ಮಡಿಕೇರಿ, ಏ. ೧೯: ೭ನೇ ಹೊಸಕೋಟೆಯ ಅಬ್ರುಬಾಣೆ, ತೊಂಡೂರು ಗ್ರಾಮದ ಶ್ರೀ ಅಮ್ಮ ರಾಜಾರಾಜೇಶ್ವರಿ ದೇವಸ್ಥಾನದ ೧೪ನೇ ವರ್ಷದ ವಾರ್ಷಿಕೋತ್ಸವ ತಾ. ೩೦ ಹಾಗೂ ಮೇ ೧ರಂದು ನಡೆಯಲಿದೆ.
ತಾ. ೩೦ರಂದು ಸಂಜೆ ೫ಕ್ಕೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ನಾಗದೇವರ ಸನ್ನಿಧಾನದಲ್ಲಿ ಬಿಂಬ ಶುದ್ಧಿ, ವಾಸ್ತು ಪೂಜೆ, ರಾಕ್ಷೆÆÃಘ್ನ ಹೋಮ, ಶಯ್ಯಾ ಪೂಜೆ, ಸುದರ್ಶನ ಹೋಮ, ದುರ್ಗಾ ಪೂಜೆ, ಮಹಾರಂಗ ಪೂಜೆ, ಮೇ ೧ರಂದು ಬೆಳಿಗ್ಗೆ ೬ಕ್ಕೆ ಮಹಾಗಣಪತಿ ಹೋಮ, ನಾಗದೇವರ ಸನ್ನಿಧಿಯಲ್ಲಿ ಸರ್ಪ ಮಂತ್ರ ಹೋಮ, ೭.೩೦ಕ್ಕೆ ನಾಗ ಪ್ರತಿಷ್ಠೆ, ಆಶ್ಲೇಷ ಬಲಿ, ದುರ್ಗಾಹೋಮ, ನವಕ ಕಲಶ ಹೋಮ, ಶ್ರೀ ರಾಜರಾಜೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ ಸಹಿತ ಕಲಶಾಭಿಷೇಕ ಮಹಾಪೂಜೆ ಜೊತೆಗೆ ೨ ದಿನವೂ ಕೂಡ ಅನ್ನದಾನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.