ನಾಪೋಕ್ಲು, ಏ. ೧೮: ನಾಪೋಕ್ಲು ಗ್ರಾಮ ಪಂಚಾಯಿತಿಯ ಕಂದಾಯ ಗ್ರಾಮಸಭೆಯು ತಾ. ೧೯ ರಂದು (ಇಂದು) ನಾಪೋಕ್ಲು ಕೊಡವ ಸಮಾಜದಲ್ಲಿ ನಡೆಯಲಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎಸ್. ಪಾರ್ವತಿ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳ ಸಭೆ ನಡೆಯಲಿದೆ.
ನಾಪೋಕ್ಲು ಗ್ರಾಮ ಪಂಚಾಯಿತಿಯ ಕಂದಾಯ ಗ್ರಾಮಸಭೆಯು ತಾ. ೧೯ ರಂದು (ಇಂದು) ಬೇತು ಗ್ರಾಮದ ದÀವಸಭಂಡಾರದ ಕಟ್ಟಡದಲ್ಲಿ ಮಧ್ಯಾಹ್ನ ೨.೩೦ ಗಂಟೆಗೆ ನಡೆಯಲಿದೆ. ಕೊಳಕೇರಿ ಗ್ರಾಮದ ಕಂದಾಯ ಗ್ರಾಮಸಭೆಯು ತಾ. ೨೦ ರಂದು ಗ್ರಾಮದ ಕನ್ನಂಬೀರ ಸುಧಿ ತಿಮ್ಮಯ್ಯ ಅವರ ಕಣದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯಲಿದೆ.