ಮೇ ೧ ಬಂತೆAದರೆ ಕಾರ್ಮಿಕರ ಬಗ್ಗೆ ಒಂದಷ್ಟು ಸಂಗತಿಗಳು ನಮ್ಮ ನಡುವೆ ಬಂದು ಹೋಗುತ್ತವೆ. ಬಳಿಕ ಭಾಷಣ, ಲೇಖನ ಹಾಗೂ ಔಪಚಾರಿಕ ಕಾರ್ಯಕ್ರಮಗಳ ಮೂಲಕ ಅದು ಸಮಾಪ್ತಿಗೊಳ್ಳುತ್ತದೆ. ಅಲ್ಲಿಗೆ ಶ್ರಮಿಕ ವರ್ಗಕ್ಕೆ ಮಾನ್ಯತೆ ದೊರಕಿದಂತಾಯಿತೇ? ಆತ್ಮಾವ ಲೋಕನ ಮಾಡಿಕೊಳ್ಳಬೇಕಾದ ವಿಷಯವಿದು. 'ದುಡಿಯ ಲಾರದವನಿಗೆ ತಿನ್ನುವ ಹಕ್ಕಿಲ್ಲ' ಇದು ೧೨ನೇ ಶತಮಾನದಲ್ಲಿ ಆಸ್ತಿತ್ವದಲ್ಲಿದ್ದ, ಜಗತ್ತಿಗೇ ಮಾದರಿ ಸಾಮಾಜಿಕ ವ್ಯವಸ್ಥೆಯ ಪರಿಚಯ ಮಾಡಿಸಿದ ಶರಣ ಯುಗದ ಧ್ಯೇಯ ವಾಕ್ಯ. ಕಾಯಕದಲ್ಲಿಯೇ ಕೈಲಾಸವನ್ನು ಕಂಡುಕೊAಡ ಹಾಗೂ ಗುರು, ಲಿಂಗ ಜಂಗಮರು ಕೂಡ ಜೀವನದ ಮುಕ್ತಿಗೆ ಕಾಯಕದ ಮೂಲಕ ಶ್ರಮಿಸಬೇಕು ಎಂಬ ಜೀವನಸೂತ್ರವನ್ನು ಸಾರಿದ ಶರಣರ ಜೀವನ ಕ್ರಮವದು. ಅದು ಹಾಗೆಯೇ ಮುಂದುವರಿದಿದ್ದರೆ ಬಹುಶಃ ಇಂದಿನ ಈ ಜಾತಿ, ವರ್ಗ, ವೃತ್ತಿಯಾಧಾರಿತ ತಾರತಮ್ಯಕ್ಕೆ ಎಂದೋ ಅಂತ್ಯ ಹಾಡಬಹುದಿತ್ತು. ಆದರೆ ಹಾಗಾಗಲಿಲ್ಲ. ಬದುಕಿಗಾಗಿ ದುಡಿಮೆ ಎಂಬ ಸೂತ್ರವನ್ನು ಮನುಷ್ಯಕುಲ ಒಪ್ಪಿಕೊಳ್ಳದೆ ಇದ್ದರೆ ಈ ವರ್ಗ ತಾರತಮ್ಯ ಹೀಗೆಯೇ ಮುಂದುವರಿಯುವುದರಲ್ಲಿ ಸಂಶಯವಿಲ್ಲ.

ಮಾಡುವ ವೃತ್ತಿ ಪ್ರತಿಯೊಬ್ಬನಿಗೂ ಒಂದಲ್ಲ ಒಂದು ವಿಧದಲ್ಲಿ ಅನುಕೂಲಕ್ಕೆ ಬಂದೇ ಬರುತ್ತದೆ ಎಂದಾದ ಮೇಲೆ ಈ ಕಾಯಕ ತತ್ವದಲ್ಲಿ ಮೇಲು -ಕೀಳು ಎಂಬ ತಾರತಮ್ಯ ಭಾವವೇಕೆ?

ಯಾವುದೇ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಅಲ್ಲಿಯ ಶ್ರಮಿಕ ವರ್ಗದ ಕೊಡುಗೆ ಮಹತ್ತರವಾದುದು. ಆದರೆ ಅವರಿಗೆ ಸಿಗಬೇಕಾದ ಪ್ರತಿಫಲದಲ್ಲಿ ಅಗ್ರ ಪಾಲನ್ನು ಪಡೆದುಕೊಳ್ಳುತ್ತಿರುವವರು ಯಾರು? ಏಕೆ ದುಡಿಮೆಗೆ ತಕ್ಕ ಪ್ರತಿಫಲವಿಲ್ಲ ಎಂಬ ಕೂಗು ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಇದು ಎಲ್ಲ ಕ್ಷೇತ್ರಗಳಲ್ಲಿಯೂ ಇರುವ ವಾಸ್ತವ ಸತ್ಯ. ಎಲ್ಲ ಕ್ಷೇತ್ರಗಳಲ್ಲಿಯೂ ವೃತ್ತಿಯನ್ನು ಕೆಳಹಂತದಿAದ ಮೇಲು ಹಂತದವರೆಗೆ ಶ್ರೇಣಿಯಾಧಾರಿತವಾಗಿ ವಿಭಾಗಿಸಲಾಗಿರುತ್ತದೆ. ವ್ಯವಸ್ಥೆಯ ಸುಗಮ ನಿರ್ವಹಣೆ ಇದರ ಉದ್ದೇಶ. ಆದರೆ ಇದು ಜನರ ಮನೋಭಾವ ದಲ್ಲಿ ಶ್ರೇಷ್ಠ - ಕನಿಷ್ಟ ಎಂಬ ಸಂಕುಚಿತ ಭಾವಕ್ಕೆ ಕಾರಣವಾಗಿರುವುದು ವಿಷಾದನೀಯ.

ದುಡಿಮೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಕಾರ್ಮಿಕರೇ. ಇಲ್ಲಿ ಮೇಲು -ಕೀಳು ಎಂಬುದು ಕಾಯಕಕ್ಕೆ ಎಸಗುತ್ತಿರುವ ಅಪಚಾರವೇ ಸರಿ. ಸಮಾಜದ ಅವಶ್ಯಕತೆಗಳಿಗಾಗಿ, ಬೇಕಾದ ಪರಿಕರಗಳ ಪೂರೈಕೆಗಾಗಿ ತೊಡಗಿಕೊಂಡ ಎಲ್ಲ ವೃತ್ತಿಗಳೂ ಸಮಾನ ಮಾನ್ಯತೆಗೆ ಒಳಪಟ್ಟಾಗ ಮಾತ್ರ ಕಾಯಕ ತತ್ತ÷್ವದ ನಿಜವಾದ ಅನುಷ್ಠಾನವಾಗುತ್ತದೆ.

ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಗೌರವವಿದೆ. ಜಾತಿ, ವರ್ಣ, ವೃತ್ತಿಯಾಧಾರಿತ ಈ ತಾರತಮ್ಯ ಭಾವ ಭಾರತೀಯ ಸಮಾಜದ ಕಪ್ಪು ಚುಕ್ಕೆ. ನಾಗರಿಕ ಸಮಾಜದ ಅತಿ ದೊಡ್ಡ ದುರಂತ. ನಾಯಕತ್ವವನ್ನು ವಹಿಸಿಕೊಂಡ ವರ್ಗ ದುಡಿಯುವ ವರ್ಗವನ್ನು ಗೌರವಯುತವಾಗಿ, ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನಡೆಸಿಕೊಳ್ಳಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಗೌರವಾದರಗಳು ಸಲ್ಲಬೇಕು. ಕಾಯಕವು ಸ್ವಾಭಿಮಾನದ ಸಂಕೇತವೇ ಹೊರತು ಉಳ್ಳವರ ಅಡಿಯಾಳುಗಳಾಗುವ ದಾಸ್ಯವಲ್ಲ. ಗಾಂಧೀಜಿಯವರು ತಮ್ಮ ಸೆರೆಮನೆಯ ವಾಸದಲ್ಲಿಯೂ ಕಾಯಕದಲ್ಲಿ