ಚೆಯ್ಯಂಡಾಣೆ, ಏ ೨೭: ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿದ್ದಂಡ ರಾಜೇಶ್ ಅಚ್ಚಯ್ಯ, ಉಪಾಧ್ಯಕ್ಷರಾಗಿ ಬಾಚಮಂಡ ಸುಬ್ರಮಣಿ ಅವಿರೋಧವಾಗಿ ಆಯ್ಕೆಯಾದರು.

ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಈರ್ವರು ಆಕಾಂಕ್ಷಿಗಳಿದ್ದರು. ಅಭ್ಯರ್ಥಿ ಬಿದ್ದಂಡ ರಾಜೇಶ್ ಅಚ್ಚಯ್ಯ ಹಾಗೂ ಚೇನಂಡ ಟಿ. ಚಂಗಪ್ಪ ನಡುವೆ ತೀವ್ರ ಪೈಪೋಟಿ ನಡೆದು ಅಂತಿಮವಾಗಿ ಲಾಟರಿ ಮೂಲಕ ರಾಜೇಶ್ ಅಚ್ಚಯ್ಯ ಗೆಲುವು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಿಲ್ಲದ ಕಾರಣ ಸಾಲಗಾರರ ಕ್ಷೇತ್ರದ ಅಭ್ಯರ್ಥಿ ಬಾಚಮಂಡ ಸುಬ್ರಮಣಿ ಅವಿರೋಧ ಆಯ್ಕೆಯಾದರು. ಚುನಾವಣಾ ಉಸ್ತುವಾರಿಯನ್ನು ಸಂದೀಪ್ ಪಿ.ಜಿ. ವಹಿಸಿದರು. ಈ ಸಂದರ್ಭ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಉಮಾವತಿ ಹಾಗೂ ನೂತನ ನಿರ್ದೇಶಕರುಗಳು ಉಪಸ್ಥಿತರಿದ್ದರು.