ಗೋಣಿಕೊಪ್ಪ ವರದಿ, ಏ. ೧೮: ಹಾಕಿ ಇಂಡಿಯಾ ವತಿಯಿಂದ ಮಧ್ಯಪ್ರದೇಶದ ಭೂಪಾಲ್ನ ಧ್ಯಾನ್ಚಂದ್ ಕ್ರೀಡಾಂಗಣದಲ್ಲಿ ನಡೆದ ೧೨ ನೇ ರಾಷ್ಟಿçÃಯ ಪುರುಷರ ಹಾಕಿ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡವು ಕಂಚಿಗೆ ಮುತ್ತಿಕ್ಕಿದೆ.
ಮೂರನೇ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಹಾಕಿ ಮಹಾರಾಷ್ಟçವನ್ನು ೪-೩ ಗೋಲುಗಳಿಂದ ಮಣಿಸಿತು. ೧೨ ನೇ ನಿಮಿಷದಲ್ಲಿ ಆರ್. ಪುನೀತ್, ೨೩ ರಲ್ಲಿ ಬಿ. ಯತೀಶ್ಕುಮರ್, ೪೭ ರಲ್ಲಿ ಎಸ್.ಪಿ. ದೀಕ್ಷಿತ್ ಪೆನಾಲ್ಟಿ ಸ್ಟೊçÃಕ್ ಅನ್ನು ಗೋಲಾಗಿ ಪರಿವರ್ತಿಸಿದರು. ೫೨ ರಲ್ಲಿ ಐನಂಡ ಆರ್. ನಾಚಪ್ಪ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಗೆಲುವಿನ ರೂವಾರಿಯಾದರು.
ಸೆಮಿಫೈನಲ್ ನಲ್ಲಿ ತಮಿಳುನಾಡು ತಂಡದೊAದಿಗೆ ಸೋಲನುಭವಿಸಿ, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ರಾಜ್ಯ ತಂಡದ ೧೮ ಆಟಗಾರರಲ್ಲಿ ಕೊಡಗು ಜಿಲ್ಲೆಯ ೧೨ ಆಟಗಾರರು ತಂಡದಲ್ಲಿದ್ದರು. ಕುಂದೀರ ಪಿ. ಶರತ್ ಸೋಮಣ್ಣ ಗೋಲ್ ಕೀಪರ್, ಉಳಿದಂತೆ ಮುಕ್ಕಾಟೀರ ಆರ್. ಮುತ್ತಣ್ಣ, ಬಿ. ಎಂ. ಲಿಖಿತ್, ಬೊಳ್ಯಪಂಡ ಪಿ. ಸೋಮಣ್ಣ, ಜೆ. ಪಿ. ಕುಶ, ನಾಯಮಾಡ ಚಿರಂತ್ ಸೋಮಣ್ಣ, ಐನಂಡ ಆರ್. ನಾಚಪ್ಪ, ಸಿ. ಎಸ್. ಶಮಂತ್, ಬಿದ್ದಾಟಂಡ ಚೆಲ್ಸಿ ಮೇದಪ್ಪ, ಯತೀಶ್ಕುಮಾರ್, ಸೂರ್ಯ, ದೀಕ್ಷಿತ್, ತರಬೇತುದಾರರಾಗಿ ಕೂತಂಡ ಕೆ. ಪೂಣಚ್ಚ, ವ್ಯವಸ್ಥಾಪಕರಾಗಿ ಕರ್ತಮಾಡ ನಿಖಿ ಗಣಪತಿ ಕಾರ್ಯನಿರ್ವಹಿಸಿದ್ದರು.