ಬೆಂಗಳೂರು, ಏ. ೨೯: ಏಪ್ರಿಲ್‌ನಿಂದ ಜುಲೈವರೆಗೆ ಅವಧಿ ಮುಕ್ತಾಯವಾಗಲಿರುವ ಹಾಗೂ ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋತ ವೇಳಾಪಟ್ಟಿ ಪ್ರಕಟಿಸಿದೆ.

ಜಿಲ್ಲೆಯ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾ.ಪಂ.ನ ಎರಡು ಸ್ಥಾನಗಳಿಗೆ, ಪೊನ್ನಂಪೇಟೆ ತಾಲೂಕಿನ ಅರುವತ್ತೊಕ್ಲು ಗ್ರಾ.ಪಂ.ನ ೧ ಹಾಗೂ ತಿತಿಮತಿಯ ೪ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಮೆ ೫ರಂದು ಅಧಿಸೂಚನೆ ಹೊರಬೀಳಲಿದ್ದು, ಮೇ ೨೦ಕ್ಕೆ ಚುನಾವಣೆ ಘೋಷಿಸಲಾಗಿದೆ.