ನಾಪೋಕ್ಲು, ಏ. ೨೭: ಅಂರ‍್ರಾಷ್ಟಿçÃಯ ಹಾಕಿ ಪಂದ್ಯಾಟದ ತೀರ್ಪುಗಾರ್ತಿ ಅನುಪಮಾ ಜ್ಞಾಪಕಾರ್ಥ ಹಾಕಿ ಟೂರ್ನ್ಮೆಂಟ್ ಅನ್ನು ಶಿವಾಜಿ ಕ್ಲಬ್ ನಾಪೋಕ್ಲು ವತಿಯಿಂದ ಮೇ ೧೭ ರಿಂದ ೨೨ ರವರೆಗೆ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣ ಚೆರಿಯಪರಂಬುವಿನಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ತಿಳಿಸಿದೆ.

ಅನುಪಮ ಅಂರ‍್ರಾಷ್ಟಿçÃಯ ಹಾಕಿ ತೀರ್ಪುಗಾರರಾಗಿದ್ದರು. ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಪಂದ್ಯಾಟ ನಡೆಸಲು ತೀರ್ಮಾನಿಸಲಾಗಿದೆ. ಇದು ಕೊಡಗು ಜಿಲ್ಲಾ ಓಪನ್ ಟೂರ್ನಮೆಂಟ್ ಆಗಿದ್ದು ಪ್ರತಿ ತಂಡದಲ್ಲಿ ಮೂರು ಅತಿಥಿ ಆಟಗಾರರು ಆಡಲು ಅವಕಾಶವಿರುತ್ತದೆ. ಮೊದಲನೇ ಬಹುಮಾನ ೫೦,೦೦೦ ಮತ್ತು ಎರಡನೇ ಬಹುಮಾನ ೩೦,೦೦೦ ನಗದು ಮತ್ತು ಟೋಫಿಯನ್ನು ನೀಡಲಾಗುವುದು ಸೆಮಿಫೈನಲ್ಸ್ಗೆ ಬಂದ ತಂಡಗಳಿಗೂ ಮೂರು ಮತ್ತು ನಾಲ್ಕನೇ ಬಹುಮಾನವನ್ನು ನೀಡಲಾಗುವುದು. ಎಲ್ಲಾ ತಂಡಗಳು ಮೇ ೫ ರೊಳಗೆ ತಮ್ಮ ತಂಡವನ್ನು ನೋಂದಣಿ ಮಾಡತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ. ೯೬೮೬೮೬೯೨೧೩ ಸಂಪರ್ಕಿಸುವAತೆ ಪ್ರಕಟಣೆ ಕೋರಿದೆ.