ಮಡಿಕೇರಿ, ಏ. ೨೭: ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಮುನಿರತ್ನ ಅವರು ತಾ. ೨೮ ಮತ್ತು ೨೯ ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ತಾ. ೨೮ ರಂದು (ಇಂದು) ಮಧ್ಯಾಹ್ನ ೩.೩೦ ಗಂಟೆಗೆ ನಗರದ ರಾಜಾಸೀಟು ಉದ್ಯಾನವನ ಪರಿಶೀಲನೆ ಮಾಡಲಿದ್ದಾರೆ. ನಂತರ ಸಂಜೆ ೪.೩೦ ಗಂಟೆಗೆ ಚೆಟ್ಟಳ್ಳಿಯ ಕೇಂದ್ರ ತೋಟಗಾರಿಕಾ ಪ್ರಯೋಗ ಕೇಂದ್ರ (ಸೆಂಟ್ರಲ್ ಹಾರ್ಟಿಕಲ್ಚರಲ್ ಎಕ್ಸ್ಪರಿಮೆಂಟ್ ಸ್ಟೇಷನ್)ಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಸಂಜೆ ೫.೩೦ ಗಂಟೆಗೆ ಮಡಿಕೇರಿ ಹಾಪ್‌ಕಾಮ್ಸ್ಗೆ ಭೇಟಿ ನೀಡಲಿದ್ದಾರೆ.

ತಾ. ೨೯ ರಂದು ಬೆಳಗ್ಗೆ ೧೧.೩೦ ಗಂಟೆಗೆ ಹಾರಂಗಿ ತೋಟಗಾರಿಕಾ ಫಾರಂಗೆ ಭೇಟಿ ನೀಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಸೋಮಶೇಖರ್ ಅವರು ತಿಳಿಸಿದ್ದಾರೆ.