ಮಡಿಕೇರಿ, ಏ. ೨೯: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗದ ನಡುವೆ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೨ ಕ್ರಿಕೆಟ್ ಹಬ್ಬದಲ್ಲಿ ಕುಡೆಕಲ್ಲು, ಬಾಡನ, ಪಾಂಡನ, ಬಳ್ಳಡ್ಕ, ಪೇರಿಯನ, ಪಾರೆಮಜಲು ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.
ಇAದು ನಡೆದ ಪಂದ್ಯಾವಳಿಯಲ್ಲಿ ಕೂಡಕಂಡಿ ತಂಡ ಮೂರು ವಿಕೆಟ್ಗೆ ೮೩ ರನ್ ಗಳಿಸಿದರೆ, ಸೆಟ್ಟೆಜನ ತಂಡ ೫ ವಿಕೆಟ್ಗೆ ೫೫ ರನ್ ಗಳಿಸಿ ೨೮ ರನ್ಗಳ ಅಂತರದಿAದ ಸೋಲನುಭವಿಸಿತು. ಕುಕ್ಕೇರ ತಂಡ ೫ ವಿಕೆಟ್ಗೆ ೪೭ ರನ್ ಗಳಿಸಿದರೆ, ಕುದುಕುಳಿ ತಂಡ ೪ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತ್ತು. ವಾಡೆಪ್ಪನ ತಂಡ ೩ ವಿಕೆಟ್ಗೆ ೭೧ ರನ್ ಗಳಿಸಿದರೆ, ಕಡ್ಯದ ತಂಡ ೧ ವಿಕೆಟ್ಗೆ ೬೬ ರನ್ ಗಳಿಸಿ ೫ ರನ್ಗಳ ಅಂತರದಿAದ ಸೋಲನುಭವಿಸಿತು. ಗುಡ್ಡೆಮನೆ ತಂಡ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ ೧೦ ರನ್ ಗಳಿಸಿದರೆ, ಪಾರೆಮಜಲು ತಂಡ ೧.೧ ಓವರ್ನಲ್ಲಿ ೧ ವಿಕೆಟ್ ಕಳೆದುಕೊಂಡು ೧೪ ರನ್ ಗಳಿಸಿ ಜಯಗಳಿಸಿತು. ಅಂಚೆಮನೆ ತಂಡ ೬ ವಿಕೆಟ್ಗೆ ೫೫ ರನ್ ಗಳಿಸಿದರೆ, ಪಾಂಡನ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತ್ತು.
ಬಳ್ಳಡ್ಕ ತಂಡ ೫ ವಿಕೆಟ್ಗೆ ೪೭ ರನ್ ಗಳಿಸಿದರೆ, ಕುದುಕುಳಿ ತಂಡ ೮ ವಿಕೆಟ್ಗೆ ೪೪ ರನ್ ಗಳಿಸಿ ೩ ರನ್ಗಳ ಅಂತರದಿAದ ಸೋಲನುಭವಿಸಿತು. ಕೂಡಕಂಡಿ ತಂಡ ೫ ವಿಕೆಟ್ಗೆ ೪೦ ರನ್ ಗಳಿಸಿದರೆ, ಕುಡೆಕಲ್ಲು ಬಿ ತಂಡ ೪.೧ ಓವರ್ನಲ್ಲಿ ೪೧ ರನ್ ಗಳಿಸಿ ೯ ವಿಕೆಟ್ಗಳ ಜಯ ಸಂಪಾದಿಸಿತು. ಕೋಚನ ತಂಡ ೩ ವಿಕೆಟ್ಗೆ ೫೯ ರನ್ ಗಳಿಸಿದರೆ, ಪೇರಿಯನ ತಂಡ ೩ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತ್ತು. ಬಾಡನ ತಂಡ ೫ ವಿಕೆಟ್ಗೆ ೭೫ ರನ್ ಗಳಿಸಿದರೆ, ವಾಡೆಪ್ಪನ ತಂಡ ೨ ವಿಕೆಟ್ಗೆ ೬೧ ರನ್ ಗಳಿಸಿ ೧೪ ರನ್ ಗಳಿಸಿ ಸೋಲನುಭವಿಸಿತು.
ಕೆದಂಬಾಡಿ ಎ ತಂಡ ೧ ವಿಕೆಟ್ಗೆ ೪೧ ರನ್ ಗಳಿಸಿದರೆ, ಪಾರೆಮಜಲು ತಂಡ ೩ ಓವರ್ನಲ್ಲಿ ಒಂದು ವಿಕೆಟ್ ನಷ್ಟದಲ್ಲಿ ಜಯ ಸಂಪಾದಿಸಿತು. ಪಾಂಡನ ತಂಡ ೩ ವಿಕೆಟ್ಗೆ ೭೮ ರನ್ ಗಳಿಸಿದರೆ, ಪೈಕೇರ ತಂಡ ೨ ವಿಕೆಟ್ಗೆ ೭೫ ರನ್ ಗಳಿಸಿ ಕೇವಲ ೨ ರನ್ಗಳ ಅಂತರದಿAದ ಸೋಲು ಕಂಡಿತು. ಪಾಂಡನ ಸಚಿನ್ ೫೧ ರನ್ ಗಳಿಸಿದರೆ, ಪೈಕೇರ ಫ್ರಿನ್ಸ್ ೪೪ ರನ್ ಗಳಿಸಿ ಗಮನ ಸೆಳೆದರು.