ಕುಶಾಲನಗರ, ಏ. ೧೭: ಕುಶಾಲನಗರ ಸಮೀಪದ ಯಡವನಾಡು ಗ್ರಾಮದ ಶ್ರೀ ಶಿವ ಬಸವೇಶ್ವರ ದೇವಾಲಯದಲ್ಲಿ ವಾರ್ಷಿಕ ಮಹಾಪೂಜೆ ಜರುಗಿತು.
ಗ್ರಾಮದ ಬಸವೇಶ್ವರ ದೇವಾಲಯವನ್ನು ಸಿಂಗರಿಸುವು ದರೊಂದಿಗೆ ಎರಡು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳು ಜರಗಿದವು. ಭಾನುವಾರ ಪ್ರಾರಂಭ ಗೊಂಡ ಪೂಜಾ ಕಾರ್ಯಕ್ರಮದಲ್ಲಿ ಗಣಪತಿ ಹೋಮ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ನಂತರ ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಶ್ರೀ ಶಿವಬಸವೇಶ್ವರ ದೇವಾಲಯ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಬೆಳಿಗ್ಗೆ ರಂಗಪೂಜೆ, ಕಲಶ ಮೆರವಣಿಗೆ ನಂತರ ಅಭಿಷೇಕ ಪೂಜೆ, ರುದ್ರಹೋಮ ನವಗ್ರಹ ಹೋಮ ನಂತರ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ದೇವಾಲಯದ ವಾರ್ಷಿಕೋತ್ಸವ ಅಂಗವಾಗಿ ಪ್ರತಿ ಮನೆಯಿಂದ ಭಕ್ತಾದಿಗಳು ದೇವತಾಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹೆಣ್ಣುಮಕ್ಕಳು ಕಲಶವನ್ನು ಹೊತ್ತು ದೇವಾಲಯಕ್ಕೆ ಮೆರವಣಿಗೆ ಮೂಲಕ ತೆರಳಿದರು. ದೇವಾಲಯದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಧ್ಯಮಾಂಸ ಸೇವನೆಗೆ ನಿರ್ಬಂಧದೊAದಿಗೆ ಭಕ್ತಾದಿಗಳು ಶಿವನ ಕೃಪೆಗೆ ಪಾತ್ರರಾದರು.
ದೇವಾಲಯದ ಕಟ್ಟುಪಾಡುಗಳ ನಡುವೆ ಗ್ರಾಮದಲ್ಲಿ ಪ್ರತಿಯೊಬ್ಬರು ಎರಡು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು.
ದೇವಾಲಯ ಸೇವಾ ಸಮಿತಿಯ ಅಧ್ಯಕ್ಷರಾದ ಕೆ.ಎಂ. ಗಣೇಶ್, ಉಪಾಧ್ಯಕ್ಷ ಡಿ.ಪಿ. ಕುಟ್ಟಪ್ಪ, ಖಜಾಂಚಿ ಪಿ.ಟಿ. ಭಾನುಪ್ರಕಾಶ್, ಸ್ಥಳೀಯ ಶ್ರೀ ಶಿವಬಸವೇಶ್ವರ ಯುವಕ ಸಂಘ ಮತ್ತಿತರ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಸದಸ್ಯರು ಮತ್ತು ಸ್ಥಳೀಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.