ದಿ ತಿಳಿಯುತ್ತಿ ದ್ದಂತೆ ಬಡಾವಣೆಯ ಅಧ್ಯಕ್ಷÀ ಶಾಂತೆಯAಡ ಮಧು ಮಾಚಯ್ಯ ಹಾಗೂ ಇತರರು ಪೊಲೀಸ್ ಠಾಣೆಗೆ ಹಾಗೂ ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ತಹಶೀಲ್ದಾರ್ ಸೇರಿದಂತೆ ಚೆಸ್ಕಾಂನ ಅಧಿಕಾರಿಗಳು, ಸಿಬ್ಬಂದಿಗಳು ತೆರಳಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ಕಂಬವನ್ನು ಚೆಸ್ಕಾಂ ಅಧಿಕಾರಿಗಳು ತೆರವುಗೊಳಿಸಿದರು.
ಸುದ್ದಿ ತಿಳಿದ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ ಸ್ಥಳಕ್ಕೆ ಆಗಮಿಸಿ ವಸ್ತು ಸ್ಥಿತಿಯನ್ನು ಅವಲೋಕಿಸಿದರು. ಅಲ್ಲದೆ ಯಾವುದೇ ಅಪಾಯ ಸಂಭವಿಸದAತೆ ಅಪಾಯದಲ್ಲಿರುವ ಮೇಲ್ಚಾವಣಿಯನ್ನು ತೆರವುಗೊಳಿಸಲು ಬೇಕಾದ ವ್ಯವಸ್ಥೆ ಕಲ್ಪಿಸಿದರು.
ಗ್ರಾಮ ಪಂಚಾಯಿತಿ ವಾರ್ಡ್ ಸದಸ್ಯರುಗಳಾದ ಹಕೀಮ್, ಸೌಮ್ಯ ಬಾಲು ಹಾಗೂ ರತಿ ಅಚ್ಚಪ್ಪ ಖುದ್ದು ಹಾಜರಿದ್ದು, ಕ್ರೇನ್ ಮೂಲಕ ಅಪಾಯದಲ್ಲಿದ್ದ
(ಮೊದಲ ಪುಟದಿಂದ) ಮೇಲ್ಚಾವಣಿಯನ್ನು ಕೆಳಗಿಸಲು ಕ್ರಮಕೈಗೊಂಡರು. ರಾತ್ರಿ ೧೦ ಗಂಟೆಗೆ ಅಪಾಯದಲ್ಲಿದ್ದ ದೊಡ್ಡ ಗಾತ್ರದ ಕಬ್ಬಿಣದ ಮೇಲ್ಚಾವಣಿಯನ್ನು ಕೆಳಗಿಳಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ ಸ್ಥಳದಲ್ಲಿದ್ದು ಯಾವುದೇ ಅಪಾಯ ವಿಲ್ಲದಂತೆ ಕೆಲಸ ನಿರ್ವಹಿಸುವಲ್ಲಿ ಯಶಸ್ವಿಯಾದರು. ಮನೆಯ ಮೇಲ್ಭಾಗದಲ್ಲಿದ್ದ ಕಬ್ಬಿಣದ ಮೇಲ್ಚಾವಣಿಯನ್ನು ಕೆಳಗಿಸುವ ಸಂದರ್ಭ ಮನೆಯಗೋಡೆ ಹಾಗೂ ಕಾಂಪೌAಡ್‌ಗೆ ಹಾನಿ ಸಂಭವಿಸಿದೆ.ಸರ್ಕಲ್ ಇನ್ಸ್ಪೆಕ್ಟರ್ ಜಯರಾಮ್ ಸಬ್‌ಇನ್ಸ್ಪೆಕ್ಟರ್ ಸುಬ್ಬಯ್ಯ, ಕಂದಾಯ ಪರಿವೀಕ್ಷಕರಾದ ಸುಧೀಂದ್ರ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಸ್ಥಳದಲ್ಲಿದ್ದು ಅಗತ್ಯ ಕ್ರಮಕೈಗೊಂಡು, ಬಡಾವಣೆಗೆ ತೆರಳುವ ರಸ್ತೆಯನ್ನು ಮಧ್ಯಾಹ್ನದಿಂದ ಬಂದ್ ಮಾಡಲಾಗಿತ್ತು.ರಾತ್ರಿ ೧೦ ಗಂಟೆಗೆ ಮೇಲ್ಛಾವಣಿಯ ಒಂದು ಭಾಗವನ್ನು ಕ್ರೇನ್‌ನ ಮೂಲಕ ಕೆಳಗಿಳಿಸಲಾಯಿತು. ಇನ್ನೊಂದು ಭಾಗವು ಹಾಗೆಯೇ ಮನೆಯ ಮೇಲೆ ಅಪಾಯದಲ್ಲಿ ಉಳಿದಿದೆ.
ಮಧ್ಯಾಹ್ನ ವೇಳೆ ಬೀಸಿದ ಬಿರುಗಾಳಿಗೆ ಬಸ್ ನಿಲ್ದಾಣದ ಹಿಂಭಾಗವಿರುವ ೫ ಒಣಮೀನು ಮಾರುಕಟ್ಟೆ ಮಳಿಗೆಗಳು, ಹೊಟೇಲ್ ಮಳಿಗೆಗಳಿಗೆ ಹಾಕಲಾಗಿದ್ದ ಶೀಟ್‌ಗಳು ಸಂಪೂರ್ಣ ಹಾರಿ ಹೋಗಿ ಮಳೆಗೆಯಲ್ಲಿಟ್ಟಿದ್ದ ಅಪಾರ ಪ್ರಮಾಣದ ಒಣಮೀನುಗಳು ನೀರಿನಿಂದ ಹಾಳಾಗಿವೆ. ಸಮೀಪದ ಪಂಚಾಯಿತಿ ವಸತಿಗೃಹದ ಮೇಲ್ಚಾವಣಿಯು ಹಾರಿ ಹೋಗಿದ್ದು ಮನೆಯಲ್ಲಿದ್ದ ಪೌರಕಾರ್ಮಿಕೆ ಗೌರಿಯವರು ಅಪಾಯದಿಂದ ಪಾರಾಗಿದ್ದಾರೆ. ಸಂತೆ ದಿನ ಭಾನುವಾರದಂದು ಬೀಸಿದ ಮಳೆ, ಗಾಳಿಗೆ ಸಂತೆ ಮಾರುಕಟ್ಟೆಯ ವ್ಯಾಪಾರಕ್ಕೆ ಅಳವಡಿಸಿದ್ದ ಪ್ಲಾಸ್ಟಿಕ್ ಹೊದಿಕೆಗಳು, ಕೊಡೆಗಳು ಹಾರಿ ಹೋಗಿವೆ.
ನಗರದ ಮುಖ್ಯರಸ್ತೆಯಉದ್ದಕ್ಕೂ ಮರದ ಕೊಂಬೆಗಳು ರಸ್ತೆಗಳಿಗೆ ಉರುಳಿ ಬಿದ್ದಿದ್ದು, ರಸ್ತೆ ಸಂಚಾರಕ್ಕೆ ಕೆಲ ಕಾಲ ಅಡ್ಡಿ ಆಗಿತ್ತು. ವಿದ್ಯುತ್ ತಂತಿಗಳು ತುಂಡಾಗಿದ್ದವು. ವಿಪರೀತ ಗಾಳಿಯಿಂದ ಹಲವು ಮನೆಗಳ ಮೇಲೆ ಅಳವಡಿಸಲಾಗಿದ್ದ ಶೀಟ್‌ಗಳು ಹಾರಿ ಹೋಗಿದ್ದು ನಗರದಲ್ಲಿ ಮೊದಲ ಬಾರಿಗೆ ಬಿರುಗಾಳಿಯಿಂದಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.
ನೆಲಕ್ಕುರುಳಿದ ವಿದ್ಯುತ್ ಕಂಬಗಳು- ಟ್ರಾನ್ಸ್ಫಾರ್ಮರ್‌ಗಳು
ಭಾನುವಾರ ಮಧ್ಯಾಹ್ನ ೨ ಗಂಟೆ ವೇಳೆಗೆ ಬೀಸಿದ ಬಿರುಗಾಳಿಗೆ ಗೋಣಿಕೊಪ್ಪ, ಹಾತೂರು , ಅರುವತ್ತೋಕ್ಲು, ಪೊನ್ನಂಪೇಟೆ ಭಾಗದಲ್ಲಿದ್ದ ೧೮ಕ್ಕೂ ಅಧಿಕ ವಿದ್ಯುತ್ ಕಂಬಗಳು ಹಾಗೂ ೨ ಟ್ರಾನ್ಸ್ಫಾರ್ಮರ್‌ಗಳು ನೆಲಕ್ಕುರುಳಿವೆ. ಮಧ್ಯಾಹ್ನದಿಂದಲೇ ವಿದ್ಯುತ್ ಸಂಪೂರ್ಣ ಕಡಿತಗೊಂಡು ರಾತ್ರಿಯ ವೇಳೆ ಪಟ್ಟಣವು ಕಗ್ಗತ್ತಿನಲ್ಲಿತ್ತು ಚೆಸ್ಕಾಂನ ಇಂಜಿನಿಯರ್ ಕೃಷ್ಣಕುಮಾರ್ ಹಾಗೂ ಸಿಬ್ಬಂದಿಗಳು ಮುರಿದು ಬಿದ್ದ ವಿದ್ಯುತ್ ಕಂಬಗಳನ್ನು ದುರಸ್ತಿಗೊಳಿಸುವ ಕಾರ್ಯ ನಡೆಸಿದರು.