ಸುಂಟಿಕೊಪ್ಪ, ಏ. ೨೦: ಹರದೂರು ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡದವರಿಗೆ ಸರಕಾರದಿಂದ ಶೇ. ೨೫ರಷ್ಟು ಅನುದಾನದಲ್ಲಿ ಮತ್ತು ವಿಶೇಷ ಚೇತನರಿಗೆ ಶೇಖಡ ೫ರ ಅನುದಾನದಲ್ಲಿ ೫೦೦ ಲೀಟರ್ ಸಾಮರ್ಥ್ಯದ ೨೦ ಸಿಂಟೆಕ್ಸ್ ನೀರಿನ ಟ್ಯಾಂಕು, ಟೈಲರಿಂಗ್ ಮಿಷನ್‌ಗೆ ಸಹಾಯ ಧನ, ಗ್ಯಾಸ್ ಸಿಲಿಂಡರ್ ಸ್ಟೌವ್, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಡಿ.ಪದ್ಮನಾಭ್, ಉಪಾಧ್ಯಕ್ಷೆ ಬೋಜಮ್ಮ, ಸದಸ್ಯರುಗಳಾದ ಸುಬ್ಬಯ್ಯ. ಉಷಾ, ರಮೇಶ್, ಸೌಮ್ಯ, ಅಬ್ದುಲ್ ಸಲಾಂ, ಮುಸ್ತಾಫ, ಕುಸುಮ, ಉಷಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮ ಸಿಬ್ಬಂದಿಗಳು ಇದ್ದರು.