ಸಿದ್ದಾಪುರ, ಏ. ೨೦: ಜೆಡಿಎಸ್ ಜನತಾ ಜಲಧಾರೆ ರಥಯಾತ್ರೆಗೆ ನೆಲ್ಲಿಹುದಿಕೇರಿಯಲ್ಲಿ ಸ್ವಾಗತ ದೊರೆಯಿತು. ರಥವನ್ನು ನೆಲ್ಲಿಹುದಿಕೇರಿಯ ಜೆಡಿಎಸ್ ಮುಖಂಡರುಗಳು ಬರಮಾಡಿಕೊಂಡರು.

ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ರಥಯಾತ್ರೆಯ ಕುರಿತು ಮಾತನಾಡಿದರು. ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ ಎಲ್ ವಿಶ್ವ ಮಾತನಾಡಿ, ಜೆಡಿಎಸ್ ಪಕ್ಷದ ಜನಪ್ರಿಯ ಯೋಜನೆಗಳು ಜನಸಾಮಾನ್ಯರ ಮನಸ್ಸಲ್ಲಿ ಇಂದಿಗೂ ನೆಲೆಸಿದೆ. ಯುವಕರು ರಾಷ್ಟಿçÃಯ ಪಕ್ಷಗಳ ರಾಜಕೀಯ ಚದುರಂಗದಾಟಕ್ಕೆ ಬಲಿಯಾಗಿ ಧರ್ಮದ ಹೆಸರಿನಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಪ್ರಮುಖರಾದ ಜೆಡಿಎಸ್ ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷ ಶಿವದಾಸ್, ಯುವ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರತ್ ಹೆಬ್ಬಾಳೆ, ಶರತ್ ನೆಲ್ಲಿಹುದಿಕೇರಿ, ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ತ್ರಿನೇಶ್, ಜೆಡಿಎಸ್ ಸೋಮವಾರಪೇಟೆ ತಾಲೂಕು ಅಧ್ಯಕ್ಷ ನಾಗರಾಜ್ ಪ್ರಮುಖರಾದ ಆಲ್ವಿನ್ ಅಬಿ ಇನ್ನಿತರರು ಹಾಜರಿದ್ದರು.ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಉಪಾಧ್ಯಕ್ಷ ಶಿಹಾಬುದ್ದೀನ್ ತಂಙಳ್ ವಿಪಿಎಸ್ ಸ್ವಾಗತಿಸಿ ವಂದಿಸಿದರು.