ಮಡಿಕೇರಿ,ಏ.೨೭: ನಗರದ ಹೊರ ವಲಯದ ಕರ್ಣಂಗೇರಿಯಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ ಮೇ. ೨ಹಾಗೂ ೩ರಂದು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದೇವಾಲಯದ ಧರ್ಮದರ್ಶಿ ಗೋವಿಂದ ಸ್ವಾಮಿ ಅವರು, ಮೇ.೨ರಂದು ಸಂಜೆ ೬.೩೦ರಿಂದ ಶ್ರೀ ವೆಂಕಟರಮಣ ದೇವರ ಹರಿಸೇವೆಯೊಂದಿಗೆ ಜಾತ್ರೋತ್ಸವ ಆರಂಭಗೊಳ್ಳುತ್ತದೆ. ತಾ. ೨೬ರಿಂದ ದೇವಾಲಯದಲ್ಲಿ ಪ್ರತಿದಿನ ಬೆಳಿಗ್ಗೆ ೯.೩೦ಗಂಟೆವರೆಗೆ ಪೂಜೆ ಆರಂಭಗೊAಡಿದ್ದು, ಮೇ.೩ರವರೆಗೆ ನಡೆಯಲಿದೆ. ಮೇ.೩ರಂದು ಬೆಳಿಗ್ಗೆ ೬ ಗಂಟೆಗೆ ಧ್ವಜಾರೋಹಣ , ೬.೩೦ಕ್ಕೆ ಗಣಪತಿ ಹೋಮ, ೭.೩೦ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ, ತೀರ್ಥಸ್ನಾನ ನಡೆಯಲಿದೆ. ೯.೨೦ಕ್ಕೆ ಕಳಸ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾ ಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು.
ಬಳಿಕ ೧೧.೪೫ಕ್ಕೆ ದೇವಿಯ ರಥೋತ್ಸವವು ದೇವಸ್ಥಾನದ ಆವರಣದ ಸುತ್ತಲೂ ನಡೆಯಲಿದೆ. ನಂತರ ತುಲಾಭಾರ, ತಲೆಮುಡಿ ತೆಗೆಯುವದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮಾರ್ಚನೆ, ಮಂಗಳಾರತಿ ನೆರವೇರಲಿದೆ. ಅಪರಾಹ್ನ ೧೨ ಗಂಟೆಗೆ ಅನ್ನದಾನ ನೆರವೇರಲಿದ್ದು, ೧೨.೩೦ಕ್ಕೆ ತಾಯಿಯ ದರ್ಶನ ಆಗಲಿದೆ ಎಂದು ಮಾಹಿತಿ ನೀಡಿದರು.
ಸಂಜೆ ಆರು ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೀಪಾಲಂಕಾರದ ಬಳಿಕ ೯ಗಂಟೆಗೆ ಅನ್ನದಾನ ಸೇವೆ,
(ಮೊದಲ ಪುಟದಿಂದ) ದೇವಿಯ ದರ್ಶನ, ಪೂಜಾ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ಪ್ರತಿ ಸೋಮವಾರ ಹಾಗೂ ಶನಿವಾರ ಮತ್ತು ಅಮಾವಾಸ್ಯೆ ದಿನಗಳಂದು ರಾತ್ರಿ ೮ ಗಂಟೆಯಿAದ ಹಾಗೂ ಪ್ರತಿ ಮಂಗಳವಾರ ಹಾಗೂ ಶುಕ್ರವಾರಗಳಂದು ಹಗಲು ೧೦ ಗಂಟೆಯಿAದ ಪೂಜೆ ನಡೆಯಲಿದೆ. ಪೂಜೆ ಸಂದರ್ಭಗಳಲ್ಲಿ ಅನ್ನದಾನ ಮಾಡಿಸಲು ಇಚ್ಛಿಸುವವರು ದೇವಾಲಯದಲ್ಲಿ ಹೆಸರು ನೋದಾಯಿಕೊಳ್ಳಬಹುದು ಎಂದು ಗೋವಿಂದ ಸ್ವಾಮಿ ತಿಳಿಸಿದರು. ಗೋಷ್ಠಿಯಲ್ಲಿ ದೇವಾಲಯ ಆಡಳಿತ ಮಂಡಳಿ ಸದಸ್ಯರುಗಳಾದ ಕಿರಣ್ಕುಮಾರ್, ಚುಮ್ಮಿ ದೇವಯ್ಯ, ತಾರಪ್ರಸಾದ್ ಇದ್ದರು.