ಶನಿವಾರಸAತೆ, ಏ. ೨೯: ಸಮೀಪದ ಗಡಿಭಾಗ ಕಳಲೆ ಗ್ರಾಮದ ಶ್ರೀ ಬ್ರಹ್ಮದೇವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹೊನಲು ಬೆಳಕಿನ ಸೋಮವಾರಪೇಟೆ ಮತ್ತು ಸಕಲೇಶಪುರ ತಾಲೂಕು ಮಟ್ಟದ ಪುರುಷರ ಕಬಡ್ಡಿ ಹಾಗೂ ಮಹಿಳೆಯರ ಮುಕ್ತ ಥ್ರೋಬಾಲ್ ಟೂರ್ನಿ ಮೇ ೧ ರಂದು ಕಳಲೆ ಗ್ರಾಮದಲ್ಲಿ ಆಯೋಜಿಸಲಾಗಿದೆ. ಗ್ರಾಮಸ್ಥರಿಗೆ ಹಗ್ಗಜಗ್ಗಾಟ ಹಾಗೂ ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಪುರುಷರ ಕಬಡ್ಡಿ ಟೂರ್ನಿಯಲ್ಲಿ ಪ್ರಥಮ ಬಹುಮಾನ ರೂ. ೨೨,೨೨೨, ದ್ವಿತೀಯ ಬಹುಮಾನ ರೂ. ೧೧,೧೧೧, ತೃತೀಯ ಬಹುಮಾನ ರೂ. ೭,೭೭೭, ನಾಲ್ಕನೇ ಬಹುಮಾನ ರೂ. ೪,೪೪೪ ನಗದು ಹಾಗೂ ಆಕರ್ಷಕ ಟ್ರೋಫಿ.
ಮಹಿಳೆಯರ ಮುಕ್ತ ಥ್ರೋಬಾಲ್ ಟೂರ್ನಿಯಲ್ಲಿ ಪ್ರಥಮ ಬಹುಮಾನ ರೂ. ೯,೯೯೯, ದ್ವಿತೀಯ ರೂ. ೪,೪೪೪ ನಗದು ಹಾಗೂ ಆಕರ್ಷಕ ಟ್ರೋಫಿ. ಹಗ್ಗಜಗ್ಗಾಟದಲ್ಲಿ ಪ್ರಥಮ ಬಹುಮಾನ ರೂ. ೨,೦೦೦, ದ್ವಿತೀಯ ರೂ. ೧,೦೦೦ ನಗದು ಹಾಗೂ ಮ್ಯೂಸಿಕಲ್ ಚೇರ್ ವಿಜೇತರಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು.
ಭಾಗವಹಿಸುವ ಕಬಡ್ಡಿ ತಂಡಕ್ಕೆ ಪ್ರವೇಶ ಶುಲ್ಕ ರೂ. ೧,೫೦೦, ಥ್ರೋಬಾಲ್ ತಂಡಕ್ಕೆ ರೂ. ೭೦೦ ಇದ್ದು, ತಾ. ೩೦ರ ಒಳಗೆ ಗೂಗಲ್ ಪೇ ಮೊ. ನಂ. ೯೪೪೯೨೭೪೪೩೬ ಮೂಲಕ ಪಾವತಿಸಿ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಹಾಗೂ ಆಧಾರ್ ಕಾರ್ಡ್ ಮತ್ತು ಐಡಿ ಕಾರ್ಡ್ ಕಡ್ಡಾಯವಾಗಿದ್ದು, ಟೂರ್ನಿಯ ದಿನ ಮೊದಲು ಬಂದ ೩೦ ತಂಡಗಳಿಗೆ ಮಾತ್ರ ಅವಕಾಶ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ೬೩೬೩೨೬೭೮೨೬, ೯೪೪೮೮೭೧೫೩೭ ಸಂಪರ್ಕಿಸಬಹುದು.