ಚಿಕ್ಕಮಗಳೂರು, ಏ. ೨೩: ತಾಲೂಕಿನ ಅರಶಿನಗುಪ್ಪೆ ಕೃಷ್ಣಗಿರಿ ಕಾಫಿ ತೋಟದಲ್ಲಿ ಜೇನುನೊಣಗಳು ದಾಳಿ ನಡೆಸಿದ ಪರಿಣಾಮ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ ಅವರು ಮೃತಪಟ್ಟಿದ್ದಾರೆ.
ನೂರಾರು ಜೇನುಗಳು ಕಡಿದ ಪರಿಣಾಮ ಬೋಜೇಗೌಡ (೭೩) ಅವರು ಸಾವನ್ನಪ್ಪಿದ್ದಾರೆ.
೨ನೇ ಬಾರಿ ಕಾಫಿ ಮಂಡಳಿ ಅಧ್ಯಕ್ಷರಾಗಿದ್ದ ಎಂ.ಎಸ್. ಬೋಜೇಗೌಡ ಅವರು, ಎರಡು ಬಾರಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದರು. ಒಂದು ಬಾರಿ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಒಂದು ಬಾರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರು.