ಕೂಡಿಗೆ, ಏ. ೨೩: ಕುಶಾಲನಗರ ಹಾರಂಗಿ ರಸ್ತೆಯ ಮಧ್ಯೆ ಗ್ರಾಮವಾದ ಸುಂದರನಗರ ಗ್ರಾಮದ ರಸ್ತೆಯ ಬದಿಯ ಮನೆಯ ಮುಂದಿದ್ದ ಹಸುವನ್ನು ಕಾರೊಂದರಲ್ಲಿ ಕಳವು ಮಾಡಿ ಪರಾರಿಯಾದ ಘಟನೆ ಸುಂದರನಗರ ಗ್ರಾಮದಲ್ಲಿ ನಡೆದಿದೆ. ಕುಶಾಲನಗರದ ಅಗ್ನಿಶಾಮಕ ಠಾಣೆಯು ಹಾರಂಗಿ ರಸ್ತೆಯ ಸುಂದರನಗರದಲ್ಲಿದ್ದು ಅದರ ಎದುರಿನ ಜಯರಾಮ ಎಂಬವರಿಗೆ ಸೇರಿದ ೩೦ ಸಾವಿರ ಬೆಲೆ ಬಾಳುವ ಹಸುವನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.
ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಘಟನೆ ನಡೆದಿದ್ದ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ ಭೇಟಿ ನೀಡಿ ಪರಿಶೀಲನೆ ನಡೆಸಿ ಪತ್ತೆ ಹಚ್ಚಲು ಮುಂದಾಗಿದ್ದಾರೆ.