ಮಡಿಕೇರಿ, ಏ. ೨೨: ಕೊಡಗು ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ಅವರಿಗೆ ಪ್ರೊ. ಎಚ್ಚೆಸ್ಕೆ ಶತಮಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಹಿತಿ ಸಿ.ಪಿ. ಕೃಷ್ಣಕುಮಾರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಆರ್.ಕೆ. ಬಾಲಚಂದ್ರ ಅವರು ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕೆಲಸವನ್ನು ನಿಸ್ವಾರ್ಥವಾಗಿ ಕಳೆದ ೩೮ ವರ್ಷಗಳಿಂದ ಬ್ಯಾಂಕ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ರಾಜ್ಯದ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುವ ಮೂಲಕ ಮಾಡಿದ್ದಾರೆ. ಇವರ ಮಾರ್ಗದರ್ಶನದಿಂದಾಗಿ ಸಾವಿರಾರು ಮಂದಿಯ ಬ್ಯಾಂಕ್ ಉದ್ಯೋಗದ ಕನಸು ನನಸಾಗಿದೆ. ಇದುವರೆಗೆ ೫೦,೦೦೦ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಸರಕಾರಿ/ ಅರೆ ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದುಕೊಂಡು ಬದುಕನ್ನು ಕಟ್ಟಿಕೊಂಡಿದ್ದಾರೆ. ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಕುರಿತಂತೆ ಅವರದ್ದೇ ಆದ ರೀತಿಯಲ್ಲಿ ಕಾಣಿಕೆ ನೀಡಿದ್ದಾರೆ. ಇದು ನಿಜವಾದ ಅರ್ಥದಲ್ಲಿ ಎಚ್ಚೆಸ್ಕೆ ಯವರಿಗೆ ಹಾಗೂ ಅವರ ಹೆಸರಿನ ಪ್ರಶಸ್ತಿಗೆ ಗೌರವ ನೀಡಿದಂತಾಗಿದೆ ಎಂದರು.
ವೇದಿಕೆಯಲ್ಲಿ ಭೇರ್ಯ ರಾಮಕುಮಾರ, ಕವಿಯತ್ರಿ ಲತಾ ರಾಜಶೇಖರ, ಡಾ ಪುಷ್ಪಾ ಅಯ್ಯಂಗಾರ್, ಕೆ.ಎಸ್. ಮಹಾಬಲ ಉಪಸ್ಥಿತರಿದ್ದರು