ಸೋಮವಾರಪೇಟೆ, ಏ.೩೦: ಸಮೀಪದ ಕೋವರ್‌ಕೊಲ್ಲಿ ಟಾಟಾ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಭಾರೀ ಗಾತ್ರದ ಹೆಬ್ಬಾವನ್ನು ಸೆರೆಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಭಾರೀ ಗಾತ್ರದ ಹೆಬ್ಬಾವು ಕಂಡುಬAದಿದ್ದು, ಈ ಬಗ್ಗೆ ಸೋಮವಾರಪೇಟೆಯ ಸ್ನೇಕ್ ರಘು ಅವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ತೆರಳಿದ ರಘು ಅವರು ಹೆಬ್ಬಾವನ್ನು ಸೆರೆ ಹಿಡಿದು ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.

ಕೃಷಿ ಪ್ರದೇಶ ಹಾಗೂ ಜನವಸತಿ ಸ್ಥಳದಲ್ಲಿ ಹಾವುಗಳು ಕಂಡುಬAದರೆ ಅವುಗಳನ್ನು ಸಾಯಿಸದೇ, ಅಂತರ ಕಾಯ್ದುಕೊಂಡು ತಮಗೆ ಮಾಹಿತಿ ನೀಡಿದರೆ (ಮೊ. ೯೮೪೪೫೫೮೬೯೩) ಹಾವನ್ನು ಹಿಡಿದು ದೂರದ ಅರಣ್ಯಕ್ಕೆ ಬಿಡಲಾಗುವುದು ಎಂದು ಸ್ನೇಕ್ ರಘು ತಿಳಿಸಿದ್ದಾರೆ.