ಸೋಮವಾರಪೇಟೆ, ಏ. ೨೭: ನಿನ್ನೆ ರಾತ್ರಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಕುಂದಳ್ಳಿ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಯ ನಡುವೆ ೨೫ ಕೆ.ಜಿ. ತೂಕದ ಆಲಿಕಲ್ಲು ಕೆಳಬಿದ್ದಿದೆ.
ಕುಂದಳ್ಳಿ ಗ್ರಾಮದಲ್ಲಿ ತಡರಾತ್ರಿ ಸುರಿದ ಭಾರೀ ಮಳೆಯ ನಡುವೆ ಬೃಹತ್ ಗಾತ್ರದ ಆಲಿಕಲ್ಲು ಬಿದ್ದಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಗ್ರಾಮದ ಕಟ್ಟೆಮರದ ಸಮೀಪ ಬಿದ್ದಿದ್ದ ಬೃಹತ್ ಗಾತ್ರದ ಆಲಿಕಲ್ಲನ್ನು ಮಂಜುಳಾ ಹಾಗೂ ದೃತನ್ ಅವರುಗಳು ಹೊತ್ತುಕೊಂಡು ಬಂದಿದ್ದು, ಇದು ೨೫ ಕೆ.ಜಿ. ತೂಕವಿರುವುದಾಗಿ ತಿಳಿಸಿದ್ದಾರೆ.
(ಮೊದಲ ಪುಟದಿಂದ)
ಈ ಭಾಗದಲ್ಲಿ ಇದೇ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಆಲಿಕಲ್ಲು ಬಿದ್ದಿದೆ. ರಸ್ತೆಗೆ ಒತ್ತಿಕೊಂಡAತಿರುವ ಖಾಲಿ ಜಾಗದಲ್ಲಿ ಬಿದ್ದಿದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಆಕಸ್ಮಾತ್ ಮನೆಯ ಮೇಲ್ಭಾಗ ಬಿದ್ದಿದ್ದರೆ ಅಪಾಯ ಸಂಭವಿಸುತ್ತಿತ್ತು ಎಂದು ಗ್ರಾಮಸ್ಥರು ಅಭಿಪ್ರಾಯಿಸಿದ್ದಾರೆ.