ಮಡಿಕೇರಿ, ಏ. ೨೯ : ತಾ.೨೮ ರ ಸಂಜೆ ಸುಮಾರು ೪:೩೦ ಗೆ ಜಿಲ್ಲೆಯ ಹಲವೆಡೆ ಸಿಡಿಲು - ಗುಡುಗಿನ ಆರ್ಭಟ ತೀವ್ರಗೊಂಡಿದ್ದು, ಕಡಗದಾಳು ನಿವಾಸಿ ಬೊಳ್ಯಂಡ ಬಿ.ಕೆ. ಚಿಣ್ಣವ್ವ ಅವರ ಮನೆಗೆ ಸಿಡಿಲು ಬಡಿದಿದ್ದು, ಮನೆಯ ಹೆಂಚುಗಳು ನಾಶವಾಗಿವೆ. ಸಿಡಿಲು ಬಡಿದ ಸಂದರ್ಭ ಚಿಣ್ಣವ್ವ ಅವರು ಮನೆಯಲ್ಲಿಯೇ ಇದ್ದಿದ್ದು ಅವರಿಗೆ ಯಾವುದೇ ಅಪಾಯವಾಗಿಲ್ಲವಾದರೂ ಮನೆಯ ಹೆಂಚುಗಳು ಪುಡಿಪುಡಿಯಾಗಿವೆ. ಸ್ಥಳಕ್ಕೆ ಮಡಿಕೇರಿ ಇ.ಒ ಭೇಟಿ ನೀಡಿ ಪರಿಶೀಲನೆ ನಡೆಸಿದರು.