ಮಡಿಕೇರಿ, ಏ.೩೦: ಸರಕಾರವು ಈ ಹಿಂದೆ ಪ್ರಕಟಿಸಿದ್ದ ೨೦೨೨ನೇ ಸಾಲಿನ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಋತುಬ್-ಎ-ರಂಜಾನ್ ಹಬ್ಬದ ಪ್ರಯುಕ್ತ ತಾ. ೩ ರಂದು ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಲಾಗಿತ್ತು. ಆದರೆ ಋತುಬ್-ಎ-ರಂಜಾನ್ ಹಬ್ಬವನ್ನು ತಾ. ೨ ರಂದು ಆಚರಿಸಲು ಮೂನ್ ಕಮಿಟಿಯು ತೀರ್ಮಾನಿಸಿರುವುದರಿಂದ ತಾ. ೩ರ ಬದಲಿಗೆ ತಾ. ೨ ರಂದು ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಲಾಗಿದೆ ಎಂದು ಸರಕಾರದ ಅಧೀನ ಕಾರ್ಯದರ್ಶಿಗಳಾದ ಅಪೇಕ್ಷಾ ಸತೀಶ್ ಪವಾರ್ ಆದೇಶ ಹೊರಡಿಸಿದ್ದಾರೆ.