ಮಡಿಕೇರಿ, ಏ. ೨೯: ಈ ಬಾರಿಯ ಮುಂಗಾರು ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಯಾವುದೇ ಅನಾಹುತ ಸಂಭವಿಸುವುದಿಲ್ಲ ಎಂದು ಬೆಂಗಳೂರಿನ ಹಿರಿಯ ಭೂ ವಿಜ್ಞಾನಿ ಡಾ. ಹೆಚ್.ಎಸ್.ಎಂ. ಪ್ರಕಾಶ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಮುಂಗಾರಿನಲ್ಲಿ ಸಾಧಾರಣ ಮಳೆ ನಿರೀಕ್ಷಿಸಬಹುದು. ಯಾವುದೇ ಪ್ರಾಕೃತಿಕ ವಿಕೋಪ ಸಂಭವಿಸುವುದಿಲ್ಲ. ಕಳೆದ ಬಾರಿ ಸಂಭವಿಸಿದAತ ಕೆಲವು ಅಪರೂಪದ ಭೂವೈಜ್ಞಾನಿಕ ಘಟನೆಗಳು ಮತ್ತು ಆವಿಮೂಲಗಳು ಈ ವರ್ಷ ಸಕ್ರಿಯವಾಗಿಲ್ಲ ಎಂದು ಮಾಹಿತಿ ನೀಡಿದರು.
ತಾನು ದಿನನಿತ್ಯ ಭೌಗೋಳಿಕವಾಗಿ ನಡೆಯುವ ಬದಲಾವಣೆಗಳನ್ನು ಗಮನಿಸುತ್ತ ಅಧ್ಯಯನ ಹಾಗೂ ಸಂಶೋಧನೆ ಮಾಡುತ್ತಿದ್ದು, ಅದಕ್ಕಾಗಿ ‘ಜಿಯೋ ಮೀಟಿಯೋರಾಲಾಜಿ’ ಎಂಬ ಹೊಸ ವೈಜ್ಞಾನಿಕ ಅಂತರ ಶಿಸ್ತೀಯ ಅಧ್ಯಯನ ಸಿದ್ಧಾಂತ ಪರಿಚಯಿಸುತ್ತಿದ್ದು, ಇದು ವೈಜ್ಞಾನಿಕ ಲೋಕಕ್ಕೆ ಸಹಕಾರಿಯಾಗಲಿದೆ. ಇದರಿಂದ ಸಾಗರ ತಳದ ಜ್ವಾಲಾಮುಖಿ ಸ್ಫೋಟದಿಂದ ಸಂಭವಿಸುವ ಹವಾಮಾನ ವೈಪರೀತ್ಯಗಳ ಬಗ್ಗೆ ಅರಿತುಕೊಳ್ಳಬಹುದು ಎಂದು ವಿವರಿಸಿದರು.
ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪ ಸಂಬAಧ ಹೇಳಿದ ಮಾತು ಸತ್ಯವಾಗಿದೆ. ಈ ಬಾರಿಯೂ ಯಾವುದೇ ಅನಾಹುತ ಎದುರಾಗುವುದಿಲ್ಲ ಎಂದು ಒತ್ತಿ ಹೇಳಿದರು. ಗೋಷ್ಠಿಯಲ್ಲಿ ಕುಶಾಲನಗರದ ನೆರೆ ಸಂತ್ರಸ್ತರ ವೇದಿಕೆ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಇದ್ದರು.