ನಾಪೋಕ್ಲು, ಏ. ೨೨: ಕಾಳೆಯಂಡ ಪಿ. ಅಪ್ಪಯ್ಯ ಅವರು ಬರೆದ ‘ಮಕ್ಕಿ ಶ್ರೀ ಶಾಸ್ತಾವು ದೇವಡ ಬಾಳೋಪಾಟ್’ ಪುಸ್ತಕವನ್ನು ಮೂಟೇರಿ ಶ್ರೀ ಉಮಾಮಹೇಶ್ವರಿ ದೇವಳದ ಸಮುದಾಯ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಲೇಖಕ ಕಾಳೆಯಂಡ ಪಿ. ಅಪ್ಪಯ್ಯ, ದೇವಳದ ದೇವತಕ್ಕರಾದ ವಾಂಜAಡ ಬೋಪಯ್ಯ, ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿದ್ದಾಟಂಡ ಟಿ. ಕಾರ್ಯಪ್ಪ, ದೇವಳ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಚ್ಚಿರ ರೆಮ್ಮಿ ನಾಣಯ್ಯ, ಬಿದ್ದಾಟಂಡ ರೋಜಿ ಚಿಣ್ಣಪ್ಪ, ಬಿದ್ದಾಟಂಡ ಎಸ್. ತಮ್ಮಯ್ಯ, ಬಿದ್ದಾಟಂಡ ವಿವೇಕ್ ಮತ್ತಿತರ ಗ್ರಾಮಸ್ಥರು ಇದ್ದರು.