ವೀರಾಜಪೇಟೆ, ಏ. ೨೭: ವೀರಾಜಪೇಟೆ ಮಾಜಿ ಸೈನಿಕರ ಸಹಕಾರ ಇ.ಸಿ.ಹೆಚ್.ಎಸ್. ಪಾಲಿ ಕ್ಲಿನಿಕ್‌ಗೆ ಮೇಜರ್ ಜನರಲ್ ಜೆ.ವಿ. ಪ್ರಸಾದ್ ಭೇಟಿ ನೀಡಿ ಪರಿಶೀಲಿಸಿ ಮಾಜಿ ಸೈನಿಕರ ಕುಂದು ಕೊರತೆಗಳನ್ನು ಆಲಿಸಿದರು.
ಈ ಸಂದರ್ಭ ಕೊಡಗಿನಲ್ಲಿ ಎಂ ಪ್ಯಾನಲ್ ಆಸ್ಪತ್ರೆಯನ್ನು ಮಂಜೂರು ಮಾಡಿ ಕೊಡಬೇಕೆಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಅವರು ಗಮನ ಸೆಳೆದರು. ಅಹವಾಲು ಸ್ವೀಕರಿಸಿ ಇದರ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಸಕಾರಾತ್ಮಕ ಸ್ಪಂದನ ನೀಡಿದರು. ಪ್ರತಿಯೊಬ್ಬ ಮಾಜಿ ಸೈನಿಕರು ಪಾಲಿಕ್ಲಿನಿಕ್ ಪ್ರಯೋಜನ ಪಡೆದುಕೊಳ್ಳುವಂತೆ ಹೇಳಿದರು.
ಭೇಟಿ ಸಂದರ್ಭ ಮಾಜಿ ಸೇನಾ ಅಧಿಕಾರಿಗಳಾದ ಬಾಚಮಂಡ ಎ. ಕಾರ್ಯಪ್ಪ, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್, ಪ್ರಮುಖರಾದ ಪುಗ್ಗೆರ ನಂದಾ, ಕರ್ನಲ್ ನಾರಾಯಣ್, ಇ.ಸಿ.ಹೆಚ್.ಎಸ್. ಪಾಲಿ ಕ್ಲಿನಿಕ್ ಅಧಿಕಾರಿ ಲೆ.ಕ. ಲಕ್ಷಿö್ಮನಾರಾಯಣ್ ಉಪಸ್ಥಿತರಿದ್ದರು. ಪಾಲಿ ಕ್ಲಿನಿಕ್‌ನಲ್ಲಿ ಉತ್ತಮ ಸೇವೆ ಸಲ್ಲಿಸಿದ ಮಾಜಿ ಸೈನಿಕ ತೋರೆರ ಎನ್ ಕುಟ್ಟಪ್ಪ ಹಾಗೂ ಚೊಟ್ಟಂಡ ರಷ್ಮಿ ಅಪ್ಪಣ್ಣ ಅವರನ್ನು ಸನ್ಮಾನಿಸಿದರು.