ಸೋಮವಾರಪೇಟೆ, ಏ. ೨೦: ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘದ ೮ನೇ ವರ್ಷದ ವಾರ್ಷಿಕ ಸಭೆ ಹಾಗೂ ಸಂತೋಷ ಕೂಟ ಸಮಾರಂಭ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನಿವೃತ್ತ ಕರ್ನಲ್ ಬಿ.ಕೆ. ಅಣ್ಣಯ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ವಹಿಸಿದ್ದರು. ಉಪಾಧ್ಯಕ್ಷ ಎಸ್.ಎಂ. ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಆರ್.ಜಿ. ಬಸಪ್ಪ, ಖಜಾಂಚಿ ಎಂ.ಕೆ. ಸುಕುಮಾರ್ ಮತ್ತಿತರರು ಇದ್ದರು.
ಇದೇ ಸಂದರ್ಭ ಸಂಘದ ಸದಸ್ಯರಾದ ಎನ್.ಯು. ಚಂದ್ರಕುಮಾರ್, ಎಚ್.ಓ. ಬೋಪಯ್ಯ, ಎನ್.ಟಿ. ಪುಟ್ಟಪ್ಪ, ಡಿ.ಎನ್. ಬೋಜಮ್ಮ ಹಾಗೂ ಎಂ.ಡಿ. ಸೀತಮ್ಮ ಅವರುಗಳನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.