ನಾಪೋಕ್ಲು, ಏ. ೧೯: ಲಯನ್ಸ್ ಸಂಸ್ಥೆಯು ಪ್ರತಿಭಾ ಪುರಸ್ಕಾರದಂತಹ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸ್ಥಳೀಯ ಘಟಕವು ಸ್ಪರ್ಧಾ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಲಯನ್ಸ್ ರಾಜ್ಯಪಾಲ ವಸಂತ ಶೆಟ್ಟಿ ಹೇಳಿದರು.
ನಾಪೋಕ್ಲು ಲಯನ್ಸ್ ಸಂಸ್ಥೆ ಏರ್ಪಡಿಸಿದ್ದ ರಾಜ್ಯಪಾಲರ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭ ಚಿತ್ರಕಲೆ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಚಿತ್ರಕಲೆಯಲ್ಲಿ ಚೆರುವಾಳಂಡ ಅನನ್ಯ ಅಯ್ಯಪ್ಪ ಜಯಗಳಿಸಿ ರಾಜ್ಯಪಾಲರಿಂದ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಸ್ವೀಕರಿಸಿದರು. ನೂತನವಾಗಿ ಸಂಸ್ಥೆಗೆ ಸೇರ್ಪಡೆಗೊಂಡ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ಎಂ. ಕುಟ್ಟಪ್ಪ ಅವರುಗಳನ್ನು ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಕುರ್ ಶಾಲೆಯ ಶಿಕ್ಷಕರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಜಾಲಿ ಬೋಪಯ್ಯ ರಾಜ್ಯಪಾಲರಿಗೆ ಅಭಿನಂದನಾ ಪ್ರಶಸ್ತಿ ಪತ್ರವನ್ನು ನೀಡಿದರು. ಕುಂಡ್ಯೋಳAಡ ರಮೇಶ್ ಮುದ್ದಯ್ಯ ಮಾತನಾಡಿದರು.
ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಮುಕ್ಕಾಟಿರ ನವೀನ್, ಡಾ. ಪಂಚಮ್ ತಿಮ್ಮಯ್ಯ, ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ ಪೂಜಾರಿ, ಜಿಲ್ಲಾ ಸಂಪರ್ಕಾಧಿಕಾರಿ ಜಯರಾಂ, ಪ್ರಾಂಥೀಯ ಅಧ್ಯಕ್ಷ ಧನು ಉತ್ತಯ್ಯ, ಪ್ರಾಂತೀಯ ಮಾರ್ಗದರ್ಶಿ ನವೀನ್ ಅಂಬೆಕಲ್, ವಲಯ ಮಾರ್ಗದರ್ಶಿ ತ್ರಿಶುಗಣಪತಿ, ಕಾರ್ಯದರ್ಶಿ ಕೆಟೋಳಿರ ರತ್ನ ಚರ್ಮಣ, ಕೆ.ಎಸ್. ಕುಟ್ಟಪ್ಪ ಇದ್ದರು. ಇದಕ್ಕೂ ಮೊದಲು ರಾಜ್ಯಪಾಲರು ಬೇತು ರಸ್ತೆಯಲ್ಲಿ ಅಳವಡಿಸಿರುವ ಹರದಾಸ ಅಪ್ಪಚ್ಚಕವಿ ರಸ್ತೆಯ ನಾಮಫಲಕವನ್ನು ಉದ್ಘಾಟಿ ಸಿದರು. ನಾಪೋಕ್ಲು ಲಯನ್ಸ್ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ರೇಖಾ ಪೊನ್ನಣ್ಣ ಪ್ರಾರ್ಥಿಸಿದರು. ಕೆ.ಎಂ. ಮುತ್ತಪ್ಪ ಧ್ವಜವಂದನೆ ನೆರವೇರಿಸಿದರು. ಎಂ.ಎA. ವಿನಯ್ ಸ್ವಾಗತಿಸಿದರು. ರತ್ನಚರ್ಮಣ ವರದಿ ವಾಚಿಸಿದರು, ಅತಿಥಿಗಳ ಪರಿಚಯವನ್ನು ರೇಷ್ಮಾ ಉತ್ತಪ್ಪ ಮಾಡಿದರು.