ಸೋಮವಾರಪೇಟೆ, ಏ.೨೩: ೧೯೧೯ರಲ್ಲಿ ಸ್ಥಾಪನೆಗೊಂಡ ಇಲ್ಲಿನ ೨೭೫೯ನೇ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಸಂಭ್ರಮದಿAದ ನಡೆಯಿತು. ಕಳೆದ ಮೂರು ವರ್ಷಗಳ ಹಿಂದೆಯೇ ೧೦೦ ವರ್ಷಗಳನ್ನು ಸಂಘ ಪೂರೈಸಿದ್ದು, ಕೊರೊನಾ ಹಿನ್ನೆಲೆ ಶತಮಾನೋತ್ಸವ ಸಮಾರಂಭವನ್ನು ಮುಂದೂಡ ಲಾಗಿತ್ತು.
೧೯೧೯ರಲ್ಲಿ ಡಿ. ನಾರಾಯಣ ಶೆಟ್ಟಿ ಅವರ ಮುಂದಾಳತ್ವದಲ್ಲಿ ಸ್ಥಾಪನೆಗೊಂಡ ಸಹಕಾರ ಸಂಘಕ್ಕೆ ೧೦೩ ವರ್ಷಗಳು ತುಂಬಿದ ಸವಿನೆನಪಿಗಾಗಿ ಆಯೋಜಿಸಿದ್ದ ಶತಮಾನೋತ್ಸವ ಸಮಾರಂಭದಲ್ಲಿ ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸೇರಿದಂತೆ ಜಿಲ್ಲೆಯ ಶಾಸಕರುಗಳು, ಸಹಕಾರ ಇಲಾಖೆಯ ಅಧಿಕಾರಿಗಳು, ಹಿರಿಯ ಸಹಕಾರಿ ಧುರೀಣರು ಭಾಗಿಯಾಗಿದ್ದರು.
ಬೆಳಿಗ್ಗೆ ಸಂಘದ ಮುಖ್ಯ ಕಚೇರಿಯಲ್ಲಿ ದೀಪ ಬೆಳಗುವ ಮೂಲಕ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಶತಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರ ಪಟ್ಟಣದ ವಿವೇಕಾನಂದ ವೃತ್ತದಿಂದ ಸಮಾರಂಭ ಆಯೋಜನೆಗೊಂಡಿದ್ದ ಒಕ್ಕಲಿಗರ ಸಮುದಾಯ ಭವನದವರೆಗೆ ಮೆರವಣಿಗೆ ನಡೆಯಿತು.
ಮಲೆನಾಡಿನ ಜಾನಪದ ಸೊಗಡಿನ ಸುಗ್ಗಿ ಕುಣಿತದೊಂದಿಗೆ ನಡೆದ ಮೆರವಣಿಗೆಯಲ್ಲಿ ಜನಪ್ರತಿನಿಧಿಗಳು, ಸಹಕಾರ ಕ್ಷೇತ್ರದ ಧುರೀಣರು, ರೈತರು ಭಾಗಿಯಾಗಿದ್ದರು. ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಶತಮಾನೋತ್ಸವ ಸಮಾರಂಭವನ್ನು ರೈತರ ಪಾರಂಪರಿಕ ಅಳತೆ ಮಾಪನವಾದ ಪರೆಗೆ ಭತ್ತ ಸುರಿಯುವ ಮೂಲಕ ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಕೊಡಗಿನ ಸಹಕಾರ ಸಂಘಗಳು ಅತ್ಯುತ್ತಮ ಸೇವೆಯ ಮೂಲಕ ರಾಜ್ಯಕ್ಕೆ ಮಾದರಿಯಾಗಿವೆ. ೧೦೩ ವರ್ಷಗಳು ತುಂಬಿರುವ ಸೋಮವಾರಪೇಟೆ ವಿಎಸ್‌ಎಸ್‌ಎನ್‌ನಿಂದ ಹಿರಿಯ ಸಹಕಾರಿಗಳನ್ನು, ಸಂಘದ ಸ್ಥಾಪಕರನ್ನು ಸ್ಮರಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭ ಸಂಘದ ಸ್ಥಾಪಕರಾದ ಡಿ.ನಾರಾಯಣ ಶೆಟ್ಟಿ ಹಾಗೂ ಕೊಡಗಿನ ಪ್ರಪ್ರಥಮ ಸಹಕಾರ ಸಂಘ ಸ್ಥಾಪಕರಾದ ಕುರಾದಗೌಡ್ನಮನೆ ದೊಡ್ಡಯ್ಯ ಅವರುಗಳ ಭಾವಚಿತ್ರಕ್ಕೆ ಸಚಿವರು ಸೇರಿದಂತೆ ಅತಿಥಿಗಳು ಪುಷ್ಪನಮನ ಸಲ್ಲಿಸಿದರು.
ಶತಮಾನೋತ್ಸವದ ನೆನಪಿಗಾಗಿ ಸಂಘದ ಸದಸ್ಯರಿಗೆ ತಲಾ ೧೦ ಗ್ರಾಂ ಬೆಳ್ಳಿ ನಾಣ್ಯ ವಿತರಿಸುವ ಕಾರ್ಯಕ್ಕೆ ಅತಿಥಿಗಳು ಚಾಲನೆ ನೀಡಿದರು. ಸಂಘದ ಸ್ಥಾಪನೆ, ನಡೆದು ಬಂದ ಹಾದಿಯನ್ನು ಒಳಗೊಂಡ ಸ್ಮರಣ ಸಂಚಿಕೆ ‘ಸಹಕಾರ ಸಂಭ್ರಮ’ವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಬಿಡುಗಡೆ ಮಾಡಿದರು.
ಸಂಘದಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳಾದ ರಾಜಶೇಖರಪ್ಪ, ದಾಸಪ್ಪ, ಲಕ್ಷಿö್ಮÃಕಾಂತ್, ಅನಂತರಾಮ್, ಬಿ.ಡಿ. ಮಂಜುನಾಥ್, ಬಿ.ಎಂ. ಸುರೇಶ್ ಸೇರಿದಂತೆ ಹಾಲಿ ಅಧ್ಯಕ್ಷ ಹೆಚ್.ಕೆ. ಮಾದಪ್ಪ, ಉಪಾಧ್ಯಕ್ಷ ಬಿ.ಎಂ. ಈಶ್ವರ್, ಮಾಜಿ ಉಪಾಧ್ಯಕ್ಷರುಗಳು, ನಿರ್ದೇಶಕರು ಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಹಿರಿಯ ಪತ್ರಕರ್ತ ಹೆಚ್.ಟಿ. ಅನಿಲ್ ಅವರ ನೇತೃತ್ವದಲ್ಲಿ ನಿರ್ಮಿಸ ಲಾಗಿರುವ, ಸಂಘದ ಸಾಧನೆಗಳನ್ನು ಒಳಗೊಂಡ ಸಾಕ್ಷö್ಯಚಿತ್ರ ‘ಶತ ಧಾರಾ’ವನ್ನು ಶಾಸಕ ಅಪ್ಪಚ್ಚುರಂಜನ್ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಎಂಎಲ್‌ಸಿಗಳಾದ ವೀಣಾ ಅಚ್ಚಯ್ಯ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ನಿರ್ದೇಶಕರು ಗಳಾದ ಬಿ.ಡಿ. ಮಂಜುನಾಥ್, ಬಿ.ಕೆ. ಚಿಣ್ಣಪ್ಪ, ಭರತ್‌ಕುಮಾರ್, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಬೇಳೂರು ಗ್ರಾ.ಪಂ. ಅಧ್ಯಕ್ಷ ಬಿ.ಎಂ. ಪ್ರಶಾಂತ್, ನೇರುಗಳಲೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.ಅತಿಥಿಗಳಾಗಿ ಎಂಎಲ್‌ಸಿಗಳಾದ ವೀಣಾ ಅಚ್ಚಯ್ಯ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ನಿರ್ದೇಶಕರು ಗಳಾದ ಬಿ.ಡಿ. ಮಂಜುನಾಥ್, ಬಿ.ಕೆ. ಚಿಣ್ಣಪ್ಪ, ಭರತ್‌ಕುಮಾರ್, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಬೇಳೂರು ಗ್ರಾ.ಪಂ. ಅಧ್ಯಕ್ಷ ಬಿ.ಎಂ. ಪ್ರಶಾಂತ್, ನೇರುಗಳಲೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.