ಮಡಿಕೇರಿ, ಏ. ೨೭: ಕೊಡವ ಕುಟುಂಬಗಳ ನಡುವಿನ ೨೦ನೇ ವರ್ಷದ ಕೌಟುಂಬಿಕ ಕ್ರಿಕೆಟ್ ಹಬ್ಬ ಮೇ ೧ ರಿಂದ ಅಮ್ಮತ್ತಿಯಲ್ಲಿ ಪ್ರಾರಂಭಗೊಳ್ಳಲಿದೆ. ಮೂರು ವರ್ಷಗಳ ಅಂತರದ ಬಳಿಕ ಈ ಕ್ರಿಕೆಟ್ ಉತ್ಸವಕ್ಕೆ ಮರು ಚಾಲನೆ ಸಿಗುತ್ತಿದ್ದು, ಈ ಪಂದ್ಯಾವಳಿಯನ್ನು ಚೆಂಬೆಬೆಳ್ಳೂರು ಮೂಲದ ಪೊರುಕೊಂಡ ಕುಟುಂಬಸ್ಥರು ಆಯೋಜಿಸುತ್ತಿದ್ದಾರೆ.

ಈಗಾಗಲೇ ಕುಟುಂಬ ತಂಡಗಳ ನೋಂದಣಿ ಹಾಗೂ ಟೈಸ್‌ಪ್ರಕ್ರಿಯೆ ಪೂರ್ಣಗೊಂಡಿದೆ. ೨೦೧೮ರಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಡ್ಲಂಡ ಕುಟುಂಬ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ೨೧೧ ತಂಡಗಳು ಭಾಗಿಯಾಗಿದ್ದವು. ಬಳಿಕ ಪ್ರಾಕೃತಿಕ ವಿಕೋಪ ಹಾಗೂ ಕೊರೊನಾ ಕಾರಣದಿಂದಾಗಿ ಪಂದ್ಯಾಟ ನಡೆದಿರಲಿಲ್ಲ. ಇದೀಗ ಮರು ಚಾಲನೆ ಕಾಣುತ್ತಿರುವ ಉತ್ಸವ ಪೊರುಕೊಂಡ ಕಪ್ - ೨೦೨೨ ರಲ್ಲಿ ಒಟ್ಟು ೧೯೨ ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊAಡಿವೆ. ಇನ್ನಷ್ಟು ಕುಟುಂಬ ಗಳಿಂದ ಭಾರೀ ಒತ್ತಡ ಬರುತ್ತಿದ್ದರೂ ಟೈಸ್ ಪ್ರಕ್ರಿಯೆ ಪೂರ್ಣ ಗೊಂಡಿರುವುದರಿAದ ಮತ್ತೆ ಸೇರ್ಪಡೆ ಕಷ್ಟ ಸಾಧ್ಯವಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಪಂದ್ಯಾವಳಿ ನಡೆಯುತ್ತಿದ್ದು, ಅಮ್ಮತ್ತಿಯ ಎರಡು ಮೈದಾನದಲ್ಲಿ ಮೇ ೧ ರಿಂದ ಪಂದ್ಯ ಪ್ರಾರಂಭವಾಗಲಿದೆ. ಮೇ ೧ ರಂದು ಉದ್ಘಾಟನಾ ಸಮಾರಂಭ, ಪ್ರದರ್ಶನ ಪಂದ್ಯ ಸಹಿತವಾಗಿ ಹಲವು ಆಕರ್ಷಣೆಗಳೊಂದಿಗೆ ಜರುಗಲಿದೆ. ಕುಟುಂಬದ ಅಧ್ಯಕ್ಷ ಪೊರುಕೊಂಡ ಯು. ಬೋಪಣ್ಣ ಅಧ್ಯಕ್ಷತೆಯಲ್ಲಿ ಹಾಗೂ ಪಟ್ಟೆದಾರ

(ಮೊದಲ ಪುಟದಿಂದ) ಜೋಯಪ್ಪ ಉಪಸ್ಥಿತಿಯಲ್ಲಿ ಸಮಾರಂಭ ನಿಗದಿಯಾಗಿದೆ. ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಪನ್ ಕಾರ್ಯಪ್ಪ, ರಾಜ್ಯ ಇಂಧನ ಇಲಾಖೆಯ ಮುಖ್ಯಸ್ಥರಾಗಿರುವ ತೀತಿರ ರೋಷನ್ ಅಪ್ಪಚ್ಚು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶಾಸಕರುಗಳಾದ ವೀಣಾ ಅಚ್ಚಯ್ಯ, ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ಸುಜಾಕುಶಾಲಪ್ಪ, ಎಸ್‌ಪಿ ಮಲಚೀರ ಅಯ್ಯಪ್ಪ, ರಿಪಬ್ಲಿಕ್ ಟಿ.ವಿ. ನೆಟ್‌ವರ್ಕ್ನ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಚೇರಂಡ ಕಿಶನ್ ಪೂವಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಮೈದಾನ ಸಿದ್ಧತೆಗೆ ಭೂಮಿಪೂಜೆ

ಮೈದಾನದ ಸಿದ್ಧತೆಗೆ ಕುಟುಂಬಸ್ಥರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಕುಟುಂಬದ ಅಧ್ಯಕ್ಷ ಬೋಪಣ್ಣ÷ಈಗಾಗಲೇ ಸಕಲ ಸಿದ್ಧತೆ ನಡೆದಿರುವದಾಗಿ ತಿಳಿಸಿದರು. ಈ ಸಂದರ್ಭ ಕುಟುಂಬ ಪ್ರಮುಖರಾದ ಜೋಯಪ್ಪ, ಸುನಿಲ್, ದಿಲೀಪ್, ಸಾಬ, ಯಶವಂತ್, ತಿಮ್ಮಯ್ಯ, ಬಿನ್ನಿ ಪೂಣಚ್ಚ, ನಿಖಿಲ್ ಗಣಪತಿ, ಜಾಲು ತಿಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು. ಪಂದ್ಯಾವಳಿಯ ನಿರ್ದೇಶಕರಾಗಿ ನೆಲ್ಲಚಂಡ ಯತೀಶ್ ನಾಚಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಕ್ಕಲೆರ ಧ್ಯಾನ್ ದೇವಯ್ಯ, ಕನ್ನಂಡ ಕರುಣ್ ಮತ್ತಿತರರು ಸಹಕಾರ ನೀಡುತ್ತಿದ್ದಾರೆ.