ಕೊಡ್ಲಿಪೇಟೆ, ಏ.೨೩: ಸಮೀಪದ ಬೆಸೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ವಿಪ್ಲವ ಯುವ ಬಳಗ ವತಿಯಿಂದ ತಾ. ೨೪ರಂದು (ಇಂದು) ಅಂಬೇಡ್ಕರ್ ಜನ್ಮದಿನಾಚರಣೆ ಹಾಗೂ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಸಿನಿಮಾ ನಟ ಚೇತನ್, ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಬೆಸೂರು ಗ್ರಾ.ಪಂ. ಅಧ್ಯಕ್ಷೆ ಕೀರ್ತಿ, ಡಾ.ಶ್ರೀನಿವಾಸ್ ಬೆಂಗಳೂರು, ವಕೀಲರಾದ ವೇಣು ಸಕಲೇಶಪುರ, ಸಂದೀಪ್ ಎಸ್.ದಾವಣಿಕರ್, ಕೆ.ಪಿ.ರಮೇಶ್ ಜಿ.ಪಂ. ಮಾಜೀ ಸದಸ್ಯ ಪುಟ್ಟರಾಜು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ ೧೦ ಗಂಟೆಗೆ ಬೆಸೂರು ವೃತ್ತದಿಂದ ಅಂಬೇಡ್ಕರ್ ಅವರ ಭಾವಚಿತ್ರವನ್ನೊಳಗೊಂಡ ರಥೋತ್ಸವ ಮುಖ್ಯ ಬೀದಿಗಳಲ್ಲಿ ಸಾಗಲಿದೆ. ಮಧ್ಯಾಹ್ನ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.