ವೀರಾಜಪೇಟೆ, ಏ. ೨೭: ವೀರಾಜಪೇಟೆ ನಗರದಲ್ಲಿ ಅಂಗಡಿ ಮಳಿಗೆಯವರು ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆ ಹಿನ್ನೆಲೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಂಗಡಿಗಳಿಗೆ ದಾಳಿ ನಡೆಸಿ ಪರಿಶೀಲನೆ ಮಾಡಿದರು. ಪ್ಲಾಸ್ಟಿಕ್ ಕೈಚೀಲ ಬಳಕೆ ಮಾಡುತ್ತಿದ್ದ ಅಂಗಡಿಯವರಿಗೆ ದಂಡ ಕೂಡ ವಿಧಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಚಂದ್ರಕುಮಾರ್, ಪ.ಪಂ. ಆರೋಗ್ಯ ಅಧಿಕಾರಿ ಕೋಮಲ, ಸಿಬ್ಬಂದಿಗಳಾದ ಐವಾನ್ ಡಿಸೋಜ, ಮುರಳಿ, ಧನಂಜಯ ಹಾಜರಿದ್ದರು.