ಮೂವತ್ತು ದಿನಗಳ ಉಪವಾಸದ ನಂತರ ವಿಶ್ವದಾ ದ್ಯಂತ ಮುಸ್ಲಿಮರು ದೇವನಿಗೆ ಕೃತಜ್ಞತಾಪೂರ್ವಕವಾಗಿ ಈದುಲ್ ಫಿತ್ರ್ ಹಬ್ಬವನ್ನು ಆಚರಿಸುತ್ತಾರೆ. ಉಪವಾಸದ ದಿನಗಳು ಕಳೆದು ಚಂದ್ರದರ್ಶನವಾದ ಕೂಡಲೇ ಮುಸ್ಲಿಂ ಸಮುದಾಯಕ್ಕೆ ಸಂಭ್ರಮ ಸಂತೋಷ. ಮೂವತ್ತು ದಿನಗಳ ಉಪವಾಸ ಆಚರಿಸಲು ಮತ್ತು ದೇವನ ಆರಾಧನೆ, ಜಪ-ತಪಗಳಲ್ಲಿ ಕಳೆಯುವ ಮತ್ತು ನಿರ್ಗತಿಕರಿಗೆ, ಬಡವರಿಗೆ ನೆರವಾಗಲು ಜಗದೊಡೆಯನು ಅವಕಾಶವನ್ನು ನೀಡಿದುದಕ್ಕಾಗಿ ಈ ಸಂತೋಷ. ಜೀವನವನ್ನು ಮತ್ತೊಮ್ಮೆ ಪಾವನಗೊಳಿಸಿ ದುದಕ್ಕಾಗಿ ಈ ಸಂಭ್ರಮ. ಈದುಲ್ ಫಿತ್ರ್ ಕೃತಜ್ಞತೆಯ ಮತ್ತು ಸಹಾನುಭೂತಿಯ ದಿನವಾಗಿದೆ.
ಓರ್ವ ಸತ್ಯವಿಶ್ವಾಸಿ ತಾನು ಯಾರಾಗಿದ್ದೇನೆಂದೂ, ತಾನು ಸಮಾಜದಲ್ಲಿ ಯಾವ ರೀತಿ ಇರಬೇಕೆಂದೂ ತಿಳಿಯಲು ರಂಝಾನ್ ನೆರವಾಯ್ತು. ಇತರರ ಆಕಾಂಕ್ಷೆಗಳಿಗೆ ಹೊಂದಿಕೊAಡು ಧಾರ್ಮಿಕ ವ್ಯಕ್ತಿತ್ವವನ್ನು ಶಿಸ್ತುಬದ್ಧಗೊಳಿಸಲು ಅವನಿಗೆ ಅವಕಾಶವನ್ನು ನೀಡಿತು. ತಾನು ಎದುರಿಸಿದ ಒಂದು ತಿಂಗಳ ಪರೀಕ್ಷೆಯ ಮೌಲ್ಯಮಾಪನ ಇನ್ನು ನಡೆಯಬೇಕಿದೆ. ಒಂದು ತಿಂಗಳು ಅಳವಡಿಸಿಕೊಂಡ ಕ್ಷಮಾಶೀಲತೆ ಸಹನಾಶೀಲತೆ ಮತ್ತು ಸಹಾನುಭೂತಿ ಮುಂತಾದ ಗುಣಗಳು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮತ್ತು ತನಗೆ ಪ್ರಯೋಜ ನವಾದಲ್ಲಿ ಅವನು ಯಶಸ್ವಿಯಾದ ಎಂದು ಅರ್ಥ. ವೈಯಕ್ತಿಕ ಜೀವನದಲ್ಲಿ ಧಾರ್ಮಿಕ ವ್ಯಕ್ತಿತ್ವವು ಬೆಳೆದು ಬರುವುದರಲ್ಲಿ ರಂಝಾನ್ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಜೀವನದಲ್ಲಿ ಎದುರಾಗುವ ಅನಿಶ್ಚಿತತೆ ಸಂಘರ್ಷಗಳನ್ನು ತಗ್ಗಿಸುವ ತರಬೇತಿಯನ್ನು ರಂಝಾನ್ ಒಬ್ಬ ವಿಶ್ವಾಸಿಗೆ ನೀಡಿತು. ಹಲವು ಸಾಮಾಜಿಕ ಸಂದರ್ಭಗಳಲ್ಲಿನ ಉದ್ವೇಗಗಳನ್ನು ಅದು ಕಡಿತಗೊಳಿಸಿತು. ರಂಝಾನ್ ತಿಂಗಳ ಉಪವಾಸದಿಂದಾಗಿ ವ್ಯಕ್ತಿಯು ಸದಾ ಹೊಣೆಗಾರಿಕೆಯ ಪ್ರಜ್ಞೆಯನ್ನು ಹೊಂದಿರುವAತ ಸ್ಥಾನಕ್ಕೆ ಕೊಂಡೊಯ್ಯಲ್ಪಡುತ್ತಾನೆ. ರಂಝಾನಿನ ಮೂಲಕ ತಾನು ಪಡೆದುಕೊಂಡ ಸಹಜೀವಿಗ ಳೊಂದಿಗಿನ ಕರುಣೆ, ದಯೆ, ಸಹಾನುಭೂತಿ ಈದುಲ್ ಫಿತ್ರ್ ಹಬ್ಬದ ಮೂಲಕವೂ ಮುಂದುವರಿಸುತ್ತಾನೆ.
ಈದುಲ್ ಫಿತ್ರ್ ಪರಿಶುದ್ಧತೆಯ ಹಬ್ಬವಾಗಿದೆ. ಒಬ್ಬ ಮುಸ್ಲಿಂ ಇಡೀ ಒಂದು ತಿಂಗಳೂ ತನ್ನ ಜೀವನದ, ವೈಚಾರಿಕ, ಆದ್ಯಾತ್ಮಿಕ ಮತ್ತು ಪ್ರಾಯೋಗಿಕ ತರಬೇತಿಗಾಗಿ ಮೀಸಲಿಟ್ಟಿದುದರಿಂದ ಈ ತಿಂಗಳ ಮಹತ್ವ ಹೆಚ್ಚುತ್ತದೆ. ಈದುಲ್ ಫಿತ್ರ್ ಆಚರಣೆಯೊಂದಿಗೆ ಅವನು ಅದನ್ನು ಮುಂದುವರಿಸುತ್ತಾನೆ. ಮಾನವನು ತನ್ನ ವೈಯಕ್ತಿಕ ಜೀವನದಲ್ಲಿ ಸಚ್ಚರಿತನಾಗಿರುವಂತೆ ಸಾಮೂಹಿಕ ಬದುಕಿನಲ್ಲೂ ಸಚ್ಚರಿತನಾಗಿರಬೇಕೆಂದು ಇಸ್ಲಾಂ ಬಯಸುತ್ತದೆ. ಒಟ್ಟಿನಲ್ಲಿ ಮನುಷ್ಯನ ತರಬೇತಿಗಾಗಿ ರಂಝಾನ್ ತಿಂಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ಅದರ ಸಂಬAಧವನ್ನು ಪವಿತ್ರ ಕುರ್‌ಆನ್‌ನೊಂದಿಗೆ ಸ್ಥಾಪಿಸಲಾಗಿದೆ. ಪವಿತ್ರ ಕುರ್‌ಆನ್ ಅವತೀರ್ಣದ ಉದ್ದೇಶ ರಂಝಾನ್ ವ್ರತಗಳ ಉದ್ದೇಶಕ್ಕಿಂತ ಭಿನ್ನವಲ್ಲ.
ಈದುಲ್ ಫಿತ್ರ್ ಬಡವರ-ನಿರ್ಗತಿಕರ ಕಣ್ಣೀರನ್ನು ಅರ್ಥ ಮಾಡಿಕೊಳ್ಳುವ ಹಬ್ಬವಾಗಿದೆ. ಆದುದರಿಂದಲೇ ಈದ್‌ನ ಸಂತೋಷ ಇಲ್ಲದವರ ಮನೆಗೂ ತಲುಪಬೇಕು ಹಾಗೂ ಹಬ್ಬಾಚರಣೆ ವೇಳೆ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ “ಫಿತ್ರ್ ಝಕಾತ್” ಎಂಬ ಧಾನ್ಯಗಳ ದಾನವನ್ನು ಇಸ್ಲಾಂ ಕಡ್ಡಾಯ ಗೊಳಿಸಿದೆ. ತನ್ಮೂಲಕ ಇಸ್ಲಾಂ ಒಂದು ಹಸಿವು ಮುಕ್ತ ಸಮಾಜ ನಿರ್ಮಾಣದ ಕಲ್ಪನೆಯನ್ನು ಮುಂದಿಡುತ್ತದೆ. ಹಬ್ಬದ ದಿನದಂದು ತನ್ನ ಅಗತ್ಯಗಳನ್ನು ಪೂರೈಸಲು ಬೇಕಾದ ಆಹಾರ ಧಾನ್ಯವಿರಿಸಿ ಎಲ್ಲರೂ ಫಿತ್ರ್ ಝಕಾತ್ ನೀಡುವುದು ಕಡ್ಡಾಯ ವಾಗಿದೆ. “ಈದ್” ಎಂದರೆ ಮರಳಿ ಬರುವುದು ಎಂಬ ಅರ್ಥವೂ ಇದೆ. ಈದುಲ್ ಫಿತ್ರ್ ಎಂಬುದು ಮರಳುವಿಕೆಯ ಹಬ್ಬವಾಗಿದೆ. ಹಾಗೆಯೇ ಕ್ಷಮಾಪಣೆಯ ಹಬ್ಬವೂ ಆಗಿದೆ. ನಮಾಝ್, ಉಪವಾಸ ವ್ರತ ಮುಂತಾದ ಧಾರ್ಮಿಕ ವಿಧಿ ವಿಧಾನಗಳನ್ನು ಉಲ್ಲಂಘಿಸಿ ದವರಿಗೆ ಕ್ಷಮಾಪಣೆಯನ್ನು ನೀಡಿಕೊಂಡು ಮರಳಿ ಬರಲೂ ಧರ್ಮ ಅವಕಾಶವನ್ನು ಕಲ್ಪಿಸುತ್ತದೆ. ಜಗದೊಡೆಯನ ಮುಂದೆ ಎಲ್ಲಾ ತಪ್ಪುಗಳನ್ನೂ ಹೇಳಿಕೊಂಡು ಕ್ಷಮೆಯನ್ನು ಅಪೇಕ್ಷಿಸಿಕೊಂಡು ವಿಶ್ವಾಸದ ಹಾದಿಯೆಡೆಗೆ ಮರಳಲು ಇಸ್ಲಾಂ ಬೇಡಿಕೆಯನ್ನಿಡುತ್ತದೆ.
ರಂಝಾನ್ ಮತ್ತು ಈದುಲ್ ಫಿತ್ರ್ ಮನುಷ್ಯನ ವೈಯಕ್ತಿಕ ಮತ್ತು ಸಾಮೂಹಿಕ ಜೀವನದಲ್ಲಿ ಕ್ರಾಂತಿಯನ್ನು ಉಂಟುಮಾಡುತ್ತದೆ. ಈದ್‌ನ ದಿನ ವಿಶ್ವಾಸಿಗಳು ಮೊಳಗಿಸುವ ಅಲ್ಲಾಹು ಅಕ್ಬರ್ ಘೋಷಣೆ ಮನುಷ್ಯನನ್ನು ಎಲ್ಲಾ ಬಗೆಯ ಅಹಂಕಾರಗಳಿAದ ಮುಕ್ತಗೊಳಿಸುತ್ತದೆ. “ದೇವಾ ನೀನು ದೊಡ್ಡವನು ಹಾಗೂ ನಾನು ಸಣ್ಣವನು” ಎಂಬುದು ಅದರ ಅರ್ಥ. ಅದರ ಮೂಲಕ ಅವನು ಅಹಂಕಾರದಿAದ ಹೊರಬಂದು ವಿನಯತೆಯನ್ನು ಹೊಂದಿಕೊಳ್ಳುತ್ತಾನೆ. ಈದ್ ನೀಡುವ ಮಾನವೀಯ ಸಂದೇಶ ನಮಗೆ ಪಾಠವಾಗಲಿ.
- ಪಿ.ಕೆ. ಅಬ್ದುಲ್ ರೆಹೆಮಾನ್, ವೀರಾಜಪೇಟೆ,
ಮೊ. ೯೪೪೯೯೮೨೭೨೭,
ಇ-ಮೇಲ್: ಡಿehಚಿmಚಿಟಿviಡಿಚಿರಿಠಿeಣ@gmಚಿiಟ.ಛಿom