ಗೋಣಿಕೊಪ್ಪಲು, ಏ. ೨೨: ೭೫ನೇ ಸ್ವಾತಂತ್ರö್ಯ ಸಂಭ್ರಮದ ಅಂಗವಾಗಿ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆ ಹಾಗೂ ಬಿಸಿ ಊಟದ ಯೋಜನೆ, ಅಜಾದಿ ಡಾ. ಅಮೃತ ಉತ್ಸವ್ ಕುಶಾಲನಗರದ ಆಹಾರ ನಿಗಮದಲ್ಲಿ ನಡೆಯಿತು.

ಜಿಲ್ಲಾ ಆಹಾರ ಹಾಗೂ ನಾಗರಿಕ ಸರಬರಾಜು ನಿಗಮದ ಉಪನಿರ್ದೇಶಕ ಗೌರವ್ ಶೆಟ್ಟಿ, ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಆಹಾರವನ್ನು ಭಾರತದ ಶೇ. ೮೩.೧ ಸಾವಿರ ಕೋಟಿ ಫಲಾನುಭವಿಗಳಿಗೆ ತಲುಪುವಲ್ಲಿ ಯಶಸ್ವಿಯಾಗಿದೆ. ಭಾರತ ದೇಶದಲ್ಲಿ ಸಾಂಕ್ರಾಮಿಕ ಕೊರೊನಾ ಸಂದರ್ಭದಲ್ಲಿ ಹಸಿವು ನಿರ್ಮೂಲನೆ ಮಾಡುವಲ್ಲಿ ವಿಶ್ವದಲ್ಲಿಯೇ ಪ್ರಮುಖ ಪಾತ್ರ ವಹಿಸುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ ಎಂದರು.

ಆಹಾರ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಉದಯ್‌ಸಿಂಗ್ ಮಾತನಾಡಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಣ್ಣಯ್ಯ ಮಾತನಾಡಿ, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ಬಗ್ಗೆ ಅಲ್ಲದೆ ಸರ್ಕಾರ ನೀಡುವ ಹೆಚ್ಚಿನ ಪೌಷ್ಟಿಕಾಂಶವಿರುವ ಆಹಾರದ ಬಗ್ಗೆ ಜಾಗೃತಿಯನ್ನು ಮೂಡಿಸಿದರು.

ಎ.ಪಿ.ಎಂ.ಎಸ್. ವ್ಯವಸ್ಥಾಪಕ ಹರೀಶ್, ಆಹಾರ ನಿಗಮ ವ್ಯವಸ್ಥಾಪಕ ಶ್ರೀನಿವಾಸ್ ಉಪಸ್ಥಿತರಿದ್ದರು.

೭೫ನೇ ವರ್ಷದ ಸ್ವಾತಂತ್ರದ ದಿನಾಚರಣೆಯ ಅಂಗವಾಗಿ ಧಾರ್ಮಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಕಾರ್ಯಕ್ರಮವನ್ನು ಮುನ್ನಡೆಸಲು ಅಜಾದಿ ಅಮೃತ್ ಉತ್ಸವವು ಮಾರ್ಚ್ ೧೨, ೨೦೨೧ ರಿಂದ ಆಗಸ್ಟ್ ೧೫ ೨೦೨೩ ರವರೆಗೆ ಚಾಲನೆ ನೀಡಲಾಗಿದೆ. ಆಹಾರ ನಿಗಮದ ವ್ಯವಸ್ಥಾಪಕ ಹರೀಶ್ ಸ್ವಾಗತಿಸಿ, ಉಪನಿರ್ದೇಶಕ ಗೌರವಶೆಟ್ಟಿ ವಂದಿಸಿದರು.