ಸೋಮವಾರಪೇಟೆ, ಏ.೨೩: ಸಹಕಾರ ಸಂಘಗಳಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಗಟ್ಟಲು ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೆ ತರಲಾಗುವುದು. ಉತ್ತಮ ಸೇವೆಗಳನ್ನು ನೀಡುತ್ತಿರುವ ಸಹಕಾರಿ ಸಂಸ್ಥೆಗಳಿಗೆ ಸರ್ಕಾರ ಹಾಗೂ ಸಹಕಾರ ಇಲಾಖೆಯಿಂದ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದು ರಾಜ್ಯ ಸರ್ಕಾರದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯಾದ್ಯಂತ ೫೭೦೦ಕ್ಕೂ ಅಧಿಕ ಸಹಕಾರ ಸಂಘಗಳಿದ್ದು ಬಹುತೇಕ ಎಲ್ಲಾ ಸಂಘಗಳು ರೈತರ ಅಭ್ಯುದಯಕ್ಕೆ ಶ್ರಮಿಸುತ್ತಿವೆ. ಈ ಮಧ್ಯೆ ರಾಜ್ಯದ ಕೆಲವೊಂದು ಸಹಕಾರ ಸಂಸ್ಥೆಗಳು ನೂರಾರು ಕೋಟಿ ಅವ್ಯವಹಾರ ನಡೆಸಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ರೈತರು ಹಾಗೂ ಸಾಮಾನ್ಯ ಜನರಿಗೆ ಸಹಕಾರ ಸಂಘದ ಮೇಲಿನ ನಂಬಿಕೆ ಇನ್ನಷ್ಟು ಗಟ್ಟಿಯಾಗಬೇಕಾದರೆ ಅವ್ಯವಹಾರಗಳಿಗೆ ಕಡಿವಾಣ ಹಾಕಲೇಬೇಕಿದೆ ಎಂದು ಸಚಿವರು ಅಭಿಮತ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಸಹಕಾರ ಸಂಘಗಳಲ್ಲಿ ನಡೆಯುವ ಎಲ್ಲಾ ವ್ಯವಹಾರಗಳು ಪಾರದರ್ಶಕ ಹಾಗೂ ರೈತ ಸ್ನೇಹಿ ಆಗಿರಬೇಕು. ಅವ್ಯವಹಾರಗಳಿಗೆ ಆಸ್ಪದ ನೀಡಬಾರದು ಎಂಬ ಉದ್ದೇಶದಿಂದ ಕಠಿಣ ಕಾನೂನು ಜಾರಿಗೆ ಚಿಂತನೆ ನಡೆಸಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೂ ಚರ್ಚಿಸಲಾಗಿದೆ. ಅವ್ಯವಹಾರದಲ್ಲಿ ಭಾಗಿಯಾಗುವವರಿಗೆ ಕಠಿಣ ಕಾನೂನು ಶಿಕ್ಷೆ ಹಾಗೂ ಅವರ ಆಸ್ತಿಪಾಸ್ತಿ ಜಪ್ತಿ ಮಾಡಿಕೊಳ್ಳುವ ಸಂಬAಧ ಶೀಘ್ರದಲ್ಲೇ ಕಾನೂನು ಬರಲಿದೆ ಎಂದು ಸೋಮಶೇಖರ್ ಹೇಳಿದರು.

೧೨೦ ವರ್ಷಗಳ ಇತಿಹಾಸ ಹೊಂದಿರುವ ಸಹಕಾರ ಕ್ಷೇತ್ರವು ಕೋಟ್ಯಾಂತರ ರೈತರಿಗೆ ಜೀವನಾಧಾರ ವಾಗಿದೆ. ಆದರೆ ಸಹಕಾರ ಕಾಯ್ದೆಗಳು ಅಷ್ಟೊಂದು ಕಠಿಣವಿಲ್ಲದೇ ಇರುವುದರಿಂದ ಅವ್ಯವಹಾರಕ್ಕೆ ಆಸ್ಪದ ನೀಡುತ್ತಿದೆ. ಸಹಕಾರ ಕಾನೂನು ಎಳೆದಷ್ಟೂ ಉದ್ದವಾಗುವ ರಬ್ಬರ್ ಆಗಬಾರದು. ‘ಬುಕ್ ಅಡ್ಜೆಸ್ಟ್ಮೆಂಟ್’ ಇರಬಾರದು. ಕಠಿಣ ಕಾನೂನಿನ ಕೊರತೆಯಿಂದಾಗಿ ಬೆಳಗಾಂ, ಕೋಲಾರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಭಾರೀ ಅವ್ಯವಹಾರ ನಡೆದಿದೆ. ರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ಯೊಂದರಲ್ಲೇ ೨೫೭೭ ಕೋಟಿ ಅವ್ಯವಹಾರ ನಡೆದಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳಬೇಕೆಂದರೆ ಕಠಿಣ ಕಾನೂನು ಜಾರಿಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ ಎಂದರು.

ರಾಜ್ಯದಲ್ಲಿ ಸಹಕಾರ ಸಂಘಗಳ ಮೂಲಕ ೩೩ ಲಕ್ಷ ರೈತರಿಗೆ ೨೪ ಸಾವಿರ ಕೋಟಿ ಸಾಲ ನೀಡುವ ಯೋಜನೆ ಸಿದ್ಧಗೊಂಡಿದೆ. ಇದರಲ್ಲಿ ೩ ಲಕ್ಷ ಹೊಸ ಸದಸ್ಯರಿಗೆ ಸಾಲ ನೀಡಲಾಗುವುದು ಎಂದ ಸಚಿವರು, ನಂದಿನಿ ಕ್ಷೀರÀ ಸಮೃದ್ಧಿ ಕೋ ಆಪರೇಟಿವ್ ಬ್ಯಾಂಕ್‌ಗಳ ಸ್ಥಾಪನೆಗೆ ಕ್ರಮವಹಿಸಲಾಗಿದ್ದು, ಇದು ಡಿಸಿಸಿ ಬ್ಯಾಂಕ್‌ಗಳ ಅಸ್ತಿತ್ವಕ್ಕೆ ಯಾವುದೇ ರೀತಿಯ ಧಕ್ಕೆ ತರುವುದಿಲ್ಲ. ಬ್ಯಾಂಕ್ ಸ್ಥಾಪನೆಗೆ ಸಂಬAಧಿಸಿದAತೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದರು.

ಹಲವಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ಯಶಸ್ವಿನಿ ಯೋಜನೆಗೆ ಮರುಜೀವ ನೀಡಲಾಗಿದೆ. ೧೦೦ ಕೋಟಿ ಷೇರು ಬಂಡವಾಳವನ್ನು ಸಹಕಾರ ಸಂಸ್ಥೆಗಳಿAದ ಪಡೆಯುವ ನಿರ್ಧಾರ ಮಾಡಲಾಗಿದೆ. ಯಶಸ್ವಿನಿ ಯೋಜನೆ ಯಿಂದ ಕೃಷಿಕರಿಗೆ ಹೆಚ್ಚಿನ ಪ್ರಯೋಜನ ವಾಗಲಿದೆ. ಸರ್ಕಾರ ಕೃಷಿಕರ ಪರವಾಗಿದ್ದು,

(ಮೊದಲ ಪುಟದಿಂದ) ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲು ಬದ್ಧವಾಗಿದೆ ಎಂದು ಸಚಿವ ಸೋಮಶೇಖರ್ ಹೇಳಿದರು.

ತರಾತುರಿ ಅಳವಡಿಕೆ ಇಲ್ಲ: ಕೇಂದ್ರ ಸರ್ಕಾರವು ರೈತರಿಗೆ ಅನುಕೂಲ ಕಲ್ಪಿಸುವ ಸಂಬAಧ ಫ್ರೂಟ್ಸ್ ತಂತ್ರಾAಶ ಪರಿಚಯಿಸಿದ್ದು, ಇದರ ಮೂಲಕವೇ ಎಲ್ಲರೂ ವ್ಯವಹಾರ ನಡೆಸಬೇಕೆಂಬ ಆಶಯ ಹೊಂದಿದೆ. ಆದರೆ ರೈತರ ಕೆಲವೊಂದು ದಾಖಲಾತಿಗಳು ಇನ್ನೂ ಸಮರ್ಪಕವಾಗದ ಹಿನ್ನೆಲೆ ತಂತ್ರಾAಶದಲ್ಲಿ ಅಳವಡಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ದಾಖಲಾತಿಗಳನ್ನು ಸಮರ್ಪಕಗೊಳಿಸಿಕೊಳ್ಳಲು ಮಾರ್ಚ್ ೩೦ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ದಾಖಲೆಗಳು ಸಮರ್ಪಕಗೊಳಿಸಲು ಸಾಧ್ಯವಾಗಿಲ್ಲ; ಅವಧಿಯನ್ನು ವಿಸ್ತರಿಸುವಂತೆ ಕೊಡಗಿನ ಶಾಸಕರುಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಡಿಸಿಸಿ ಬ್ಯಾಂಕ್‌ಗಳನ್ನು ಅಪೆಕ್ಸ್ ಬ್ಯಾಂಕ್‌ನೊAದಿಗೆ ವಿಲೀನಗೊಳಿಸುವ ಚಿಂತನೆ ಕೇಂದ್ರ ಸರ್ಕಾರದ ಮಟ್ಟದಲ್ಲಿದೆ. ಡಿಸಿಸಿ ಬ್ಯಾಂಕ್‌ಗಳನ್ನು ತರಾತುರಿಯಲ್ಲಿ ವಿಲೀನಗೊಳಿಸಲು ರಾಜ್ಯ ಸರ್ಕಾರ ಮುಂದಾಗುವುದಿಲ್ಲ. ಇತರ ರಾಜ್ಯಗಳ ಅನುಷ್ಠಾನ, ಅದರ ಸಾಧಕ ಬಾಧಕಗಳನ್ನು ಪರಾಮರ್ಶಿಸ ಲಾಗುವುದು. ಶಾಸಕಾಂಗ ಪಕ್ಷದ ಸಭೆ, ಎಲ್ಲಾ ಶಾಸಕರು, ಸಂಸದರೊAದಿಗೆ ಚರ್ಚೆ ನಡೆಸಿ ತೀರ್ಮಾನಿಸ ಲಾಗುವುದು. ಏಕಾಏಕಿ ಡಿಸಿಸಿ ಬ್ಯಾಂಕ್‌ಗಳನ್ನು ಅಪೆಕ್ಸ್ನೊಂದಿಗೆ ವಿಲೀನಗೊಳಿಸುವುದಿಲ್ಲ ಎಂದು ಸಚಿವ ಸೋಮಶೇಖರ್ ಭರವಸೆ ನೀಡಿದರು.

ಶತಮಾನೋತ್ಸವ ಸಮಾರಂಭದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಸಹಕಾರ ಸಂಘಗಳ ಅಳಿವು ಹಾಗೂ ಉಳಿವು ಆಡಳಿತ ಮಂಡಳಿ ಹಾಗೂ ಸದಸ್ಯರುಗಳ ಕೈಯಲ್ಲಿದೆ. ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಸಂಘಗಳಲ್ಲಿ ಅವ್ಯವಹಾರ ನಡೆದರೆ ಅದು ಸದಸ್ಯರಿಗೆ ನಷ್ಟತರಲಿದೆ ಎಂದರು.

ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸದಸ್ಯರಿಗೆ ವಿವಿಧ ಸೌಲಭ್ಯಗಳನ್ನು ಒಸಗಿಸುವ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ಸಹಕಾರ ಸಂಘವಾಗಿ ರೂಪುಗೊಂಡಿದೆ. ಹಿರಿಯ ಸಹಕಾರಿಗಳ ಶ್ರಮದಿಂದಾಗಿ ಲಾಭದಲ್ಲಿ ಸಂಘ ಮುಂದುವರೆ ಯುತ್ತಿದೆ ಎಂದು ರಂಜನ್ ಹೇಳಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಸಹಕಾರ ಸಂಘಗಳು ಒಗ್ಗಟ್ಟಿನ ಪ್ರತೀಕವಾಗಿದ್ದು, ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮಹಿಳೆಯರೇ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳಾಗಬೇಕು ಎಂದರು. ರಾಜ್ಯ ಸರ್ಕಾರ ಕೊಡಗಿನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಕಂದಾಯ, ಅರಣ್ಯ, ವನ್ಯಪ್ರಾಣಿ ಹಾವಳಿ ಸಮಸ್ಯೆಗಳು ಹೆಚ್ಚಿದ್ದು, ಸಂಬAಧಿಸಿದ ಸಚಿವರುಗಳು ಕೊಡಗಿಗೆ ಬಂದು ವಾಸ್ತವಾಂಶ ಅರಿಯಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ, ರಾಷ್ಟಿçÃಕೃತ ಹಾಗೂ ಖಾಸಗಿ ಬ್ಯಾಂಕ್‌ಗಳ ಜೊತೆಯಲ್ಲಿ ಸಹಕಾರ ಸಂಘಗಳೂ ಸಹ ಹೆಚ್ಚಿನ ಆರ್ಥಿಕ ವ್ಯವಹಾರ ನಡೆಸುತ್ತಿದ್ದು, ಡಿಸಿಸಿ ಬ್ಯಾಂಕ್ ಅಡಕತ್ತರಿಯಲ್ಲಿ ಸಿಲುಕುವಂತಾಗಿದೆ. ಸಹಕಾರ ಸಂಘಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್‌ನಿAದ ಶೇ.೭ರ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರದ ಸಾಲ ಮನ್ನಾ ಯೋಜನೆಯಡಿ ಡಿಸಿಸಿ ಬ್ಯಾಂಕ್ ತಮ್ಮ ಸ್ವಂತ ಬಂಡವಾಳ ೧೫೩ ಕೋಟಿಯನ್ನು ರೈತರಿಗೆ ನೀಡಿದೆ. ಆದರೆ ಸರ್ಕಾರದಿಂದ ೧೪೨ ಕೋಟಿ ಮಾತ್ರ ಬಂದಿದ್ದು, ಇನ್ನೂ ೧೧ ಕೋಟಿ ಬರಲು ಬಾಕಿಯಿದೆ. ಈ ಬಗ್ಗೆ ಸಚಿವರು ಗಮನಹರಿಸಬೇಕೆಂದು ಮನವಿ ಮಾಡಿದರು. ಫ್ರೂಟ್ಸ್ ತಂತ್ರಾAಶವನ್ನು ಸದ್ಯದ ಮಟ್ಟಿಗೆ ಅಳವಡಿಸಿಕೊಳ್ಳಲು ಅಸಾಧ್ಯವಾಗಿರುವ ಕಾರಣ ಡಿಸಿಸಿ ಬ್ಯಾಂಕ್ ಮೂಲಕ ಎಂದಿನAತೆ ರೈತರಿಗೆ ಸಾಲ ಸೌಲಭ್ಯ ನೀಡಲಾಗುವುದು. ಸರ್ಕಾರದ ಆದೇಶದ ಪ್ರಕಾರ ೫೫ ಸಾವಿರ ಮಂದಿಗೆ ಸಾಲ ನೀಡಲಾಗುವುದು. ಇದರಲ್ಲಿ ೫ ಸಾವಿರ ಹೊರ ಸದಸ್ಯರಿಗೆ ಸಾಲ ನೀಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸಾಲಗಳನ್ನು ಶೇ.೮.೫ರ ಬಡ್ಡಿದರದ ಒಳಗೆ ತರುವ ಚಿಂತನೆಯೂ ನಡೆದಿದೆ ಎಂದು ಬಾಂಡ್ ಗಣಪತಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ ಅವರು, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜಾಮೀನು ಸಾಲಕ್ಕೆ ವಿಮಾ ಸೌಲಭ್ಯವನ್ನು ಕಲ್ಪಿಸಿದ ಸಂಘ ಎಂಬ ಹೆಗ್ಗಳಿಗೆ ಸೋಮವಾರಪೇಟೆ ಸಹಕಾರ ಸಂಘಕ್ಕಿದೆ. ಸದಸ್ಯರಿಗೆ ಕೃಷಿ ಸಾಲದೊಂದಿಗೆ ಮರಣ ನಿಧಿ, ವಾಹನ ಸಾಲ, ಜಾಮೀನು ಸಾಲ, ಆಭರಣ ಸಾಲ, ಲ್ಯಾಪ್‌ಟಾಪ್ ಖರೀದಿ ಸಾಲದೊಂದಿಗೆ ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಜಂಟಿ ಬಾಧ್ಯತಾ ಗುಂಪುಗಳನ್ನು ರಚಿಸಿ ವ್ಯವಹಾರ ನಡೆಸಲಾಗುತ್ತಿದೆ. ಸಾಲ ವಸೂಲಾತಿ ಯೂ ಶೇ.೯೮ರಷ್ಟಿಗೆ ಎಂದರು.

ಹಿರಿಯ ಸಹಕಾರಿಗಳ ಶ್ರಮದಿಂದ ಸಹಕಾರ ಸಂಘವು ೧೦೦ ವರ್ಷ ಪೂರೈಸಿದ್ದು, ಪಟ್ಟಣದ ಹೃದಯ ಭಾಗ ಸೇರಿದಂತೆ ಅಬ್ಬೂರುಕಟ್ಟೆ, ಬಳಗುಂದದಲ್ಲಿ ಶಾಖೆಗಳನ್ನು ಹೊಂದಿದೆ. ಅಬ್ಬೂರುಕಟ್ಟೆಯಲ್ಲಿ ಶತಮಾನೋತ್ಸವದ ಸವಿ ನೆನಪಿಗೆ ಭವನ ನಿರ್ಮಿಸಲಾಗುತ್ತಿದೆ ಎಂದರು.

ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮನುಮುತ್ತಪ್ಪ ಅವರುಗಳು ಮಾತನಾಡಿದರು. ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಬಿ. ಭರತ್‌ಕುಮಾರ್, ಬಿ.ಕೆ. ಚಿಣ್ಣಪ್ಪ, ವಿಎಸ್‌ಎಸ್‌ಎನ್ ಉಪಾಧ್ಯಕ್ಷ ಬಿ.ಎಂ. ಈಶ್ವರ್, ಮಾಜೀ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಿ.ಡಿ. ಮಂಜುನಾಥ್, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಬೇಳೂರು ಗ್ರಾ.ಪಂ. ಅಧ್ಯಕ್ಷ ಬಿ.ಎಂ. ಪ್ರಶಾಂತ್, ನೇರುಗಳಲೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ, ಸಂಘದ ನಿರ್ದೇಶಕರುಗಳು, ಮಾಜೀ ಅಧ್ಯಕ್ಷರುಗಳು ಉಪಸ್ಥಿತರಿದ್ದರು.ಶತಮಾನೋತ್ಸವದ ಅಂಗವಾಗಿ ಹೊರತರಲಾದ ಸ್ಮರಣ ಸಂಚಿಕೆಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಜಿಲ್ಲೆಯಲ್ಲಿ ಸಹಕಾರ ಸಂಘಗಳು ಲಾಭದಲ್ಲಿ ಮುಂದುವರೆಯುತ್ತಿದ್ದು, ರೈತರಿಗೂ ಸೌಲಭ್ಯ ಒದಗಿಸುತ್ತಿವೆ. ಕೃಷಿಕರಿಗೆ ಸುಲಭ ವಿಧಾನದಲ್ಲಿ ಸಾಲ ನೀಡಲಾಗುತ್ತಿದೆ. ಪ್ರಧಾನಿ ಮೋದಿ ಅವರ ಆಶಯದಂತೆ ೨೦೨೪ರೊಳಗೆ ಭಾರತ ಸ್ವಾಭಿಮಾನಿ ಹಾಗೂ ಸ್ವಾವಲಂಭಿ ಆಗಬೇಕಾದರೆ ಸಹಕಾರ ಸಂಘಗಳೂ ಸಹ ಇನ್ನಷ್ಟು ಬಲಗೊಳ್ಳಬೇಕು ಎಂದರು.

ಕೊಡಗಿನಲ್ಲಿ ಜಾಗಕ್ಕೆ ಸಂಬAಧಿಸಿದAತೆ ದಾಖಲೆಗಳ ಸಮಸ್ಯೆ ಇದ್ದು, ಈ ನಿಟ್ಟಿನಲ್ಲಿ ಫ್ರೂಟ್ಸ್ ತಂತ್ರಾAಶವನ್ನು ಕಡ್ಡಾಯಗೊಳಿಸಬಾರದು. ದಾಖಲೆಗಳು ಸಮರ್ಪಕವಾದ ನಂತರ ನೂತನ ತಂತ್ರಾAಶವನ್ನು ಜಾರಿಗೊಳಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.