ಗುಡ್ಡೆಹೊಸೂರು, ಏ. ೨೭: ಇಲ್ಲಿನ ಅಂಗಡಿಗಳಿಗೆ ಮತ್ತು ಹೊಟೇಲ್‌ಗಳಿಗೆ ಆರೋಗ್ಯ ಇಲಾಖಾ ಅಧಿಕಾರಿಗಳು ದಾಳಿ ಮಾಡಿ ದಂಡ ವಿಧಿಸಿದರು. ಅಂಗಡಿ ಮುಂಭಾಗದಲ್ಲಿ ಧೂಮಪಾನ ಮಾಡಬಾರದು ಎಂಬ ನಾಮಫಲಕ ಅಳವಡಿಸದ ಅಂಗಡಿಗಳಿಗೆ ಮತ್ತು ಹೊಟೇಲ್‌ಗಳಿಗೆ ದಂಡ ವಿಧಿಸಲಾಯಿತು. ಈ ಸಂದರ್ಭ ಆರೋಗ್ಯ ಇಲಾಖೆಯ ಶಿಕ್ಷಣ ಅಧಿಕಾರಿ ಶಾಂತಿ ಮತ್ತು ಆರೋಗ್ಯ ನಿರೀಕ್ಷಕ ವಿಶ್ವಜ್ಞಾ, ಗ್ರಾಮ ಪಂಚಾಯಿತಿ ನೌಕರ ಕೌಶಿಕ್ ಭಾಗವಹಿಸಿದ್ದರು.