ಮಡಿಕೇರಿ, ಏ. ೨೭: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಏರ್ಪಡಿಸಲಾಗಿರುವ ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬ ‘ಕುಟುಂಬ-೨೦೨೨’ನಲ್ಲಿ ಬುಧವಾರ ೪ ಕುಟುಂಬಗಳು ಪ್ರಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದುಕೊಂಡವು.
ಹುದೇರಿ, ತಳೂರು, ಕಟ್ಟೆಮನೆ, ಉಳುವಾರು ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದ ತಂಡಗಳು. ಹುದೇರಿ ಹಾಗೂ ಬೈಲೋಳಿ ನಡುವೆ ನಡೆದ ನಿಗದಿತ ೬ ಓವರ್ಗಳಿಗೆ ನಡೆದ ಪಂದ್ಯಾಟದಲ್ಲಿ ಹುದೇರಿ ನೀಡಿದ ೮೫ ರನ್ ಬೆನ್ನಟ್ಟಿದ ಬೈಲೋಳಿ ೧ ವಿಕೆಟ್ ಕಳೆದುಕೊಂಡು ಕೇವಲ ೪೬ ರನ್ ಗಳಿಸುವಲ್ಲಿ ಮಾತ್ರ ಶಕ್ತವಾಯಿತು. ೩೯ ರನ್ಗಳ ಅಂತರದಲ್ಲಿ ಹುದೇರಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.
ಮೇರ್ಕಜೆ ಹಾಗೂ ಬಿದ್ರುಪಾಣೆ ನಡುವೆ ನಡೆದ ಪಂದ್ಯಾವಳಿಯಲ್ಲಿ ೫ ವಿಕೆಟ್ಗಳು ಕಳೆದುಕೊಂಡು ಮೇರ್ಕಜೆ ೫೬ ರನ್ ಗುರಿಯನ್ನು ನೀಡಿತು. ಇದನ್ನು ೩.೪ ಓವರ್ಗಳಲ್ಲಿ ಮುಗಿಸಿ ಬಿದ್ರುಪಾಣೆ ಗೆಲುವಿನ ನಗೆ ಬೀರಿತು. ೬ ವಿಕೆಟ್ ಕಳೆದುಕೊಂಡು ೫೭ ರನ್ಗಳ ಗುರಿಯನ್ನು ಕುಲ್ಲಚೆಟ್ಟಿ ತಂಡ ಕೇಕಡ ತಂಡಕ್ಕೆ ನೀಡಿತು. ಕೇವಲ ೩.೪ ಓವರ್ನಲ್ಲಿ ಕೇಕ್ಕಡ ೩ ವಿಕೆಟ್ ಕಳೆದುಕೊಂಡು ೫೮ ರನ್ ದಾಖಲಿಸಿ ವಿಜಯ ಸಾಧಿಸಿತು.
ಕೋಟೇರ ತಂಡ ೫ ವಿಕೆಟ್ ಕಳೆದುಕೊಂಡು ೭೧ ರನ್ಗಳ ಗುರಿಯನ್ನು ಹುಲಿಮನೆಗೆ ನೀಡಿತು. ಇದನ್ನು ಬೆನ್ನತ್ತಿದ ಹುಲಿಮನೆ ೩ ವಿಕೆಟ್ ಕಳೆದುಕೊಂಡು ೫೮ ರನ್ ಗಳಿಸಿ ಸೋಲುಂಡಿತು. ದೇರಜೆ ತಂಡ ನಿಗದಿತ ೬ ಓವರ್ನಲ್ಲಿ ೪ ವಿಕೆಟ್ ಕಳೆದುಕೊಂಡು ಕೇವಲ ೧೫ ರನ್ ದಾಖಲಿಸಿತು. ಇದನ್ನು ಪೊಡನೋಳನ ತಂಡ ೫ ಬಾಲ್ನಲ್ಲಿ ಮುಗಿಸಿ ಗೆಲುವು ಕಂಡರು.
ಕೊಂಪುಳಿರ ವಿರುದ್ಧ ನೆಯ್ಯಣಿ ತಂಡ ೧೭ ರನ್ಗಳ ಅಂತರದಲ್ಲಿ ಗೆಲುವು ಪಡೆದುಕೊಂಡಿತು. ೩ ವಿಕೆಟ್ ಕಳೆದುಕೊಂಡ ನೆಯ್ಯಣಿ ೭೮ ರನ್ಗಳ ಗುರಿಯನ್ನು ಎದುರಾಳಿ ಕೊಂಪುಳಿರ ತಂಡಕ್ಕೆ ನೀಡಿತು. ಗುರಿ ಬೆನ್ನತ್ತಿದ ಕೊಂಪುಳಿರ ೪ ವಿಕೆಟ್ ನಷ್ಟಕ್ಕೆ ೬೧ ರನ್ ದಾಖಲಿಸಿ ಸೋಲಿನ ರುಚಿ ಅನುಭವಿಸಿತು.
ಕುಕ್ಕುನೂರು ನೀಡಿದ ೪೧ ರನ್ಗಳ ಗುರಿಯನ್ನು ಬೆನ್ನಟ್ಟಿದ ಹುದೇರಿ ೩ ಓವರ್ಗಳಲ್ಲಿ ೪೫ ರನ್ ದಾಖಲಿಸಿ ಗೆಲುವು ಪಡೆದು ಪ್ರಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿತು. ೩ ವಿಕೆಟ್ ನಷ್ಟಕ್ಕೆ ೪೦ ರನ್ ಗುರಿ ನೀಡಿದ ಮಿತ್ತೂರು ತಂಡವನ್ನು ಉಳುವಾರು ೩.೧ ಓವರ್ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೪೩ ರನ್ ಪೇರಿಸಿ ಗೆಲುವು ಪಡೆದುಕೊಂಡಿತು.
೩ ವಿಕೆಟ್ ನಷ್ಟಕ್ಕೆ ಬೃಹತ್ ೭೦ ರನ್ಗಳ ಗುರಿ ನೀಡಿದ ತಳೂರು ವಿರುದ್ಧ ಕಡ್ಲೇರ ೫ ವಿಕೆಟ್ ಕಳೆದುಕೊಂಡು ೪೯ ರನ್ ಮಾತ್ರ ದಾಖಲಿಸಿ ಸೋತಿತು. ೩ ವಿಕೆಟ್ ನಷ್ಟಕ್ಕೆ ಕಟ್ಟೆಮನೆ ೪೬ ರನ್, ೨ ವಿಕೆಟ್ ನಷ್ಟಕ್ಕೆ ಬಿದ್ರುಪಾಣೆ ೩೮ ರನ್ ದಾಖಲಿಸಿ ಕಟ್ಟೆಮನೆ ವಿರುದ್ಧ ಬಿದ್ರುಪಾಣೆ ೮ ರನ್ಗಳಲ್ಲಿ ಸೋಲು ಕಂಡಿತು. ೧ ರನ್ಗÀಳ ಅಂತರದಲ್ಲಿ ಕೋಟೇರ ವಿರುದ್ಧ ಮೇಲ್ಚೆಂಬು ಗೆಲುವು ಪಡೆದುಕೊಂಡಿತು. ೬ ಓವರ್ನಲ್ಲಿ ಕೋಟೇರ ದಾಖಲಿಸಿದ ೬೦ ರನ್ಗಳನ್ನು ೩.೪ ಓವರ್ನಲ್ಲಿ ೬೧ ರನ್ ಗಳಿಸಿ ವಿಜಯಿಯಾಯಿತು. ಪೊನ್ನಚ್ಚನ ೧ ವಿಕೆಟ್ ನಷ್ಟಕ್ಕೆ ನೀಡಿದ ಬೃಹತ್ ೯೮ ರನ್ ಗುರಿ ಬೆನ್ನತ್ತಿದ ಕೇಕ್ಕಡ ೩ ವಿಕೆಟ್ ನಷ್ಟಕ್ಕೆ ಕೇವಲ ೩೯ ರನ್ ಗಳಿಸಿ ಸೋಲು ಕಾಣಬೇಕಾಯಿತು.