ಮಡಿಕೇರಿ, ಮೇ ೨ : ಜಿಲ್ಲೆಯ ವಿವಿಧೆಡೆ ತಾ.೧ ರಂದು ಕಾರ್ಮಿಕರ ದಿನವನ್ನು ಆಚರಿಸಲಾಯಿತು. ವಿವಿಧ ಕಾರ್ಮಿಕ ಸಂಘಟನೆಗಳ ಆಶ್ರಯದಲ್ಲಿ ಹಕ್ಕೊತ್ತಾಯ ಮಂಡಿಸಲಾಯಿತು. ಎಐಟಿಯುಸಿ ಸಂಘಟನೆ ವತಿಯಿಂದ ಮಾದಾಪುರ-ಬಿಳಿಗೇರಿಯಲ್ಲಿ ೧೩೬ನೇ ವಿಶ್ವ ಕಾರ್ಮಿಕ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ವಿಶ್ವದ ಬಹುತೇಕ ರಾಷ್ಟçಗಳಲ್ಲಿ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ದಿನವನ್ನು ಸಂಭ್ರಮ ದಿಂದ ಆಚರಿಸುತ್ತವೆ. ಮೂಲಭೂತ ಹಕ್ಕುಗಳಿಗಾಗಿ ಧ್ವನಿ ಎತ್ತಲಾಗುತ್ತದೆ, ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳ ಲಾಗುತ್ತದೆ. ಕಾರ್ಮಿಕರ ಹೋರಾಟದ ಮೇ ದಿನಕ್ಕೆ ತನ್ನದೇ ಆದ ಚಾರಿತ್ರಿಕ ಮಹತ್ವವಿದೆ ಎಂದರು.
ಜಗತ್ತನ್ನೇ ಒಂದುಗೂಡಿಸುವ ಶಕ್ತಿ ಕಾರ್ಮಿಕರಿಗಿದೆ, ಕಾರ್ಮಿಕರು ಧರ್ಮ, ಭಾಷೆ, ಜಾತಿ ಮೀರಿದವರು. ರಾಜ್ಯ ಹಾಗೂ ರಾಷ್ಟçದಲ್ಲಿ ಬದಲಾವಣೆ ತರುವ ಶಕ್ತಿ ಕಾರ್ಮಿಕರಿಗಿದೆ. ಬಲಿದಾನ, ಹೋರಾಟದ ಫಲದಿಂದಾಗಿಯೇ ಕಾರ್ಮಿಕರು ತಮ್ಮ ಹಕ್ಕು ಪಡೆಯಲು ಸಾಧ್ಯವಾಗಿದೆ. ಆದರೆ ಇಂದು ಜಾಗತೀಕರಣ ನೀತಿಗಳು, ದುಡಿಯುವ ಜನರ ಬದುಕನ್ನು ಕಿತ್ತು ತಿನ್ನುತ್ತಿದೆ.
ರಾಜಕಾರಣಿಗಳು ಹಾಗೂ ಅಧಿಕಾರಿಗಳು ಅಭಿವೃದ್ಧಿ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ
ಹೊರತು ಶ್ರಮಿಕ ವರ್ಗದ
ನೋವಿಗೆ ಸ್ಪಂದಿಸುತ್ತಿಲ್ಲವೆAದು ಹೆಚ್.ಎಂ.ಸೋಮಪ್ಪ ಆರೋಪಿಸಿದರು.
ಹಕ್ಕುಗಳ ಪ್ರತಿಪಾದನೆಗಾಗಿ ಎಲ್ಲಾ ಕ್ಷೇತ್ರಗಳ ಕಾರ್ಮಿಕರು ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಎಐಟಿಯುಸಿ ತಾಲೂಕು ಸಂಚಾಲಕ ಎಂ.ಎ. ಗಣೇಶ್, ಸದಸ್ಯರಾದ ಹೆಚ್.ಬಿ. ಲೋಕೇಶ್, ಸೂರ್ಯ, ಪ್ರೇಮ, ಪ್ರಮೀಳ, ದೇವಿರಮ್ಮ ಮತ್ತಿತರರು ಉಪಸ್ಥಿತರಿದ್ದರು. ಕುಶಾಲನಗರ: ಕುಶಾಲನಗರದ ವರ್ಕ್ ಶಾಪ್ ಕಾರ್ಮಿಕರ ಸಂಘದ ೧೨ನೇ ವಾರ್ಷಿಕೋತ್ಸವ ಮತ್ತು ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಸ್ಥಳೀಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಬಿ.ಜೈವರ್ಧನ್ ಮತ್ತು ಇಂಟೆಕ್ ರಾಜ್ಯ ಸಂಚಾಲಕ ನಾಪಂಡಮುತ್ತಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಮುಖ್ಯ ಅತಿಥಿಗಳಾದ ನಾಪಂಡ ಮುತ್ತಪ್ಪ, ಅಸಂಘಟಿತ ಕಾರ್ಮಿಕ ವಲಯ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಜೀವನ ಹಾಗೂ ಕೆಲಸದ ಭದ್ರತೆ ಪಡೆದುಕೊಳ್ಳಬೇಕಿದೆ.
ಸಂಕಷ್ಟದ ಸಮಯಕ್ಕೆ ನೆರವಾಗುವ ವಿಮೆ, ಪಿಎಫ್ ಸ್ಕೀಂಗಳ ಚಂದಾದಾರರಾಗಬೇಕಿದೆ. ಸರಕಾರದ ಯೋಜನೆಗಳ ಬಗ್ಗೆ ತಿಳುವಳಿಕೆ ನೀಡಿ ಸಹಕರಿಸಲು ಸ್ಥಳೀಯ ಆಡಳಿತಗಳು, ಸಂಘ-ಸAಸ್ಥೆಗಳು ಮುಂದಾಗಬೇಕಾಗಿದೆ ಎಂದರು.
ಪ.ಪA. ಅಧ್ಯಕ್ಷ ಬಿ.ಜೈವರ್ಧನ್ ಮಾತನಾಡಿ, ಕಳೆದೆರೆಡು ವರ್ಷ ಕೋವಿಡ್ ಸಂದರ್ಭ ಶಾಸಕ ಅಪ್ಪಚ್ಚುರಂಜನ್ ತಮ್ಮ ಕ್ಷೇತ್ರದ ಕಾರ್ಮಿಕ ಸಂಘಟನೆಗಳ ಸಂಕಷ್ಟಕ್ಕೆ ಸ್ಪಂದಿಸಿ ಸಾವಿರಾರು ಕಾರ್ಮಿಕರಿಗೆ ನೆರವಾಗಿದ್ದಾರೆ. ಕಾರ್ಮಿಕ ಕಾರ್ಡ್ ಪಡೆದುಕೊಳ್ಳುವ ಮೂಲಕ ಪ್ರತಿಯೊಬ್ಬ ಶ್ರಮಿಕ ಕೂಡ ಸರಕಾರದ ಸೌಲಭ್ಯಕ್ಕೆ ಭಾಜನರಾಗಬಹುದು ಎಂದು ಸಲಹೆ ನೀಡಿದರು.
ಸಂಘಕ್ಕೆ ನಿವೇಶನ ಕೋರಿದ ಸಂಘಟನೆ ಪ್ರಮುಖರ ಬೇಡಿಕೆಗೆ ಪ್ರತಿಕ್ರಿಯಿಸಿದ ಜೈವರ್ಧನ್ ಈ ಬಗ್ಗೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಶಾಸಕರ ನಿರ್ದೇಶನದಂತೆ ಕ್ರಮಕೈಗೊಳ್ಳಲಾಗುವುದು ಎಂದರು. ಠಾಣಾಧಿಕಾರಿ ಅಪ್ಪಾಜಿ ಮಾತನಾಡಿ, ಶ್ರಮಿಕ ವರ್ಗದವರು ತಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿ ಅಧಿಕಾರಿ ಗಳಾಗಿಸಲು ಚಿಂತಿಸಬೇಕಿದೆ ಎಂದರು.
ಉದ್ಯಮಿಗಳಾದ ರಾಮದಾಸ್, ಕೃಷ್ಣ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದಿAದ ನಡೆದ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಘದ ಪ್ರಮುಖರಾದ ಮದನ್, ಶಿವು, ರಂಜಿತ್ ಮತ್ತಿತರರು ಇದ್ದರು.
ಸಿದ್ದಾಪುರ: ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಕಾರ್ಮಿಕರು ಬದುಕುವುದೇ ಕಷ್ಟ ಎಂಬ ಸ್ಥಿತಿಗೆ ದೇಶ ಬಂದು ನಿಂತಿದೆ. ದೇಶದ ಸಂಪತ್ತನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆ ತಾಂಡವವಾ ಡುತ್ತಿರುವಾಗ ಜಾತಿ ಧರ್ಮದ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸಿ ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಕೆ.ವಿ. ಸುನಿಲ್ ಆರೋಪಿಸಿದರು .
ಎಐಟಿಯುಸಿ ಸಂಯೋಜಿತ ಕಾಫಿನಾಡು ಕಟ್ಟಡ ಕಾರ್ಮಿಕರ ಸಂಘಟನೆ ವತಿಯಿಂದ ನಗರದಲ್ಲಿ ನಡೆದ ಕಾರ್ಮಿಕ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕರ ಐಕ್ಯತೆಯಿಂದ ಮಾತ್ರ ಈ ದೇಶವನ್ನು ರಕ್ಷಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಐಟಿಯುಸಿ ರಾಜ್ಯ ಮುಖಂಡ ಧರ್ಮರಾಜ್ ಮಾತನಾಡಿ ಹಲವಾರು ಮಹನಿಯರ ತ್ಯಾಗ ಬಲಿದಾನದ ಮೂಲಕ ಪಡೆದ ಕಾರ್ಮಿಕರ ಹಕ್ಕುಗಳ ದಿನವೇ ಮೇ ದಿನ ಆಚರಣೆ, ಪ್ರಸ್ತುತ ಸರಕಾರಗಳು ಕಾರ್ಮಿಕರ ಹಕ್ಕುಗಳಿಗೆ ತಿದ್ದುಪಡಿ ವಿಧೇಯಕ ತರುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಕಾರ್ಮಿಕರು ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಫಿನಾಡು ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ರಫೀಕ್ ನವಲಗುಂದ, ವೀರಾಜಪೇಟೆ ತಾಲೂಕು ಕಾರ್ಯದರ್ಶಿ ಎಲಿಜಬೆತ್, ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಸಿ.ಕೆ. ಪ್ರಕಾಶ್, ಕುಶಾಲನಗರ ತಾಲೂಕು ಕಾರ್ಯದರ್ಶಿ ವಸಂತ್‌ಕುಮಾರ್, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಎನ್. ಮಣಿ, ಮಾಲ್ದಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪ ಮಣಿ, ಸೀತಾರಾಂ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕಿ ಶಾಂತಿ ಮೊದಲಾದವರು ಉಪಸ್ಥಿತರಿದ್ದರು.