ಸುಂಟಿಕೊಪ್ಪ, ಏ. ೧೯: ಸರಕಾರ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ಜನಸ್ಪಂದನ ಕಾರ್ಯಕ್ರಮ ಆಯೋಜಿ ಸಿದ್ದು ಇದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಕರ್ಯ ಲಭಿಸಲಿದೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರರಾದ ಪ್ರಕಾಶ್ ಹೇಳಿದರು.
ಸುಂಟಿಕೊಪ್ಪದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಕುಶಾಲನಗರ ತಾಲೂಕು ಕಚೇರಿ, ಕಂದಾಯ ಇಲಾಖೆ, ಸುಂಟಿ ಕೊಪ್ಪ ನಾಡಕಚೇರಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸ ಲಾಗಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಭೂಮಿ ಸಮಸ್ಯೆ, ಪೌತಿಖಾತೆ ವರ್ಗಾವಣೆ, ಸಂಧ್ಯಾ ಸುರಕ್ಷಾ ಯೋಜನೆ, ವಿಧವವೇತನ, ಜಾತಿ ಆದಾಯ ದೃಢೀಕರಣ ಪತ್ರ, ಪಡಿತರ ಚೀಟಿ ಮೊದಲಾದವುಗಳನ್ನು ಜನಸಾಮಾನ್ಯರಿಗೆ ಸ್ಥಳದಲ್ಲೇ ಒದಗಿಸಿ ಕೊಡುವುದು. ಸಾಧ್ಯವಾಗದಿದ್ದಲ್ಲಿ ಕಚೇರಿಯಲ್ಲಿ ಪರಿಶೀಲಿಸಿ ಪರಿಹಾರ ಒದಗಿಸಿಕೊಡುವ ಜನೋಪಯೋಗಿ ಕಾರ್ಯಕ್ರಮ ಇದಾಗಿದ್ದು ಇದರ ಉಪಯೋಗವನ್ನು ಸರ್ವರೂ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಸುಂಟಿಕೊಪ್ಪ ನಾಡ ಕಚೇರಿಯ ಉಪ ತಹಶೀಲ್ದಾರ್ ಹೆಚ್.ಕೆ. ಶಿವಪ್ಪ ಮಾತನಾಡಿ, ಸುಂಟಿಕೊಪ್ಪ, ಉಲುಗುಲಿ ಹಾಗೂ ನಾರ್ಗಾಣೆ ಗ್ರಾಮ ವ್ಯಾಪ್ತಿಯ ಜನತೆಯ ಅಹವಾಲು ಸ್ವೀಕರಿಸಲು ಅವರ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಂದಾಯ ಕಚೆೆÃರಿಗೆ ತೆರಳುವ ಬದಲು ಸ್ಥಳದಲ್ಲೇ ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಾಗುವುದು ಗ್ರಾಮಇನ್ ೧ ಮುಖಾಂತರವೂ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಸುಂಟಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಸ್ವಾತಂತ್ರö್ಯ ಬಂದು ೭೫ ವರ್ಷವಾದರೂ ತಮ್ಮ ವಾರ್ಡಿನ ೧೦ ಮಂದಿಗೆ ರಸ್ತೆ ಭಾಗ್ಯ ಸಿಗಲಿಲ್ಲ. ಓರ್ವ ಮಹಿಳೆಗೆ ಆಧಾರ್ ಕಾರ್ಡ್ ತಿದ್ದುಪಡಿಗೆ ಹಲವು ಬಾರಿ ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ. ಇದಕ್ಕೆ ಪರಿಹಾರ ಕೊಡಿ ಎಂದರು. ತಹಶೀಲ್ದಾರರು ಈ ಬಗ್ಗೆ ಪರಿಶೀಲಿಸಿ ನ್ಯಾಯ ಒದಗಿಸುವುದಾಗಿ ಹೇಳಿದರು.
ಮತದಾರರ ಗುರುತಿನ ಚೀಟಿ ಪರಿಷ್ಕರಣೆ ತಿದ್ದುಪಡಿ ಸರಿಯಾಗಿ ನಡೆಯುತ್ತಿಲ್ಲ.
ವಾಸದೃಢೀಕರಣ ಪತ್ರ ನೀಡುವ ಗೊಂದಲದಿAದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ನಾರ್ಗಾಣೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನದ ಕೊರತೆಯುಂಟಾಗಿದ್ದು ಅದನ್ನು ಕಟ್ಟಡ ನಿರ್ಮಿಸಲು ಸರಕಾರಿ ಭೂಮಿಯನ್ನು ಗುರುತಿಸಿ ಕೊಡುವಂತೆ ಗ್ರಾ.ಪಂ. ಸದಸ್ಯ ಪಿ.ಆರ್. ಸುನಿಲ್ ಕುಮಾರ್ ಗಮನ ಸೆಳೆದರು.
ಸುಂಟಿಕೊಪ್ಪ ಟೌನ್ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು ೧೨೦ ನಿವೇಶನಗಳು ದಾಖಲಾತಿಗಳು ದುರಸ್ತಿಯಾಗಿಲ್ಲ. ಕಂದಾಯ ಇಲಾಖೆಯಲ್ಲಿ ದುರಸ್ತಿ ಕಾರ್ಯಕ್ಕೆ ಅರ್ಜಿ ಸಲ್ಲಿಸಿದರೆ ಆಕಾರ್ ಬಂದಿ ಮತ್ತು ನಕಾಶೆ ಲಗತ್ತಿಸುವಂತೆ ಸೂಚಿಸುತ್ತಾರೆ. ಆದರೆ ಆಕಾರ್ ಬಂದಿಗೆ ಅರ್ಜಿ ಸಲ್ಲಿಸಿದರೆ ಅಧಿಕೃತ ಆಕಾರ್ ಬಂದಿ ಇಲ್ಲವೆಂದು ಹಿಂಬರಹ ನೀಡಲಾಗುತ್ತಿದೆ. ಹೀಗಾಗಿ ಈ ಭಾಗದ ನಿವಾಸಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಸರಕಾರವು ನೀಡಿರುವ ಆದೇಶದಂತೆ ನೂತನವಾಗಿ ನಮೂನೆ ೯ ಮತ್ತು ೧೧ ಎ ದಾಖಲಾತಿ ಯನ್ನು ಪಡೆದುಕೊಳ್ಳಬೇಕಾದರೆ ಪ್ರತಿ ನಿವೇಶದ ನಕಾಶೆ ಆಕಾರ್ ಕಡ್ಡಾಯವಾಗಿ ನೀಡಬೇಕಾಗಿರುತ್ತದೆ. ಹೀಗಾಗಿ ಹಲವಾರು ದಶಕಗಳಿಂದ ಸೂರು ನಿರ್ಮಿಸಿಕೊಂಡು ನೆಲೆಸಿರುವ ಸುಂಟಿಕೊಪ್ಪ ಟೌನ್ನಲ್ಲಿ ಆರ್ಟಿಸಿ ಹೊಂದಿರುವ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ನಮೂನೆ ೯ ಮತ್ತು ೧೧ಎ ಪಡೆದುಕೊಳ್ಳಲು ಅಸಾಧ್ಯವಾಗಲಿದೆ ಎಂದು ಗ್ರಾ.ಪಂ. ಸದಸ್ಯ ಪಿ.ಎಫ್. ಸೆಬಾಸ್ಟಿಯನ್ ಗಮನ ಸೆಳೆದರು.
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಆರ್ಟಿಸಿ ದಾಖಲೆಯಲ್ಲಿ ಮನೆ ದಳವೆಂದು ನಮೂದುಗೊಂಡಿರುತ್ತದೆ. ಗಮನ ಸೆಳೆದರು.
ಸುಂಟಿಕೊಪ್ಪ ಟೌನ್ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು ೧೨೦ ನಿವೇಶನಗಳು ದಾಖಲಾತಿಗಳು ದುರಸ್ತಿಯಾಗಿಲ್ಲ. ಕಂದಾಯ ಇಲಾಖೆಯಲ್ಲಿ ದುರಸ್ತಿ ಕಾರ್ಯಕ್ಕೆ ಅರ್ಜಿ ಸಲ್ಲಿಸಿದರೆ ಆಕಾರ್ ಬಂದಿ ಮತ್ತು ನಕಾಶೆ ಲಗತ್ತಿಸುವಂತೆ ಸೂಚಿಸುತ್ತಾರೆ. ಆದರೆ ಆಕಾರ್ ಬಂದಿಗೆ ಅರ್ಜಿ ಸಲ್ಲಿಸಿದರೆ ಅಧಿಕೃತ ಆಕಾರ್ ಬಂದಿ ಇಲ್ಲವೆಂದು ಹಿಂಬರಹ ನೀಡಲಾಗುತ್ತಿದೆ. ಹೀಗಾಗಿ ಈ ಭಾಗದ ನಿವಾಸಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಸರಕಾರವು ನೀಡಿರುವ ಆದೇಶದಂತೆ ನೂತನವಾಗಿ ನಮೂನೆ ೯ ಮತ್ತು ೧೧ ಎ ದಾಖಲಾತಿ ಯನ್ನು ಪಡೆದುಕೊಳ್ಳಬೇಕಾದರೆ ಪ್ರತಿ ನಿವೇಶದ ನಕಾಶೆ ಆಕಾರ್ ಕಡ್ಡಾಯವಾಗಿ ನೀಡಬೇಕಾಗಿರುತ್ತದೆ. ಹೀಗಾಗಿ ಹಲವಾರು ದಶಕಗಳಿಂದ ಸೂರು ನಿರ್ಮಿಸಿಕೊಂಡು ನೆಲೆಸಿರುವ ಸುಂಟಿಕೊಪ್ಪ ಟೌನ್ನಲ್ಲಿ ಆರ್ಟಿಸಿ ಹೊಂದಿರುವ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ನಮೂನೆ ೯ ಮತ್ತು ೧೧ಎ ಪಡೆದುಕೊಳ್ಳಲು ಅಸಾಧ್ಯವಾಗಲಿದೆ ಎಂದು ಗ್ರಾ.ಪಂ. ಸದಸ್ಯ ಪಿ.ಎಫ್. ಸೆಬಾಸ್ಟಿಯನ್ ಗಮನ ಸೆಳೆದರು.
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಆರ್ಟಿಸಿ ದಾಖಲೆಯಲ್ಲಿ ಮನೆ ದಳವೆಂದು ನಮೂದುಗೊಂಡಿರುತ್ತದೆ. ಕುಮಾರ್, ತೋಟಗಾರಿಕಾ ಇಲಾಖೆ ಅಧಿಕಾರಿ, ಸೆಸ್ಕ್ ಇಲಾಖೆ ಅಧಿಕಾರಿ ಮಂಜುನಾಥ, ಆಹಾರ ಇಲಾಖೆಯ ನಿರೀಕ್ಷಕಿ ಸ್ವಾತಿ ಮಾಹಿತಿ ನೀಡಿದರು.
ಈ ಸಭೆಯಲ್ಲಿ ನಾಡಕಚೇರಿಯ ಕಂದಾಯ ಪರಿವೀಕ್ಷಕ ಪ್ರಶಾಂತ್, ಗ್ರಾಮ ಲೆಕ್ಕಿಗರುಗಳಾದ ನಾಗೇಂದ್ರ, ರೂಪಶ್ರೀ, ನಸೀಮ ಹಾಗೂ ಗ್ರಾಮ ಸಹಾಯಕರು ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.
ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಜನಸ್ಪಂದನ ಸಭೆಗೂ ಮೊದಲು ಗ್ರಂಥಾಲಯ ಮುಂಭಾಗ ಮತ್ತು ನಾಡಕಚೆÉÃರಿಗೆ ತೆರಳುವ ಮಾರ್ಗ ಬದಿಯಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಮತ್ತು ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸುಂಟಿಕೊಪ್ಪ ನಾಡ ಕಚೆÉÃರಿಯ ಉಪ ತಹಶೀಲ್ದಾರ್ ಹೆಚ್.ಕೆ. ಶಿವಪ್ಪ, ಕಂದಾಯ ಪರಿವೀಕ್ಷಕ ಪ್ರಶಾಂತ್, ಗ್ರಾಮಲೆಕ್ಕಿಗರುಗಳಾದ ನಾಗೇಂದ್ರ, ರೂಪಶ್ರೀ, ನಸೀಮ ಹಾಗೂ ಗ್ರಾಮ ಸಹಾಯಕರು ಪಂಚಾಯಿತಿ ಸಿಬ್ಬಂದಿಗಳು ಪೌರಕಾರ್ಮಿಕರು ಇದ್ದರು.